'ನಲ್ಲ' ಚಿತ್ರನಟಿ ಸಂಗೀತಾ ದಾಂಪತ್ಯದಲ್ಲಿ ಬಿರುಕು? ಇಲ್ಲಿದೆ ಸಾಕ್ಷಿ ಎಂದ ಫ್ಯಾನ್ಸ್

ಚಿತ್ರರಂಗದಲ್ಲೀಗ ತಾರೆಯರ ಡಿವೋರ್ಸ್ ಸುದ್ದಿ ಪದೇ ಪದೆ ಚರ್ಚೆ ಆಗುತ್ತದೆ. ವಾಸ್ತವಕ್ಕಿಂತ ವದಂತಿಗಳೇ ಹೆಚ್ಚು ಹರಿದಾಡುತ್ತದೆ. ಆದರೆ ಕೆಲವೊಮ್ಮೆ ವದಂತಿ ಎಂದುಕೊಂಡಿದ್ದು ಕೂಡ ನಿಜವಾಗಿರುವ ಉದಾಹರಣೆಯಿದೆ. ಅದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ನಂಬಬೇಕೋ ಬಿಡಬೇಕೋ ಎನ್ನುವ ಗೊಂದಲ ಕೆಲವರದ್ದು.

ತಮಿಳು ನಟಿ ಸಂಗೀತಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಗಾಯಕ ಕ್ರಿಶ್ ಬಾಲಕೃಷ್ಣನ್ ಜೊತೆ 16 ವರ್ಷಗಳ ಹಿಂದೆ ಅವರು ಹಸೆಮಣೆ ಏರಿದ್ದರು. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಇತ್ತೀಚಿನ ವರ್ಷಗಳಲ್ಲಿ ಆಕೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದು ಫ್ಯಾಮಿಲಿಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿರುತ್ತಾರೆ. 2 ಲಕ್ಷಕ್ಕೂ ಅಧಿಕ ಜನ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯನ್ನು ಫಾಲೋ ಮಾಡುತ್ತಿದ್ದಾರೆ.

Actress Sangeeta Sparks Divorce Rumors After Instagram Name Change

ಸುಂದಲ ಕ್ಷಣಗಳ ಫೋಟೊ, ವೀಡಿಯೋಗಳನ್ನು ಆಗಾಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಸಂಗೀತಾ ಹಂಚಿಕೊಳ್ಳುತ್ತಾರೆ. ಆಗಾಗ್ಗೆ ಚಿತ್ರರಂಗದ ಆತ್ಮೀಯ ಸ್ನೇಹಿತೆಯರು ಜೊತೆ ಗೆಟ್ ಟು ಗೆದರ್ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ. ಆ ಫೋಟೊಗಳನ್ನು ಕೂಡ ಪೋಸ್ಟ್ ಮಾಡುತ್ತಿರುತ್ತಾರೆ. ಇದ್ದಕ್ಕಿಂತೆ ಸಂಗೀತಾ ಹಾಗೂ ಕ್ರಿಶ್ ದಂಪತಿ ದೂರಾಗುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಇತ್ತೀಚೆಗೆ ತಾರಾ ಜೋಡಿಗಳು ತಮ್ಮ ಡಿವೋರ್ಸ್ ಬಗ್ಗೆ ಮೊದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಸುಳಿವು ಕೊಡುತ್ತಾರೆ. ಅದೇ ರೀತಿ ಸಂಗೀತಾ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ನಟಿಯರು ಡಿವೋರ್ಸ್‌ಗೂ ಮುಂಚೆ ಪತಿಯ ಜೊತೆಗಿನ ಫೋಟೊ, ವೀಡಿಯೋಗಳನ್ನು ಡಿಲೀಟ್ ಮಾಡುವುದು. ಒಂದು ವೇಳೆ ಇನ್‌ಸ್ಟಾಗ್ರಾಮ್‌ ಖಾತೆಗೆ ತಮ್ಮ ಪತಿ ಹೆಸರನ್ನು ಸೇರಿಸಿದ್ದರೆ ಅದನ್ನು ತೆಗೆಯುವ ಕೆಲಸ ಮಾಡುತ್ತಾರೆ. ಈ ಹಿಂದೆ ನಟಿಯರಾದ ಸಮಂತಾ ಹಾಗೂ ನಿಹಾರಿಕಾ ಇದೇ ರೀತಿ ಮಾಡಿದ್ದರು. ಇತ್ತೀಚೆಗೆ ಹನ್ಸಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆ ಫೋಟೊಗಳನ್ನು ಡಿಲೀಟ್ ಮಾಡಿದ್ದು ಕೂಡ ಡಿವೋರ್ಸ್ ವದಂತಿಗೆ ಕಾರಣವಾಗಿತ್ತು.

ನಟಿ ಸಂಗೀತಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಿಸಿದ್ದಾರೆ. ಸಂಗೀತಾ ಕ್ರಿಶ್ ಎಂದು ಇದ್ದ ಹೆಸರನ್ನು ಸಂಗೀತಾ ಆಕ್ಟ್(ಸಂಗೀತಾ ನಟಿ) ಎಂದು ಬದಲಿಸಿದ್ದಾರೆ. ಹಾಗಾಗಿ ಡಿವೋರ್ಸ್ ಬಗ್ಗೆ ಸುಳಿವು ನೀಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಆದರೆ ಪತಿ ಕ್ರಿಶ್ ಜೊತೆಗಿನ ಫೋಟೊಗಳನ್ನು ತೆಗೆದಿಲ್ಲ. ಇನ್ನು ಎಂದಿನಂತೆ ಆರಾಮಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡುತ್ತಾ ಬರ್ತಿದ್ದಾರೆ. ಹಾಗಾಗಿ ಡಿವೋರ್ಸ್ ವದಂತಿ ಎಲ್ಲಾ ಸುಳ್ಳು ಎನ್ನುವ ವಾದ ಕೆಲವರದ್ದು.

Actress Sangeeta Sparks Divorce Rumors After Instagram Name Change

2009ರಲ್ಲಿ ಸಂಗೀತಾ ಹಾಗೂ ಕ್ರಿಶ್ ಪ್ರೀತಿಸಿ ಮದುವೆ ಆಗಿದ್ದರು. ಆ ಸಮಯದಲ್ಲಿ ವಯಸ್ಸಿನಲ್ಲಿ ಸಂಗೀತಾ ದೊಡ್ಡವರು ಎಂದು ಗುಲ್ಲಾಗಿತ್ತು. ಇತ್ತೀಚೆಗೆ ವೀಡಿಯೋ ಮಾತನಾಡುವ ವೇಳೆ ಕ್ರಿಶ್ ನನಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಸಂಗೀತಾ ಹೇಳಿದ್ದರು. ಇನ್ನು ಚೆನ್ನೈನಲ್ಲೇ ಹುಟ್ಟಿ ಬೆಳೆದ ಆಕೆ ಮಲಯಾಳಂನ 'ಗಂಗೋತ್ರಿ' ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದರು.

1997ರಲ್ಲಿ ಬಂದ 'ಈ ಹೃದಯ ನಿನಗಾಗಿ' ಹಾಗೂ 'ಜನನಿ ಜನ್ಮಭೂಮಿ' ಎಂಬ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಸುದೀಪ್ ನಟನೆಯ 'ನಲ್ಲ' ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. 'ಬೊಂಬಾಟ್ ಕಾರ್' ಆಕೆ ನಟಿಸಿದ ಮತ್ತೊಂದು ಕನ್ನಡ ಸಿನಿಮಾ. ತಮಿಳಿನಲ್ಲಿ ವಿಕ್ರಂ, ದಳಪತಿ ವಿಜಯ್ ಸೇರಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಹೆಚ್ಚು ಕಾಣಿಸಿಕೊಳ್ತಿದ್ದಾರೆ.

More from Filmibeat

English summary
Are Actress Sangeetha and Krish heading for divorce?
Read more about: sangeetha kollywood gossip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X