ಇನ್ಸ್ಟಾಗ್ರಾಮ್ ನಲ್ಲಿ 7 ಪೋಸ್ಟ್ ಗಳನ್ನು ಬಿಟ್ಟು ಎಲ್ಲಾ ಡಿಲೀಟ್ ಮಾಡಿದ ನಟಿ ತ್ರಿಷಾ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತ್ರಿಷಾ ಕೃಷ್ಣನ್ ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗೆ ತ್ರಿಷಾ ಸಾಮಾಜಿಕ ಜಾಲತಾಣದಿಂದ ಕೊಂಚ ಬ್ರೇಕ್ ಪಡೆದು ಅಚ್ಚರಿ ಮೂಡಿಸಿದ್ದರು. ಆ ಬಳಿಕ ಮದುವೆ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದರು. ಇದೀಗ ತ್ರಿಷಾ ಇನ್ಸ್ಟಾಗ್ರಾಮ್ ನಲ್ಲಿರುವ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ನಟಿ ತ್ರಿಷಾ ಇನ್ಸ್ಟಾ ಗ್ರಾಮ್ ನಲ್ಲಿ ನೂರಾರು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಸೋಮವಾರ (ಆಗಸ್ಟ್ 18) ಎಲ್ಲಾ ಪೋಸ್ಟ್ ಗಳನ್ನು ಏಕಾಏಕಿ ಡಿಲೀಟ್ ಮಾಡಿದ್ದಾರೆ. ಸದ್ಯ ತ್ರಿಷಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉಳಿದಿರುವುದು ಕೇವಲ 7 ಪೋಸ್ಟ್ ಗಳು ಮಾತ್ರ. ತ್ರಿಷಾ ಯಾಕೆ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಮುಂದೆ ಓದಿ..

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದರು

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದರು

ಇನ್ಸ್ಟಾಗ್ರಾಮ್ ನಲ್ಲಿ ತ್ರಿಷಾಗೆ ಮಿಲಿಯನ್ ಗಟ್ಟಲೆ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. 2.4ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ನೂರಾರು ಫೋಸ್ಟ್ ಗಳನ್ನು ಹಾಕಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳು, ವಿಡಿಯೋ ತುಂಬಿದ್ದವು. ಆದರೆ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತೀಚಿಗನ 7 ಪೋಸ್ಟ್ ಗಳು ಮಾತ್ರ ಕಾಣಿಸುತ್ತಿವೆ. ಯಾಕೆ ಹೀಗೆ ಮಾಡಿದ್ದಾರೆ ಎಂದು ಸ್ಪಷ್ಟನೆಯೂ ನೀಡಿಲ್ಲ.

ಸಾಮಾಜಿಕ ಜಾಲತಾಣದಿಂದ ಮಾಯವಾಗಿದ್ದ ನಟಿ

ಸಾಮಾಜಿಕ ಜಾಲತಾಣದಿಂದ ಮಾಯವಾಗಿದ್ದ ನಟಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ತ್ರಿಷಾ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆದಿದ್ದರು. ಸುಮಾರು ಒಂದು ತಿಂಗಳಿಂದ ತ್ರಿಷಾ ಸೋಷಿಯಲ್ ಮೀಡಿಯಾ ಬಳಸುತ್ತಿರಲಿಲ್ಲ. ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ತ್ರಿಷಾ ದಿಢೀರ್ ಮಾಯವಾಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ನಂತರ ಸ್ಟನಿಂಗ್ ಸೆಲ್ಫಿ ಶೇರ್ ಮಾಡುವ ಮೂಲಕ ಮತ್ತೆ ವಾಪಸ್ ಆಗಿದ್ದರು.

ನಟ ಶಿಂಬು ಜೊತೆ ಮದುವೆ ವದಂತಿ

ನಟ ಶಿಂಬು ಜೊತೆ ಮದುವೆ ವದಂತಿ

ತಮಿಳಿನ ವಿವಾದಾತ್ಮಕ ನಟ ಅಂತಾನೆ ಖ್ಯಾತಿಗಳಿಸಿರುವ ಶಿಂಬು ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಲಾಕ್ ಡೌನ್ ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಶಿಂಬು ಮತ್ತು ತ್ರಿಷಾ ನಡುವೆ ಉತ್ತಮ ಬಾಂದವ್ಯವಿದೆ, ಇಬ್ಬರು ಉತ್ತಮ ಸ್ನೇಹಿತರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ ಎಂದು ಹೇಳಲಾಗುತ್ತಿದೆ. ಆದರೆ ಸುದ್ದಿಯನ್ನು ತ್ರಿಷಾ ತಳ್ಳಿಹಾಕಿದ್ದಾರೆ.

ತ್ರಿಷಾ ಸಿನಿಮಾಗಳು

ತ್ರಿಷಾ ಸಿನಿಮಾಗಳು

ತ್ರಿಷಾ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪರಮಪಾದಂ ವಿಲಾಯಟ್ಟು ಮತ್ತು ಪೊನ್ನಿಯನ್ ಸೆಲ್ವನ್ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದಿಂದ ಹೊರಬಂದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

More from Filmibeat

English summary
Actress Trisha Krishnan deleted her instagram post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X