ಒಳಉಡುಪಿಲ್ಲದೇ ಫೋಟೋ ತೆಗೆಸುವ ಧೈರ್ಯ ಸೌತ್ ನಟಿಯರಿಗಿಲ್ಲ ಎಂದವನಿಗೆ ಮುಟ್ಟಿ ನೋಡುಕೊಳ್ಳುವಂಥ ಉತ್ತರ ಕೊಟ್ಟ ನಟಿ!

ಇತ್ತೀಚೆಗಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದು ಕಾಮನ್. ಕೇವಲ ತೆರೆ ಮೇಲೆ ಮಿಂಚುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಹ ತಮ್ಮ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಮನರಂಜನೆ ನೀಡುತ್ತಿರುತ್ತಾರೆ.

ಇನ್ನು ಈಗಿನ ನಟಿಯರು ಸಾಲು ಸಾಲು ಫೋಟೊಶೂಟ್‌ಗಳನ್ನು ಮಾಡಿಸುವುದು ಕಾಮನ್. ಕೆಲ ನಟಿಯರು ತೆರೆ ಮೇಲೆ ಯಾವ ರೀತಿಯ ಪಾತ್ರಗಳಲ್ಲಿ ನಟಿಸುತ್ತಾರೋ ಅದೇ ಮಾದರಿಯ ಫೋಟೊಗಳನ್ನು ಪೋಸ್ಟ್ ಮಾಡಿ ಉತ್ತಮ ಕಾಮೆಂಟ್ ಗಿಟ್ಟಿಸಿಕೊಂಡರೆ, ಇನ್ನೂ ಕೆಲವರು ಹಾಟ್ ಫೋಟೊಶೂಟ್‌ಗಳನ್ನು ಮಾಡಿಸಿ ನೆಟ್ಟಿಗರು ಆಶ್ಚರ್ಯಕ್ಕೊಳಗಾಗುವಂತೆ ಮಾಡುತ್ತಾರೆ.

Actress Sakshi Agarwal slams a netizen who ask her to do photoshoot without innerwear

ಹೀಗೆ ನಟಿಯರು ಹಾಟ್ ಫೋಟೊಸ್ ಹಂಚಿಕೊಳ್ಳುವ ನಟಿಯರಿಗೆ ಕಾಮೆಂಟ್‌ಗಳು ಸಾಲು ಸಾಲಾಗಿ ಹರಿದು ಬರುವುದು ಕಾಮನ್. ತಮ್ಮ ಫೋಟೊಗಳಿಗೆ ಬರುವ ಸಾವಿರಾರು ಕಾಮೆಂಟ್‌ಗಳಲ್ಲಿ ಕೆಲವು ಕಾಮೆಂಟ್‌ಗಳು ಒಳ್ಳೆಯ ರೀತಿಯಲ್ಲಿ ಇದ್ದರೆ, ಇನ್ನೂ ಕೆಲ ಕಾಮೆಂಟ್‌ಗಳು ಮುಜುಗರಕ್ಕೊಳಗಾಗುವ ರೀತಿಯಲ್ಲಿ ಇರುತ್ತವೆ ಹಾಗೂ ತೀರ ಅಸಹ್ಯವೆನಿಸುವ ರೀತಿಯಲ್ಲಿಯೂ ಸಹ ಇರುತ್ತವೆ.

ಹೀಗಾಗಿ ಸಾಮಾನ್ಯವಾಗಿ ಗ್ಲಾಮರಸ್ ಅಥವಾ ಹಾಟ್ ಫೋಟೊಗಳನ್ನು ಹಂಚಿಕೊಂಡಾಗ ನಟಿಯರು ಕಾಮೆಂಟ್ ಆಪ್ಷನ್ ಅನ್ನು ಆಫ್ ಮಾಡಿಬಿಟ್ಟಿರುತ್ತಾರೆ. ಆದರೆ ಕೆಲ ನಟಿಯರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇದ್ದರೆ, ಇನ್ನೂ ಕೆಲ ನಟಿಯರು ಕಾಮೆಂಟ್‌ಗಳನ್ನು ನೋಡಿ ಅದಕ್ಕೆ ಪ್ರತಿಕ್ರಿಯಿಸುವ ಹವ್ಯಾಸ ಇಟ್ಟುಕೊಂಡಿರುತ್ತಾರೆ.

ಕೆಲವೊಮ್ಮೆ ನೆಟ್ಟಿಗರು ಮಾಡುವ ಅತಿಯಾದ ಕಾಮೆಂಟ್ ಸೆಲೆಬ್ರಿಟಿಗಳನ್ನು ಅದಕ್ಕೆ ಪ್ರತಿಕ್ರಿಯಿಸುವ ಹಾಗೆ ಮಾಡಿಬಿಡುತ್ತವೆ. ಅಂತಹದ್ದೇ ಕಾಮೆಂಟ್ ನಟಿ ಸಾಕ್ಷಿ ಅಗರ್ವಾಲ್‌ಗೂ ಸಹ ಬಂದಿದೆ. ಹೌದು, ಇತ್ತೀಚೆಗಷ್ಟೇ ನಟಿ ಸಾಕ್ಷಿ ಅಗರ್ವಾಲ್ ಪಿಂಕ್ ಕೋಟ್ ಹಾಗೂ ಪರದೆ ಶರ್ಟ್ ಧರಿಸಿ ಮಾಡಿಸಿದ್ದ ನೂತನ ಫೋಟೊಶೂಟ್‌ನ ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಫೋಟೊಗೆ ನೆಟ್ಟಿಗನೋರ್ವ 'ದಕ್ಷಿಣ ಭಾರತದ ನಟಿಯರಿಗೆ ಒಳಉಡುಪು ಇಲ್ಲದೇ ಫೋಟೊಶೂಟ್ ಮಾಡಿಸುವ ಧೈರ್ಯ ಇಲ್ಲ' ಎಂದು ನಗುತ್ತಾ ಕಾಮೆಂಟ್ ಮಾಡಿದ್ದ. ಇದಕ್ಕೆ ತಕ್ಕ ಉತ್ತರವನ್ನು ನೀಡಿರುವ ಸಾಕ್ಷಿ ಅಗರ್ವಾಲ್ "ಏಕೆಂದರೆ ದಕ್ಷಿಣ ಭಾರತದ ನಟಿಯರಾದ ನಾವು ಪ್ರತಿಭೆ ಮೇಲೆ ನಂಬಿಕೆ ಇಡುತ್ತೇವೆ ಹೊರತು ಸ್ಕಿನ್ ಶೋ ಮೇಲಲ್ಲ" ಎಂದು ರಿಪ್ಲೇ ಮಾಡಿ ಕೌಂಟರ್ ನೀಡಿದ್ದರು.

ಹೀಗೆ ಸೌತ್ ಇಂಡಸ್ಟ್ರಿಯಲ್ಲಿ ಟ್ಯಾಲೆಂಟ್‌ಗೆ ಬೆಲ್ ಹೊರತು ಬಟ್ಟೆ ಬಿಚ್ಚುವವರಿಗಲ್ಲ ಎಂದು ಸಾಕ್ಷಿ ಅಗರ್ವಾಲ್ ಉತ್ತರವನ್ನು ನೀಡಿದ್ದು, ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕ್ಷಿ ಅಗರ್ವಾಲ್ ನೀಡಿರುವ ಈ ರಿಪ್ಲೈಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸೌತ್ ನಟಿಯರನ್ನು ಟ್ರೋಲ್ ಮಾಡಲು ಯತ್ನಿಸಿದರೆ, ಇಂತಹ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಸಿಗುತ್ತದೆ ಎಂದು ನೆಟ್ಟಗರು ಕಾಮೆಂಟ್ ಮಾಡಿದ್ದಾರೆ.

ಸಾಕ್ಷಿ ಅಗರ್ವಾಲ್ ಮೂಲತಃ ತಮಿಳು ನಟಿಯಾಗಿದ್ದು ಮೊದಲು ಬಣ್ಣ ಹಚ್ಚಿದ್ದು 2013ರಲ್ಲಿ ಅಟ್ಲಿ ನಿರ್ದೇಶನದ ಅಡಿಯಲ್ಲಿ ತೆರೆಕಂಡ ಎವರ್‌ಗ್ರೀನ್ ಸಿನಿಮಾ ರಾಜ ರಾಣಿಯಲ್ಲಿ. ಈ ಚಿತ್ರದಲ್ಲಿ ಹೆಸರಿಲ್ಲದ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಸಾಕ್ಷಿ ಅಗರ್ವಾಲ್ ಬಳಿಕ 2014ರಲ್ಲಿ ಕನ್ನಡದ ಸಾಫ್ಟ್‌ವೇರ್ ಗಂಡ ಎಂಬ ಸಿನಿಮಾದಲ್ಲಿ ನಟಿಸಿದ್ದರು.

ಜಗ್ಗೇಶ್ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಸಾಕ್ಷಿ ಅಗರ್ವಾಲ್ ಎರಡನೇ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಹಲವು ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸಾಕ್ಷಿ ಅಗರ್ವಾಲ್ ರಜನಿಕಾಂತ್ ನಟನೆಯ ಕಾಲ ಚಿತ್ರದಲ್ಲಿ ಹಾಗೂ ವಿಶ್ವಾಸಂ ಚಿತ್ರಗಳಲ್ಲಿಯೂ ಸಹ ಅಭಿನಯ ಮಾಡಿದ್ದಾರೆ.

More from Filmibeat

English summary
Actress Sakshi Agarwal slams a netizen who ask her to do photoshoot without inners. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X