ಆತನನ್ನು ಸಹಿಸಿಕೊಳ್ಳೋದು ಕಷ್ಟ.. ನರಕ ನೋಡ್ದೆ.. ಅದ್ಕೆ 16 ಸಿನಿಮಾ ಅವಕಾಶ ಬಿಟ್ಟೆ- ಸೋನಾ
ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿ ಸೋನಾ ಹೈಡೆನ್ ನಟಿಸಿ ಗೆದ್ದಿದ್ದಾರೆ. ಪೋಷಕ ಪಾತ್ರಗಳಲ್ಲಿ ಆಕೆ ನಟಿಸಿದ್ದೇ ಹೆಚ್ಚು. ತಮಿಳಿನಲ್ಲಿ ಹಾಸ್ಯನಟ ವಡಿವೇಲು ಹಾಗೂ ಸೋನಾ ಕಾಂಬಿನೇಷನ್ ಹಿಟ್ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಆಕೆ ಹೆಚ್ಚು ಕಾಣಿಸಿಕೊಳ್ಳಲಿಲ್ಲ.
ಹಿಂದೆ ಸಂದರ್ಶನವೊಂದರಲ್ಲಿ ವಡಿವೇಲು ಜೊತೆ ನಟಿಸಿದ ಕಹಿ ಅನುಭವದ ಬಗ್ಗೆ ನಟಿ ಸೋನಾ ಮಾತನಾಡಿದ್ದರು. ಅದು ಮತ್ತೆ ವೈರಲ್ ಆಗ್ತಿದೆ. ಚೆನ್ನೈ ಮೂಲದ ಸೋನಾ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಉದ್ಯಮಿ ಆಗಿಯೂ ಗುರ್ತಿಸಿಕೊಂಡಿದ್ದಾರೆ.

ನಟ ವಡಿವೇಲು ಕೂಡ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಒಂದ್ಕಾದದಲ್ಲಿ ಬಹುಬೇಡಿಕೆಯ ಹಾಸ್ಯನಟನಾಗಿ ಗುರ್ತಿಸಿಕೊಂಡಿದ್ದರು. ಕನ್ನಡದ 'ಆಪ್ತಮಿತ್ರ' ಸಿನಿಮಾ ತಮಿಳಿಗೆ 'ಚಂದ್ರಮುಖಿ' ಹೆಸರಿನಲ್ಲಿ ರೀಮೆಕ್ ಆಗಿತ್ತು. ದ್ವಾರಕೀಶ್ ಮಾಡಿದ್ದ ಪಾತ್ರವನ್ನು ಅಲ್ಲಿ ವಡಿವೇಲು ಮಾಡಿದ್ದರು. ರಜನಿಕಾಂತ್ ಅವರಿಗೆ ಪಿ. ವಾಸು ಕಥೆ ಹೇಳಿದಾಗ ಮೊದಲು ವಡಿವೇಲು ಕಾಲ್‌ಶೀಟ್ ತಗೊಳ್ಳಿ. ಬಳಿಕ ನನ್ನ ಕಾಲ್‌ಶೀಟ್ ಕೊಡ್ತೀನಿ ಎಂದು ಹೇಳಿದ್ದರು. ಅಷ್ಟರಮಟ್ಟಿಗೆ ಆಗ ವಡಿವೇಲು ಹವಾ ನಡೀತಿತ್ತು.
ವಡಿವೇಲು ಬಗ್ಗೆ ನಟಿ ಸೋನಾ ಮಾಡಿರುವ ಆರೋಪಗಳು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಆಕೆ ಈ ಹಿಂದೆ ಕೂಡ ಕೆಲ ವಿವಾದಗಳಲ್ಲಿ ಸಿಲುತ್ತಿದ್ದರು. ಬಳಿಕ ನಿಧಾನವಾಗಿ ಸಿನಿಮಾ ಅವಕಾಶಗಳು ಕಮ್ಮಿ ಆಗಿತ್ತು. 'ಸ್ಮೋಕ್' ಎಂಬ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದಾರೆ. ತಮ್ಮ 'ಸ್ಮೋಕ್' ಚಿತ್ರದ ಮುಖ್ಯವಾದ ವೀಡಿಯೊ ತುಣುಕನ್ನು ತಡೆಹಿಡಿದಿದ್ದಾರೆ ಎಂಬ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕೆ ಇತ್ತೀಚೆಗೆ ಪಟ್ಟು ಹಿಡಿದಿದ್ದರು. ಇದೇ ಕಾರಣಕ್ಕೆ ದಕ್ಷಿಣ ಭಾರತದ ಚಲನಚಿತ್ರ ನೌಕರರ ಒಕ್ಕೂಟ (FEFSI) ಕಚೇರಿ ಎದುರು ಕೂತು ಪ್ರತಿಭಟನೆ ನಡೆಸಿದ್ದರು.
ಇದೆಲ್ಲದರ ನಡುವೆ ವಡಿವೇಲು ಬಗ್ಗೆ ಸೋನಾ ಅಂದು ಆಡಿದ್ದ ಮಾತುಗಳು ಚರ್ಚೆ ಹುಟ್ಟಾಕ್ಕಿದೆ. "ಒಂದು ಹಂತದಲ್ಲಿ ನಟನೆ ನಿಲ್ಲಿಸಿಬಿಡಬೇಕು ಎನಿಸಿತ್ತು. ಇಂಡಸ್ಟ್ರಿಯಲ್ಲಿ ಯಾರನ್ನು ನಂಬದಂತಹ ಪರಿಸ್ಥಿತಿ ಇತ್ತು. ಕೆಲವರಿಂದ ನಾನು ನಾನಾ ಸಮಸ್ಯೆ ಎದುರಿಸಿದೆ. ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಇಂಡಸ್ಟ್ರಿಯಿಂದ ದೂರಾದೆ" ಎಂದಿದ್ದರು.
ರಜನಿಕಾಂತ್ ನಟನೆಯ 'ಕುಚೇಲನ್' ಚಿತ್ರದಲ್ಲಿ ವಡಿವೇಲು ಹಾಗೂ ಸೋನಾ ಒಟ್ಟಿಗೆ ನಟಿಸಿದ್ದರು. ಈ ಕಾಂಬಿನೇಷನ್ ಹಿಟ್ ಆಗಿತ್ತು. ಬಳಿಕ "16 ಸಿನಿಮಾಗಳಲ್ಲಿ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ನಾನು ಒಪ್ಪಲಿಲ್ಲ. ರಿಜೆಕ್ಟ್ ಮಾಡಿದ್ದೆ. ಆತನನ್ನು ಸಹಿಸಿಕೊಳ್ಳವುದು ಬಹಳ ಕಷ್ಟ. ಆತನನ್ನು ಹ್ಯಾಂಡಲ್ ಮಾಡುವುದು ಕಷ್ಟ. ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನನಗೂ ಆತ್ಮಗೌರವ ಮುಖ್ಯ" ಎಂದು ಸೋನಾ ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದರು.
ಚೆನ್ನೈ ನಟಿ ಸೋನಾ 'ಪೂವಿಲ್ಲಾಂ ವುನ್‌ವಾಸಂ' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. ಬಳಿಕ 'ವಿಲನ್', 'ಪತ್ತು ಪತ್ತು', 'ಗುರು ಎನ್ ಆಳು' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ 'ನಮ್ಮೆಜಮಾನ್ರು' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು.
ತಮಿಳಿನ 'ಬೂಮರ್ ಅಂಕಲ್' ಸೋನಾ ನಟಿಸಿದ ಕೊನೆಯ ಸಿನಿಮಾ. 'ಪತ್ತು ಪತ್ತು' ಚಿತ್ರದಲ್ಲಿ ಕಹಿ ಅನುಭವ ಆಗಿದ್ದನ್ನು ಆಕೆ ನೆನಪಿಸಿಕೊಂಡಿದ್ದರು. ಆ ಚಿತ್ರದಲ್ಲಿ ಕೆಲ ಭಿನ್ನ ಕೋನಗಳಲ್ಲಿ ತಮ್ಮನ್ನು ಸೆರೆಹಿಡಿದಿದ್ದು ಇಷ್ಟವಾಗಲಿಲ್ಲ. ಮನೆಯವರನ್ನೆಲ್ಲಾ ಸಿನಿಮಾ ನೋಡಲು ಕರೆದುಕೊಂಡು ಹೋಗಿ ಬೇಸರಗೊಂಡಿದ್ದೆ. ಎರಡು ತಿಂಗಳು ಅಮ್ಮ ಒಂದುರೀತಿ ನನ್ನನ್ನು ನೋಡಿದ್ರು ಎಂದು ಸೋನಾ ಹೇಳಿಕೊಂಡಿದ್ದರು.


Click it and Unblock the Notifications











