ನಯನತಾರಾ ಬಗ್ಗೆ ನನಗೆ ಬಹಳ ಗೌರವ ಇದೆ.. ಆದ್ರೆ ವಿಘ್ನೇಶ್ ಶಿವನ್ ನನ್ನನ್ನು ಮರೆತುಬಿಟ್ಟ

ತಮಿಳು ನಟಿ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳನ್ನು ಕೊಟ್ಟ ವಿಘ್ನೇಶ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. ಮತ್ತೊಂದು ಕಡೆ ನಯನತಾರಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮರೆಯುತ್ತಿದ್ದಾರೆ. ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ.

ವಿಘ್ನೇಶ್ ನಿರ್ದೇಶನದ 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಧನುಷ್ ಆ ಸಿನಿಮಾ ನಿರ್ಮಾಣ ಮಾಡಿದ್ದರು. ಇತ್ತೀಚೆಗೆ 'ಲವ್ ಇನ್ಸುರೆನ್ಸ್ ಕಂಪನಿ' ಸಿನಿಮಾ ನಿರ್ಮಿಸಿ, ನಿರ್ದೇಶಿಸಿ ವಿಘ್ನೇಶ್ ಸೋತಿದ್ದಾರೆ. ಸದ್ಯ ಆತನ ಬಗ್ಗೆ ತಮಿಳು ನಟಿ ಸೋನಾ ಹೈಡೆನ್ ಹೇಳಿಕೆ ವೈರಲ್ ಆಗ್ತಿದೆ.

Actress Sona Heiden Says Vignesh Shivan Forgot Her After Working Together for Years

ಎರಡ್ಮೂರು ವರ್ಷ ವಿಘ್ನೇಶ್ ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡು ಇದ್ದ. ಆದರೆ ಬಳಿಕ ನನ್ನನ್ನು ಮರೆತುಬಿಟ್ಟ. ಆ ರೀತಿ ಮಾಡಬಾರದಿದ್ದು ಎಂದು ನಟಿ ಸೋನಾ ಹೇಳಿದ್ದಾರೆ. Trend Talks ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ನಡುವೆ ವಿಘ್ನೇಶ್ ಹೆಸರು ಪ್ರಸ್ತಾಪವಾಗಿದೆ.

"ವಿಘ್ನೇಶ್ ಶಿವನ್ ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡಿದ್ರು. ಎರಡ್ಮೂರು ವರ್ಷ ಒಂದು ತಂಡವಾಗಿ ಇದ್ದರು. ಬಹಳ ಸಹಾಯ ಮಾಡಿದ್ರು. ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ. ಅದಕ್ಕಿಂತ ಹೆಚ್ಚು ಏನು ಹೇಳಲು ಸಾಧ್ಯವಿಲ್ಲ. ಕೆಲ ವಿಚಾರಗಳನ್ನು ನಾನು ಹೇಳಿಬಿಡ್ತೀನಿ. ಆದ್ರೆ ನನಗೆ ನಯನತಾರ ಬಗ್ಗೆ ಬಹಳ ಗೌರವ ಇದೆ. ನಾನು ಒಬ್ಬ ಮಹಿಳೆಯಾಗಿ ಆಕೆಯ ಜರ್ನಿ, ಕಷ್ಟ ಏನು ಎನ್ನುವುದು ಗೊತ್ತು. ಎಲ್ಲಾ ಮುಗಿಸಿ ಈ ಒಂದು ಫ್ಯಾಮಿಲಿ ಆಗಿ ಸೆಟ್ಲ್ ಆಗಿದ್ದಾರೆ. ಈಗ ಮಾತನಾಡುವುದು ಬೇಡ. ಹಾಗಂತ ವಿಘ್ನೇಶ್ ಕೆಟ್ಟ ವ್ಯಕ್ತಿ ಅಲ್ಲ. ಮರೆತುಬಿಟ್ಟ ಎನಿಸುತ್ತದೆ" ಎಂದು ಸೋನಾ ಹೈಡೆನ್ ಹೇಳಿದ್ದಾರೆ.

ಹಣ ಕಳೆದುಕೊಂಡರೆ ಬೇಸರವಾಗುತ್ತೆ. ಬಳಿಕ ಅತ್ತು ಸುಮ್ಮನಾಗ್ತೀನಿ. ಅಯ್ಯೋ ಹಣ ಅಲ್ವಾ ಮತ್ತೆ ಸಂಪಾದಿಸಬಹುದು ಎಂದುಕೊಳ್ತೀನಿ. ಆದ್ರೆ ಮನುಷ್ಯರನ್ನು ನಂಬಿ ಮೋಸ ಹೋದರೆ ಕಷ್ಟ ಎಂದು ಸೋನಾ ಹೇಳಿದ್ದಾರೆ. ನಾನು ಕೆಲವರ ಬಳಿ ಮಾತ್ರ ಮನಸ್ಸಿನಲ್ಲಿ ಇರುವುದೆಲ್ಲಾ ಹಂಚಿಕೊಂಡಿದ್ದೀನಿ. ಆ ಕೆಲವರು ಏನಾದರೂ ಮಾಡಿದ್ರೆ ನೋವಾಗುತ್ತದೆ. ಅದರಲ್ಲಿ ಒಬ್ಬರು ವಿಘ್ನೇಶ್ ಶಿವನ್. ಆದ್ರು ಒಳ್ಳೆ ಹುಡುಗ, ಚೆನ್ನಾಗಿರಲಿ, ಆದ್ರೆ ನನ್ನನ್ನು ಮರೆಯದೇ ಇದ್ದಿದ್ರೆ ಚೆನ್ನಾಗಿತ್ತು. ಏನು ಮಾಡುವುದು ಎಲ್ಲರೂ ಮನುಷ್ಯರೆ ಅಲ್ವೇ" ಎಂದಿದ್ದಾರೆ.

ನಟಿ ಸೋನಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಕನ್ನಡದ 'ನಮ್ಮೆಜಮಾನ್ರು' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಉದ್ಯಮಿ ಆಗಿ ಗುರ್ತಿಸಿಕೊಂಡಿದ್ದಾರೆ. ನಿರ್ಮಾಪಕಿಯಾಗಿ 'ಕನಿಮೊಳಿ' ಎಂಬ ಸಿನಿಮಾ ನಿರ್ಮಿಸಿದ್ದರು. ಸದ್ಯ ಒಂದು ಬಯೋಪಿಕ್ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗೆ ಆಕೆ ಹೆಚ್ಚು ನಟಿಸುತ್ತಿಲ್ಲ. 'ಬೂಮರ್ ಅಂಕಲ್' ನಟಿಸಿದ ಕೊನೆಯ ಸಿನಿಮಾ.

ಮೊದಲಿಗೆ 'ಪೋಡ ಪೋಡಿ' ಚಿತ್ರಕ್ಕೆ ವಿಘ್ನೇಶ್ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಸೋತ ಬಳಿಕ ಅವಕಾಶಗಳು ಇಲ್ಲದೇ ಹೊಟ್ಟೆಪಾಡಿಗಾಗಿ ನಟಿ ಸೋನಾ ಅವರ ಆಫೀಸ್‌ನಲ್ಲಿ ಕೆಲಸ ಮಾಡಿದ್ದರು. ಲಿರಿಕ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಮತ್ತೆ ಧನುಷ್ ಅವರಿಗೆ ಕಥೆ ಹೇಳಿ 'ನಾನುಂ ರೌಡಿದಾನ್' ಚಿತ್ರದ ಅವಕಾಶ ಗಿಟ್ಟಿಸಿದ್ದರು. ಬಳಿಕ ಕಟ್ಟಿಕೊಟ್ಟ 'ಥಾನಾ ಸೆರ್ಂಧ ಕೂಟಂ', 'ಕಾತುವಾಕುಲ ರೆಂಡು ಕಾದಲ್' ಸಿನಿಮಾಗಳು ಗೆಲ್ಲಲಿಲ್ಲ.

Read more about: kollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X