ತಮಗಿರುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಶ್ರುತಿ ಹಾಸನ್ ಮಾತು; ಆಕೆಗೆ ಮುಂದೆ ಮಕ್ಕಳಾಗಲ್ವಾ?

ಬಹುಭಾಷಾ ನಟಿ ಶ್ರುತಿ ಹಾಸನ್ ಸಾಕಷ್ಟು ವಿಚಾರಕ್ಕೆ ಆಗಾಗ್ಗೆ ಸುದ್ದಿ ಆಗುತ್ತಿರುತ್ತಾರೆ. ಆಕೆಯ ಡೇಟಿಂಗ್, ಬ್ರೇಕ್ ವಿಚಾರಗಳು ಪದೇ ಪದೆ ಕೇಳಿ ಬರುತ್ತದೆ. ಸಂತಾನು ಹಜಾರಿಕಾ ಜೊತೆಗಿನ ಬ್ರೇಕಪ್ ವಿಚಾರದಿಂದ ಕಮಲ್ ಪುತ್ರಿ ಸುದ್ದಿಯಾಗಿದ್ದರು. ಇದೀಗ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ತಾರೆಯರು ಕೂಡ ಮನುಷ್ಯರೇ. ನಮಗೂಗೂ ಸಾಮಾನ್ಯರಂತೆ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ ಎಂದು ಕೆಲ ನಟ-ನಟಿಯರು ಹೇಳಿರುವುದನ್ನು ಕೇಳಿರುತ್ತೇವೆ. ಏನೇ ಹಣವಿದ್ದರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಲೇಬೇಕು, ಸಾವು, ನೋವು ಇದ್ದಿದ್ದೇ. ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದವರೂ ಅದರಿಂದ ಹೊರ ಬಂದವರು ಇದ್ದಾರೆ. ನಟಿ ಶ್ರುತಿ ಹಾಸನ್ ತಮಗಿರುವ ಪಿಸಿಓಎಸ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

Actress Shruti Haasan Suffering From Rare Health Conditions

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಶ್ರುತಿ ಹಾಸನ್ "ನನಗೆ ಬ್ಯಾಡ್ ಪಿರಿಯಡ್ಸ್ ಸಮಸ್ಯೆ ಇದೆ" ಎಂದಿದ್ದಾರೆ. "ಮೊದಲಿನಿಂದಲೂ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗಲೂ ಆ ನೋವಿನಿಂದ ನರಳುತ್ತಿದ್ದೇನೆ. ಕೆಟ್ಟ ಪೀರಿಯಡ್ಸ್ ಸಮಯದಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ.. ಅದರಿಂದ ಸಾಕಷ್ಟು ಕಳೆದುಕೊಂಡಿದ್ದೇನೆ" ಎಂದು ವಿವರಿಸಿದ್ದಾರೆ.

"ಕೋಟ್ಯಂತರ ರೂಪಾಯಿ ಸುರಿದು ಸಿನಿಮಾಗಳನ್ನು ಮಾಡುವಾಗ ನನಗೆ ಪಿರಿಯಡ್ ಪ್ರಾಬ್ಲಂ ಇದೆ. ಶೂಟಿಂಗ್ ಮುಂದೂಡಿ ಎಂದು ಹೇಳಲು ಸಾಧ್ಯವೇ? ಎಂದು ಶ್ರುತಿ ಹಾಸನ್ ಪ್ರಶ್ನಿಸಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾದ ಹಲವು ಸಿನಿಮಾಗಳಲ್ಲಿ ನಾನು ನೋವಿನಿಂದ ನಟಿಸುತ್ತಿದ್ದೇನೆ. ಹಾಡು ಹೆಜ್ಜೆ ಹಾಕುವಂತಾಗಿದೆ. ನನಗೆ ಹಲವು ಸಮಸ್ಯೆಗಳಿವೆ ಅದರಲ್ಲಿ ಇದೂ ಒಂದು ಎನ್ನುವಂತಾಗಿದೆ."

"ಕೆಲವೊಮ್ಮೆ ನನ್ನ ಸ್ನೇಹಿತಿಯರು ಯಾಕೆ ನಿನಗೆ ಈ ಬ್ಯಾಡ್ ಪೀರಿಯಡ್ಸ್ ಸಮಸ್ಯೆ? ನಮಗೆ ಪೀರಿಯಡ್ಸ್ ಆದ್ರೆ ಕೊಂಚ ಹಸಿವು ಹೆಚ್ಚಾಗುತ್ತದೆ ಅಷ್ಟೇ ಎನ್ನುತ್ತಿದ್ದರು. ಬಳಿಕ ಸ್ಕ್ಯಾನ್ ಮಾಡಿಸಿದ ಪಿಸಿಓಎಸ್ ಸಮಸ್ಯೆ ಬಗ್ಗೆ ಗೊತ್ತಾಯಿತು. ಇನ್ನು ಪೀರಿಯಡ್ಸ್ ಸಮಯದಲ್ಲಿ ಬಹಳ ನೋವು ಅನಭವಿಸುತ್ತೇನೆ. ಇನ್ನು ಇದರಿಂದ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಹಳ ವ್ಯಾಯಾಮ ಮಾಡಿ ತೂಕ ಹೆಚ್ಚದಂತೆ ಎಚ್ಚರ ವಹಿಸುತ್ತಿದ್ದೆ"

Actress Shruti Haasan Suffering From Rare Health Conditions

"ನನ್ನ ಮೊದಲ ಪೀರಿಯಡ್ಸ್ ಸಮಯದಿಂದಲೂ ನನಗೆ ಅದು ಬಹಳ ಚಾಲೆಂಜಿಂಗ್ ಸಮಯ ಎನಿಸುತ್ತಿದೆ. ಕಷ್ಟದ ಕೆಲಸಗಳನ್ನು ಮಾಡಲು ಇದರಿಂಧ ಕಷ್ಟವಾಗುತ್ತದೆ. ನನ್ನ ಪೀರಿಯಡ್ಸ್‌ನ ಮೊದಲ ಎರಡು ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಇಲ್ಲದಿದ್ದರೆ ಸಾಕು ಎಂದು ಪ್ರಾರ್ಥಿಸುತ್ತೇನೆ. ಬೇರೆ ಕೆಲಸಗಳ ಬಗ್ಗೆ ಗೊತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ದಿನವೊಂದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಚಿತ್ರೀಕರಣ ಮಾಡುತ್ತಿರುತ್ತಾರೆ. ಎಲ್ಲಾ ಡೇಟ್ಸ್ ಹೊಂದಾಣಿಸಿ ಚಿತ್ರೀಕರಣ ಮಾಡುವಾಗ ನನ್ನ ಸಮಸ್ಯೆ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸುವುದು ಕಷ್ಟ" ಎಂದು ಕಮಲ್ ಪುತ್ರಿ ಹೇಳಿದ್ದಾರೆ.

ಪಿಸಿಓಎಸ್ ಸಮಸ್ಯೆಯಿಂದ ಸಾಕಷ್ಟು ಮಹಿಳೆಯರು ಸಮಸ್ಯೆ ಎದುರಿಸುತ್ತಾರೆ. ಆದರೆ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಾನು ಒಮ್ಮೆ ಒಂದು ಹುಡುಗಿ ಜೊತೆ ಇದೇ ಸಮಸ್ಯೆಯ ಬಗ್ಗೆ ಚರ್ಚಿಸಿದ್ದೆ. ಅವರ ತಂದೆ ಥ್ಯಾಂಕ್ಸ್‌ ನಮ್ಮ ಮಗಳೊಟ್ಟಿಗೆ ಈ ಬಗ್ಗೆ ಚರ್ಚಿಸಿದ್ದಕ್ಕೆ ಎಂದಿದ್ದರು. ಅಂತಹ ತಂದೆ ಇರುವುದು ಒಳ್ಳೆಯ ವಿಚಾರ ಎನಿಸಿತು" ಎಂದು ಶ್ರುತಿ ವಿವರಿಸಿದ್ದಾರೆ.

ಆಧುನಿಕ ಜೀವನಶೈಲಿ ಪಿಸಿಒಎಸ್ ಸಮಸ್ಯೆಗೆ ಪ್ರಮುಖ ಕಾರಣ ಎಂದು ವೈದ್ಯರು ಹೇಳುತ್ತಾರೆ. ಇದನ್ನು ಪಿಸಿಓಡಿ ಎಂದು ಹೇಳಲಾಗುತ್ತದೆ. ಅನಾರೋಗ್ಯಕರ ಆಹಾರ ಶೈಲಿ, ದೈಹಿಕ ವ್ಯಾಯಾಮ ಇಲ್ಲದಿರುವುದು, ಮಾನಸಿಕ ಒತ್ತಡ ಇವೆಲ್ಲಾ ಪಿಸಿಓಎಸ್ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ದೇಹದ ತೂಕ ಹೆಚ್ಚುವುದು, ಮೊಡವೆ, ತಲೆ ಕೂದಲು ಉದುರುವುದು ಇದರ ಲಕ್ಷಣಗಳಾಗಿರುತ್ತದೆ. ಪಿಸಿಓಎಸ್ ಸಮಸ್ಯೆ ಇರುವವರಿಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗದೇ ಗರ್ಭಧಾರಣೆಯಾಗದಿರುವುದು ಅಥವಾ ಪದೇ ಪದೆ ಗರ್ಭಪಾತವಾಗುವ ಸಾಧ್ಯತೆ ದಟ್ಟವಾಗಿರುತ್ತದೆ.

More from Filmibeat

English summary
Shruti Haasan opens up about that she Suffering From Rare disease
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X