ನಟಿ ಸ್ನೇಹಾಗೆ ಇರುವ ವಿಚಿತ್ರ ಆರೋಗ್ಯ ಸಮಸ್ಯೆ ಬಿಚ್ಚಿಟ್ಟ ಪತಿ ಪ್ರಸನ್ನ
ಸಿನಿಮಾ ತಾರೆಯರು ಕೂಡ ಕೆಲವೊಮ್ಮೆ ಚಿತ್ರ ವಿಚಿತ್ರ ಕಾಯಿಲೆಗಳಿಂದ ಬಳಲುವುದು ಗೊತ್ತೇಯಿದೆ. ಕ್ಯಾನ್ಸರ್ ರೀತಿಯ ಮಾರಾಟ ರೋಗದಿಂದ ಚೇತರಿಸಿಕೊಂಡವರು ಕೂಡ ಇದ್ದಾರೆ. ಬಹುಭಾಷಾ ನಟಿ ಸ್ನೇಹಾ ಅವರಿಗೆ ಕೂಡ ಒಂದು ವಿಚಿತ್ರ ಆರೋಗ್ಯ ಸಮಸ್ಯೆ ಇದೆ ಎಂದು ಪತಿ ಪ್ರಸನ್ನ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ.
ಬಹುಭಾಷಾ ನಟಿ ಸ್ನೇಹಾ ಕನ್ನಡ ಸಿನಿಮಾಹಳಲ್ಲಿ ಕೂಡ ನಟಿಸಿದ್ದಾರೆ. ತಮಿಳು, ತೆಲುಗಿನಲ್ಲಿ ಹೆಚ್ಚು ಬಣ್ಣ ಹಚ್ಚಿದ್ದು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಗೆದ್ದಿದ್ದಾರೆ. ನಟಿ ಸ್ನೇಹಾ ಹಾಗೂ ನಟ ಪ್ರಸನ್ನ ಪರಸ್ಪರ ಪ್ರೀತಿಸಿ ಮದುವೆ ಆದವರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮುಂಬೈನಲ್ಲಿ ಹುಟ್ಟಿದ ಸ್ನೇಹಾ ಶಾರ್ಜಾದಲ್ಲಿ ಓದಿ ಬೆಳೆದವರು. ಕಳೆದ ವರ್ಷ ಬಂದ 'GOAT' ಚಿತ್ರದಲ್ಲಿ ಕೂಡ ಸ್ನೇಹಾ ಮಿಂಚಿದ್ದರು.

ಮದುವೆ ಬಳಿಕ ಸ್ನೇಹಾ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ನಾಯಕ ಅಥವಾ ನಾಯಕಿಯ ಸಹೋದರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡು ಹಿಟ್ ಲಿಸ್ಟ್ ಸೇರಿದ 'ಡ್ರ್ಯಾಗನ್' ಚಿತ್ರದಲ್ಲಿ ಕೂಡ ಸ್ನೇಹಾ ಬಣ್ಣ ಹಚ್ಚಿದ್ದಾರೆ. ನಟಿ ಸ್ನೇಹಾ ಅವರಿಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹಿಂದೆ ಸಂದದರ್ಶನವೊಂದರಲ್ಲಿ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ತನಗೆ ಒಸಿಡಿ (OCD) ಸಮಸ್ಯೆ ಇರುವ ಬಗ್ಗೆ ನಟಿ ಸ್ನೇಹಾ ಮಾತನಾಡಿದ್ದರು. ಅದಕ್ಕೆ ಪತಿ ಪ್ರಸನ್ನ ಕೂಡ ದನಿಗೂಡಿಸಿದ್ದರು. ಒಸಿಡಿ (OCD) ಅಂದರೆ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್. ಕೆಲ ನಟ-ನಟಿಯರು ಕೂಡ ತಮಗೆ ಇಂತಹ ಸಮಸ್ಯೆ ಇರುವ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಂತ ಇದನ್ನು ರೋಗ ಅಥವಾ ಹುಚ್ಚು ಎಂದು ಹೇಳವುದಕ್ಕೆ ಆಗುವುದಿಲ್ಲ. ಒಸಿಡಿಯಿಂದ ಬಳಲುವವರು ಮ್ಮ ಮನಸ್ಸಿಗೆ ಬರುವ ವಿಷ್ಯವನ್ನು ಪದೇ ಪದೇ ಆಲೋಚಿಸುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ. ಇದು ಕೆಲವೊಮ್ಮೆ ಪಾಸಿಟಿವ್ ಅಥವಾ ನೆಗೆಟಿವ್ ಆಗಿಯೂ ಇರಬಹುದು.
ಸ್ವಚ್ಛತೆಯ ಒಡಿಸಿ ಸಾಕಷ್ಟು ಜನರಿಗೆ ಇರುತ್ತದೆ. ಅಂದರೆ ಸದಾ ಸ್ವಚ್ಛತೆಯ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಾರೆ. ಅದು ತಮ್ಮ ದೈಹಿಕ ಸ್ವಚ್ಛತೆ ಇರಬಹುದು. ಮನೆಯ ಸ್ವಚ್ಛತೆ ಆಗಿರಬಹುದು. ತಮ್ಮ ದೇಹ, ತೊಡುವ ಬಟ್ಟೆ, ತಿನ್ನುವ ಆಹಾರ, ಮನೆ ಹೀಗೆ ಎಲ್ಲವೂ ಸ್ವಚ್ಛವಾಗಿ ಇರಬೇಕು ಎಂದು ಯೋಚಿಸುತ್ತಲೇ ಇರುವುದು. ಪದೇ ಪದೇ ಕೈ ತೊಳೆಯುವುದು, ಮತ್ತೆ ಮತ್ತೆ ಮನೆ ಕ್ಲೀನ್ ಮಾಡುತ್ತಲೇ ಇರುವುದು. ಎಷ್ಟೇ ಸ್ವಚ್ಛಗೊಳಿಸಿದರೂ ಸಮಾಧಾನ ಆಗುವುದಿಲ್ಲ. ಹೀಗೆ ಶುರುವಾಗುವ ಈ ಒಸಿಡಿ ಬಳಿಕ ಮತ್ತಷ್ಟು ಹೆಚ್ಚಾಗಿಬಿಡುತ್ತದೆ.

ನಟಿ ಸೌಂದರ್ಯ ಅವರಿಗೂ ಕೂಡ ಸ್ವಚ್ಛತೆಯ ಬಗ್ಗೆ ಒಸಿಡಿ ಇದೆಯಂತೆ. ಮನೆಯನ್ನು ಪದೇ ಪದೆ ಕ್ಲೀನ್ ಮಾಡುತ್ತಲೇ ಇರುತ್ತೇನೆ. ನನಗೆ ಸದಾ ಸ್ವಚ್ಛವಾಗಿರಬೇಕು. ನನಗೆ ಅದೊಂದು ಒಸಿಡಿ. ಇದೇ ಕಾರಣಕ್ಕೆ ಮೂರು ಬಾರಿ ಮನೆ ಬದಲಿಸುವಂತಾಯಿತು. ಆಕೆಯ ಒಸಿಡಿಯಿಂದ ತಪ್ಪಿಸಿಕೊಂಡವನು ನಾನು ಮಾತ್ರ ಎಂದು ಹೇಳಿ ಪ್ರಸನ್ನ ನಕ್ಕಿದ್ದಾರೆ.
'ಅಚ್ಚಮುಂಡು ಅಚ್ಚಮುಂಡು' ತಮಿಳು ಚಿತ್ರದಲ್ಲಿ ಸ್ನೇಹಾ ಹಾಗೂ ಪ್ರಸನ್ನ ಒಟ್ಟಿಗೆ ನಟಿಸಿದ್ದರು. ಚಿತ್ರೀಕರಣದ ವೇಳೆ ಶುರುವಾದ ಪರಿಚಯ ಬಳಿಕ ಸ್ನೇಹಾ ಆಗಿ ಬದಲಾಗಿತ್ತು. ಆ ಬಳಿಕ ಆ ಸ್ನೇಹಾ ಪ್ರೀತಿಗೆ ತಿರುಗಿ ಕೊನೆಗೆ ಮದುವೆ ಬಂಧದಲ್ಲಿ ಇಬ್ಬರೂ ಜೊತೆಯಾಗಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ 'ರವಿಶಾಸ್ತ್ರಿ' ಚಿತ್ರದಲ್ಲಿ ಸ್ನೇಹಾ ನಟಿಸಿದ್ದರು. ಬಳಿಕ 'ಒಗ್ಗರಣೆ', 'ಕುರುಕ್ಷೇತ್ರ' ಚಿತ್ರಗಳಲ್ಲಿ ಮಿಂಚಿದ್ದರು. ಪುನ್ನಗೆ ದೇಶಂ, ವಸೀಗರ, ಆಟೋಗ್ರಾಫ್, 'ರಾಧ ಗೋಪಾಲಂ', 'ಪುದುಪೇಟೈ', 'ಸನ್ ಆಫ್ ಸತ್ಯಮೂರ್ತಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











