ಕೋಟಿಗಟ್ಟಲೆ ಸಂಭಾವನೆ ಪಡೆವ ಸಮಂತಾ ಪಡೆದ ಮೊದಲ ಸಂಬಳ ಎಷ್ಟು ಗೊತ್ತೆ?

ಸಮಂತಾ ಇಂದು ದಕ್ಷಿಣ ಭಾರತದ ಅತ್ಯಂತ ಬ್ಯುಸಿ ಹಾಗೂ ದುಬಾರಿ ನಟಿ. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾದು ನಿಂತಿದ್ದಾರೆ.

ವಿವಾಹ ವಿಚ್ಛೇಧನದ ಬಳಿಕವಂತೂ ಸಮಂತಾ ಭಿನ್ನ-ಭಿನ್ನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಲವು ವಿಧದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಸ್ಟಾರ್‌ಡಮ್ ಸಹ ಮುಂಚೆಗಿಂತಲೂ ದುಪ್ಪಟ್ಟಾಗಿದೆ. ಅದರಂತೆಯೇ ಅವರ ಸಂಭಾವನೆ ಸಹ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.

ನಟಿ ಸಮಂತಾ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಾಕಲು ಕೋಟ್ಯಂತರ ರುಪಾಯಿ ಹಣ ತೆಗೆದುಕೊಳ್ಳುತ್ತಾರೆ. ಆದರೆ ಒಂದು ದಶಕ್ಕೆ ಹಿಂದೆ ಅವರ ಜೀವನ ಹೀಗಿರಲಿಲ್ಲ. ಸಿನಿಮಾಕ್ಕೆ ಬರುವ ಮುಂಚೆ ಅಥವಾ ಸಿನಿಮಾಕ್ಕೆ ಕಾಲಿಟ್ಟಾಗ ಸಮಂತಾರ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ಸತತ ಪರಿಶ್ರಮದಿಂದ ಸಮಂತಾ ಇಂದಿನ ಸ್ಥಿತಿಯನ್ನು ಸಂಪಾದಿಸಿಕೊಂಡಿದ್ದಾರೆ.

ಅಭಿಮಾನಿಯಿಂದ ಪ್ರಶ್ನೆ

ಅಭಿಮಾನಿಯಿಂದ ಪ್ರಶ್ನೆ

ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಸಮಂತಾ, ಆಗಾಗ್ಗೆ ಅಭಿಮಾನಿಗಳೊಟ್ಟಿಗೆ ಸಂವಾದ ಸಹ ಮಾಡುತ್ತಿರುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಇತ್ತೀಚಿಗೆ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಒಬ್ಬ ಅಭಿಮಾನಿ, 'ನಿಮ್ಮ ಮೊದಲ ಸಂಬಳ ಎಷ್ಟು?'' ಎಂದು ಪ್ರಶ್ನೆ ಮಾಡಿದ್ದಾನೆ.

ಸಮಂತಾ ಪಡೆದ ಮೊದಲ ಸಂಭಾವನೆ ಎಷ್ಟು?

ಸಮಂತಾ ಪಡೆದ ಮೊದಲ ಸಂಭಾವನೆ ಎಷ್ಟು?

ಅಭಿಮಾನಿಯ ಪ್ರಶ್ನೆಗೆ ಸಮಂತಾ ನೀಡಿರುವ ಉತ್ತರ 500 ರುಪಾಯಿ. ಹೌದು, ಸಮಂತಾ ಪಡೆದ ಮೊದಲ ಸಂಬಳ 500 ರುಪಾಯಿಯಂತೆ. ಸಮಂತಾ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದರಂತೆ. ಅದಕ್ಕಾಗಿ ಅವರಿಗೆ ದಿನದ ಭತ್ಯೆಯೆಂದು 500 ರುಪಾಯಿ ನೀಡಲಾಗಿತ್ತು. ಆ 500 ರುಪಾಯಿಗಾಗಿ ತಾವು ಎಂಟು ಗಂಟೆ ಕೆಲಸ ಮಾಡಿದ್ದಾಗಿ ಸಮಂತಾ ಹೇಳಿಕೊಂಡಿದ್ದಾರೆ. ಮೊದಲ ಸಂಬಳ ಪಡೆದಾಗ ತಾವಿನ್ನೂ ಶಾಲೆಯಲ್ಲಿದ್ದುದಾಗಿಯೂ ಸಮಂತಾ ಹೇಳಿದ್ದಾರೆ.

ಈಗ ಸಮಂತಾ ಸಂಭಾವನೆ ಎಷ್ಟು?

ಈಗ ಸಮಂತಾ ಸಂಭಾವನೆ ಎಷ್ಟು?

ಅಂದಹಾಗೆ ಸಮಂತಾ ಈಗ ಐದು ಸಿನಿಷದ ಹಾಡಿನಲ್ಲಿ ಡ್ಯಾನ್ಸ್ ಮಾಡಲು ಐದು ಕೋಟಿಗಿಂತಲೂ ಹೆಚ್ಚು ಹಣ ಪಡೆಯುತ್ತಾರೆ. ಇತ್ತೀಚೆಗಷ್ಟೆ ಬಿಡುಗಡೆ ಆದ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಆ ಸಿನಿಮಾದ ನಾಯಕಿ ರಶ್ಮಿಕಾ ಪಡೆದ ಸಂಭಾವನೆಗಿಂತಲೂ ಎಷ್ಟೋ ಪಾಲು ಹೆಚ್ಚು ಸಂಭಾವನೆಯನ್ನು ನಟಿ ಸಮಂತಾ ಪಡೆದಿದ್ದಾರೆ. ಸಮಂತಾರ ಸಂಭಾವನೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ.

ಖತೀಜಾ ಪಾತ್ರ ಆಯ್ದುಕೊಂಡಿದ್ದೇಕೆ?

ಖತೀಜಾ ಪಾತ್ರ ಆಯ್ದುಕೊಂಡಿದ್ದೇಕೆ?

ಅಭಿಮಾನಿಗಳ ಪ್ರಶ್ನೋತ್ತರದಲ್ಲಿಯೇ, 'ಕಾತುವಾಕು ರೆಂಡು ಕಾದಲ್' ಸಿನಿಮಾದ ಬಗ್ಗೆ ಪ್ರಶ್ನೆ ಎದುರಾಗಿದ್ದು, ನೀವೇಕೆ ಕಣ್ಮಣಿ ಪಾತ್ರದ ಬದಲಿಗೆ ಖತೀಜಾ ಪಾತ್ರ ಒಪ್ಪಿಕೊಂಡಿರಿ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮಂತಾ, ''ಕಣ್ಮಣಿ ಇಲ್ಲದೆ ಖತೀಜಾ ಇಲ್ಲ, ಖತೀಜಾ ಇಲ್ಲದೆ ಕಣ್ಮಣಿ ಇಲ್ಲ'' ಎಂದಿದ್ದಾರೆ. ಅಲ್ಲದೆ, ''ನನಗೆ ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಸಿನಿಮಾಗಳು ಬಹಳ ಇಷ್ಟ, ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ'' ಎಂದಿದ್ದಾರೆ.

More from Filmibeat

English summary
Actreess Samantha reveals her first salary. She said she was paid very less amount as her first salary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X