ಹಾಸನ್ ಸರ್ ನೇಮ್ ನಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು: ನೆಪೋಟಿಸಂ ಬಗ್ಗೆ ಶ್ರುತಿ ಹಾಸನ್ ಮಾತು
ನೆಪೋಟಿಸಂ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಬಾಲಿವುಡ್ ನಲ್ಲಿ ಅತಿರೇಕಕ್ಕೆ ಹೋಗಿರುವ ಸ್ವಜನ ಪಕ್ಷಪಾತದ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಎಲ್ಲಾ ಭಾಷೆಯಲ್ಲಿಯೂ ನೆಪೋಟಿಸಂ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಇದೀಗ ತಮಿಳು ನಟಿ ಶ್ರುತಿ ಹಾಸನ್ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. "ನನ್ನ ಹೆಸರಿನ ಜೊತೆ ಹಾಸನ್ ಎನ್ನುವ ಸರ್ ನೇಮ್ ಇದೆ. ಹಾಗಾಗಿ ನನಗೆ ಸಲಭವಾಗಿ ಅವಕಾಶ ಸಿಕ್ಕಿದೆ" ಎಂದು ಹೇಳಿದ್ದಾರೆ.
Recommended Video
"ನನ್ನ ಹೆತ್ತವರ ಕಾರಣದಿಂದ ನನಗೆ ಅವಕಾಶಗಳು ಸಿಕ್ಕಿದೆ ಎಂದು ನಾನು ಒಪ್ಪಿಕೊಳ್ಳಬೇಕಾಗಿದೆ. ನನಗೆ ಅವಕಾಶ ಸಿಕ್ಕಿದ್ದು ನನ್ನ ಸರ್ ನೇಮ್ ನಿಂದ. ನಾನು ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾನು ಜೀವನದಲ್ಲಿ ಎಲ್ಲವನ್ನು ತುಂಬಾ ನಿಧಾನವಾಗಿ ಕಲಿಯುವವಳು. ಸರಿಯಾಗಿ ಮಾತನಾಡಲು ನನಗೆ ತಿಳಿದಿರಲಿಲ್ಲ. ಸರಿಯಾದ ಜನರನ್ನು ಹೇಗೆ ಸಂಪರ್ಕ ಮಾಡಬೇಕು ಎನ್ನುವುದು ನನಗೆ ತಿಳಿದಿರಲಿಲ್ಲ. ವಾಸ್ತವವಾಗಿ ನಾನಿನ್ನು ಹಾಗೆ ಇದ್ದೀನಿ" ಎಂದಿದ್ದಾರೆ.
ಇನ್ನೂ "ಚಿತ್ರರಂಗದಲ್ಲಿ ತುಂಬಾ ಶ್ರಮ ಪಟ್ಟಿದ್ದೀನಿ. ಕಠಿಣ ಪಯಣ ನನ್ನದಾಗಿತ್ತು. ನಾನು ಎಲ್ಲಾ ಸವಲತ್ತು ಹೊಂದಿದ್ದೇನೆ. ಚಿತ್ರರಂಗ ಪ್ರವೇಶ ಮಾಡುವುದು ಸುಲಭ ಆದರೆ ಆದರೆ ಇಲ್ಲಿ ಉಳಿಯುವುದು ಕಷ್ಟ" ಎಂದು ಶ್ರುತಿ ಹಾಸನ್ ಹೇಳಿದ್ದಾರೆ. ಈ ಮೂಲಕ ನಟಿ ಶ್ರುತಿ ಹಾಸನ್ ನೆಪೋಟಿಸಂ ಇದೆ ಎಂದು ಒಪ್ಪಿಕೊಂಡಿದ್ದಾರೆ.

ಶ್ರುತಿ ಹಾಸನ್ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಒಮ್ಮೆಗೆ ಖ್ಯಾತಿಗಳಿಸಿದ ನಟಿ. ದಕ್ಷಿಣ ಭಾರತೀಯ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲಿಯೂ ನಟಿಸಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಶ್ರುತಿ ಚಿತ್ರರಂಗದಲ್ಲಿ ಅಷ್ಟು ಸಕ್ರೀಯರಾಗಿಲ್ಲ. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುವ ಶ್ರುತಿ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ.
ಇದೀಗ ಶ್ರುತಿ ವೆಬ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರುತಿ ಹಾಸನ್ ಅಭಿನಯದ ಯಾರಾ ವೆಬ್ ಸರಣಿ ರಿಲೀಸ್ ಗೆ ರೆಡಿಯಾಗಿದೆ. ಇನ್ನೂ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ರ್ಯಾಕ್ ಎನ್ನುವ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











