twitter
    For Quick Alerts
    ALLOW NOTIFICATIONS  
    For Daily Alerts

    ಫೆಬ್ರವರಿ 24 ರಂದು ಒಬ್ಬರ ಹುಟ್ಟುಹಬ್ಬ, ಇನ್ನೊಬ್ಬರ ಪುಣ್ಯ ಸ್ಮರಣೆ

    |

    ಭಾರತೀಯ ಚಿತ್ರರಂಗದಲ್ಲಿ ಫೆಬ್ರವರಿ 24 ಅಪರೂಪದ ಸ್ಮರಣೀಯ ದಿನವಾಗಿದೆ. ಸಿನಿಮಾ ಕ್ಷೇತ್ರ ಕಂಡ ಇಬ್ಬರು ಮಹಾನ್ ಪ್ರತಿಭೆಗಳನ್ನು ನೆನೆಯುವ ದಿನ. ಹೌದು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟಿ ಜೆ ಜಯಲಲಿತಾ ಹಾಗೂ ಶ್ರೀದೇವಿ ಅಭಿಮಾನಿಗಳ ಪಾಲಿಗೆ ಫೆಬ್ರವರಿ 24 ಮರೆಯಲಾಗದ ದಿನ.

    ಜೆ ಜಯಲಲಿತಾ ಅವರ ಜನ್ಮದಿನ ಹಾಗೂ ಶ್ರೀದೇವಿ ಅವರ ಪುಣ್ಯಸ್ಮರಣೆಯ ದಿನ. ಶ್ರೀದೇವಿ ಮತ್ತು ಜಯಲಲಿತಾ ಸ್ಮರಣಾರ್ಥವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಆದಿಪರಾಶಕ್ತಿಯಾಗಿ ಜಯಲಲಿತಾ ಹಾಗೂ ಮುರುಗನ್ ಪಾತ್ರದಲ್ಲಿ ಶ್ರೀದೇವಿ ನಟಿಸಿರುವ ಫೋಟೋ ಗಮನ ಸೆಳೆದಿದೆ. ಮುಂದೆ ಓದಿ...

    'ಆದಿಪರಾಶಕ್ತಿ' ಸಿನಿಮಾದಲ್ಲಿ ಒಟ್ಟಿಗೆ ನಟನೆ

    'ಆದಿಪರಾಶಕ್ತಿ' ಸಿನಿಮಾದಲ್ಲಿ ಒಟ್ಟಿಗೆ ನಟನೆ

    1971ರಲ್ಲಿ ತೆರೆಕಂಡಿದ್ದ ಆದಿಪರಾಶಕ್ತಿ ಚಿತ್ರದಲ್ಲಿ ಜಯಲಲಿತಾ ಮತ್ತು ಶ್ರೀದೇವಿ ಒಟ್ಟಿಗೆ ನಟಿಸಿದ್ದರು. ಅಂದಿನ ಸಮಯಕ್ಕೆ ಜಯಲಲಿತಾ ತಮಿಳು ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿದ್ದರು. ಶ್ರೀದೇವಿ ಆಗತಾನೆ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಜಯಲಲಿತಾ ಅವರ ನಿಧನರಾದ (ಡಿಸೆಂಬರ್ 5, 2016) ಸಮಯದಲ್ಲಿ ಶ್ರೀದೇವಿ ಈ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದರು.

    ಶ್ರೀದೇವಿ ಸಾವಿನ ಬಗ್ಗೆ ಬಾಂಬ್ ಸಿಡಿಸಿದ ಕೇರಳ ಡಿಜಿಪಿ: ಅದು ಆಕಸ್ಮಿಕವಲ್ಲ, ಕೊಲೆ.!ಶ್ರೀದೇವಿ ಸಾವಿನ ಬಗ್ಗೆ ಬಾಂಬ್ ಸಿಡಿಸಿದ ಕೇರಳ ಡಿಜಿಪಿ: ಅದು ಆಕಸ್ಮಿಕವಲ್ಲ, ಕೊಲೆ.!

    ಜಯಲಲಿತಾರಿಂದ ಪ್ರಶಸ್ತಿ ಪಡೆದಿದ್ದ ಶ್ರೀದೇವಿ

    ಜಯಲಲಿತಾರಿಂದ ಪ್ರಶಸ್ತಿ ಪಡೆದಿದ್ದ ಶ್ರೀದೇವಿ

    ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಟಿ ಶ್ರೀದೇವಿ ಸಿಎಂ ಕೈಯಿಂದ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಫೋಟೋ ಸಹ ವೈರಲ್ ಆಗಿದೆ. ಮೊದಲಿನಿಂದಲೂ ಜಯಲಲಿತಾ ಅವರ ಮೇಲೆ ಶ್ರೀದೇವಿ ಅಪಾರ ಗೌರವ ಹೊಂದಿದ್ದರು.

    ದುಬೈನಲ್ಲಿ ಶ್ರೀದೇವಿ ಸಾವು

    ದುಬೈನಲ್ಲಿ ಶ್ರೀದೇವಿ ಸಾವು

    ಶ್ರೀದೇವಿ ನಿಧನರಾಗಿ ಮೂರು ವರ್ಷ ಕಳೆದಿದೆ. 2018ರ ಫೆಬ್ರವರಿ 24 ರಂದು ದುಬೈನ ಹೋಟೆಲ್‌ವೊಂದರ ಬಾತ್‌ಟಾಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದು ಸಹಜ ಸಾವು ಅಥವಾ ಕೊಲೆಯೋ ಎಂಬ ಚರ್ಚೆ ಬಹಳ ದೊಡ್ಡಮಟ್ಟದಲ್ಲಿ ನಡೆದಿತ್ತು. ಅಂತಿಮವಾಗಿ ಶ್ರೀದೇವಿ ಸಾವು ಸಹಜ ಎಂದು ದುಬೈ ಪೊಲೀಸರು ಪ್ರಕರಣ ಅಂತ್ಯ ಮಾಡಿದ್ದರು.

    ನಟ ಶೋಭನ್ ಬಾಬು ಹಾಗೂ ಜಯಲಲಿತ ಮದುವೆ ವಿಚಾರ ವೈರಲ್ನಟ ಶೋಭನ್ ಬಾಬು ಹಾಗೂ ಜಯಲಲಿತ ಮದುವೆ ವಿಚಾರ ವೈರಲ್

    ಮೇಲುಕೋಟೆಯಲ್ಲಿ ಜಯಲಲಿತಾ ಜನನ

    ಮೇಲುಕೋಟೆಯಲ್ಲಿ ಜಯಲಲಿತಾ ಜನನ

    1948ರಲ್ಲಿ ಜಯಲಲಿತಾ ಮೈಸೂರು ಪ್ರಾಂತ್ಯದ ಮೇಲುಕೋಟೆಯಲ್ಲಿ ಜನಿಸಿದ್ದರು. ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ ಜಯಲಲಿತಾ ನಂತರ ಐದು ಬಾರಿ ಮುಖ್ಯಮಂತ್ರಿಯಾದರು. 2016ರ ಡಿಸೆಂಬರ್ 5 ರಂದು ಜಯಲಲಿತಾ ಅನಾರೋಗ್ಯದಿಂದ ಸಾವನ್ನಪ್ಪಿದರು.

    Recommended Video

    ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

    English summary
    February 24th, is the birthday of former CM and actress J Jayalalitha and also the 3rd death anniversary of Actress Sridevi’s passing.
    Wednesday, February 24, 2021, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X