"25 ವರ್ಷ ನನ್ನೊಟ್ಟಿಗೆ ನನ್ನ ಆಧಾರ ಸ್ತಂಭವಾಗಿದ್ದರು.. ಈಗ ಅವರಿಲ್ಲ": ಸಿಮ್ರಾನ್ ಭಾವುಕ

ಬಹುಭಾಷಾ ನಟಿ ಸಿಮ್ರಾನ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ತಮಿಳಿನಲ್ಲಿ 50ನೇ ಸಿನಿಮಾ ಹೊಸ್ತಿಲಲ್ಲಿ ಇರುವ ಮುಂಬೈ ಬೆಡಗಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಾಯಕಿಯಾಗಿ ಮಾತ್ರವಲ್ಲದೇ ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸಿಮ್ರಾನ್ ಕನ್ನಡದಲ್ಲೂ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೇ ಆಕೆ ಸಿನಿಕರಿಯರ್ ಆರಂಭಿಸಿದ್ದರು. 'ಸಿಂಹದ ಮರಿ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಿಂಚಿದ್ದರು. ಕೆಲ ವರ್ಷಗಳ ಹಿಂದೆ 'ಅಲೋನ್' ಎನ್ನುವ ಮತ್ತೊಂದು ಕನ್ನಡ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.

Actress Simran pens an emotional note On Death Of her manager

ಒಂದ್ಕಾಲದಲ್ಲಿ ಸೌತ್ ಸಿನಿದುನಿಯಾದ ಟಾಪ್ ನಟಿಯಾಗಿ ಸಿಮ್ರಾನ್ ಮೆರೆದರು. ಚಿರಂಜೀವಿ, ಶಿವರಾಜ್‌ಕುಮಾರ್, ವೆಂಕಟೇಶ್, ನಾಗಾರ್ಜುನ, ದಳಪತಿ ವಿಜಯ್, ಅಜಿತ್‌ರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಗ್ಲಾಮರಸ್, ಡಿ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸಿ ಗೆದ್ದಿದ್ದರು.

ಇತ್ತೀಚೆಗೆ ಈ ಮುಂಬೈ ಬೆಡಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ ಆಗಿದೆ. ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಖುಷಿ ಹಾಗೂ ಬೇಸರದ ವಿಚಾರನ್ನು ಹಂಚಿಕೊಳ್ಳುತ್ತಿರುತ್ತಾರೆ. ಮತ್ತೊಮ್ಮೆ ಭಾವನಾತ್ಮಕ ಪೋಸ್ಟ್ ಮಾಡಿ ಮಾಡಿ ಸಿಮ್ರಾನ್ ಸುದ್ದಿಯಲ್ಲಿದ್ದಾರೆ.

ಸಿಮ್ರಾನ್‌ ಜೊತೆ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜನ್ ಇತ್ತೀಚೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಆಕೆ ಪೋಸ್ಟ್ ಮಾಡಿದ್ದಾರೆ. "ಇದು ನಂಬಲಾಗದ ಮತ್ತು ಆಘಾತಕಾರಿ ಸುದ್ದಿ. ನನ್ನ ಆತ್ಮೀಯ ಗೆಳೆಯ ಶ್ರೀ ಎಂ ಕಾಮರಾಜನ್ ಇನ್ನಿಲ್ಲ. 25 ವರ್ಷಗಳಿಂದ ನನ್ನ ಬಲಗೈ ಬಂಟ, ನನ್ನ ಆಧಾರ ಸ್ತಂಭವಾಗಿದ್ದರು. ಯಾವಾಗಲೂ ನಗುತ್ತಿರುವ, ತೀಕ್ಷ್ಣ ಮತ್ತು ವಿಶ್ವಾಸಾರ್ಹತೆಗೆ ಸಮಾನಾರ್ಥಕ ವ್ಯಕ್ತಿ ಎನಿಸಿಕೊಂಡಿದ್ದರು. ದೃಢ ಸಂಕಲ್ಪದಿಂದ ತಮ್ಮನ್ನು ತಾವು ರೂಪಿಸಿಕೊಂಡಿದ್ದರು. ನೀವಿಲ್ಲದೇ ನನ್ನ ಸಿನಿಮಾ ಪಯಣ ಅಸಾಧ್ಯ"

"ನಿಮ್ಮ ಜೀವನವು ನಿಜವಾಗಿಯೂ ಅನೇಕ ಜನರ ಮೇಲೆ ಪ್ರಭಾವ ಬೀರಿದೆ. ನಿಮ್ಮನ್ನು ಬಹಳ ಜನ ಮಿಸ್ ಮಾಡಿಕೊಳ್ಳುತ್ತಾರೆ. ಬಹಳ ಬೇಗ ಹೋಗಿಬಿಟ್ಟಿರಿ. ನಿಮ್ಮ ಕುಟುಂಬ ಹಾಗೂ ಆಪ್ತರಿಗೆ ಈ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ" ಎಂದು ಸಿಮ್ರಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಸಿಮ್ರಾನ್‌ಗೆ ಮೋನಲ್ ಎನ್ನುವ ಸಹೋದರಿ ಇದ್ದರು. ಆಕೆ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ಮೋನಲ್ ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದರು. ಶಿವಣ್ಣ ನಟನೆಯ ಕನ್ನಡದ 'ಇಂದ್ರ ಧನುಷ್‌' ಚಿತ್ರದಲ್ಲೂ ಆಕೆ ನಟಿಸಿದ್ದಳು. ಕೆಲ ದಿನಗಳ ಹಿಂದೆ ಸಹೋದರಿ ಮೋನಲ್ ನಿಧನಳಾಗಿ 20 ವರ್ಷ ಕಳೆದ ಹಿನ್ನೆಲೆಯಲ್ಲಿ ನಟಿ ಸಿಮ್ರನ್, ಆಕೆಯನ್ನು ನೆನಪಿಸಿಕೊಂಡಿದ್ದಾರೆ. ಆ ಪೋಸ್ಟ್ ಕೂಡ ವೈರಲ್ ಆಗಿತ್ತು.

ಇನ್ನು ನಟಿ ಸಿಮ್ರಾನ್ ಸಿನಿಕರಿಯರ್ ವಿಚಾರಕ್ಕೆ ಬಂದರೆ ಸದ್ಯ 'ಶಬ್ಧಂ' ಎನ್ನುವ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಾಲಿವುಡ್‌ನಲ್ಲಿ ಆಕೆಯ 50ನೇ ಸಿನಿಮಾ. ಇನ್ನು ದೀಪಾವಳಿ ಸಂಭ್ರಮದಲ್ಲಿ ಬಂದ 'ಟೈಗರ್-3' ಚಿತ್ರದಲ್ಲಿ ಕೊನೆಯದಾಗಿ ಆಕೆ ಬಣ್ಣ ಹಚ್ಚಿದ್ದರು. ಚಿತ್ರದಲ್ಲಿ ಪಾಕಿಸ್ತಾನದ ಪ್ರಧಾನಿ ನಸ್ರೀನ್ ಇರಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ತಮಿಳಿನಲ್ಲಿ 'ಅಂದಗಾನ್', 'ವನಂಗಾಮುಡಿ' ಸಿನಿಮಾಗಳಲ್ಲಿ ನಟಿಸಿದ್ದು ಕಾರಣಾಂತರಗಳಿಂದ ತಡವಾಗುತ್ತಿದೆ.

More from Filmibeat

English summary
Simran gets emotional about her manager's demise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X