ಕ್ರಿಸ್‌ಮಸ್ ದಿನವೇ ಮಗನನ್ನು ಕಳೆದುಕೊಂಡೆ ಎಂದ ತ್ರಿಶಾ ಕೃಷ್ಣನ್; ಸ್ವಲ್ಪ ದಿನ ಯಾರ ಕೈಗೂ ಸಿಗದಿರಲು ನಿರ್ಧಾರ
ದಕ್ಷಿಣ ಭಾರತದ ದುಬಾರಿ ನಟಿ ತ್ರಿಶಾ ಕೃಷ್ಣನ್ ನೋವಿನಲ್ಲಿ ಇದ್ದಾರೆ. ಕ್ರಿಸ್‌ಮಸ್ ದಿನವೇ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡಿದ್ದಾರೆ. ಹಾಗಂತ ಮನೆಯ ಸದಸ್ಯರು ಅಂದರೆ, ತ್ರಿಶಾ ಕೃಷ್ಣನ್ ಅವರ ಸಾಕು ನಾಯಿ 'ಝೊರೋ'. ಮಗನಂತೆ ಸಾಕಿದ್ದ ಝೋರೋ ಇಂದು (ಡಿಸೆಂಬರ್ 25) ಅಗಲಿದೆ. ಈ ನೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬ್ಯುಸಿ ಶೆಡ್ಯೂಲ್ ಇತ್ತು. ಇದೇ ವೇಳೆ ಅವರ ನೆಚ್ಚಿನ ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಕೆಲವು ದಿನಗಳ ಕಾಲ ಸಿನಿಮಾದಿಂದಲೇ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದಾರೆ. ತಮ್ಮ ನೆಚ್ಚಿನ ಸಾಕು ನಾಯಿ ಝೊರೋ ಅನ್ನು ತ್ರಿಶಾ ತುಂಬಾನೇ ಹಚ್ಚಿಕೊಂಡಿದ್ದರು. ಅದರ ಅಗಲಿಕೆಯ ನೋವು ಅವರನ್ನು ಕಾಡುತ್ತಿದ್ದು, ಸಿನಿಮಾ, ಸ್ನೇಹಿತರು ಎಲ್ಲರಿಂದಲೂ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ.

ತ್ರಿಶಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಾಕು ನಾಯಿ ಝೊರೋ ಜೊತೆಗಿನ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಆ ಫೋಟೊಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿತ್ತು. ಆದರೆ, ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ತ್ರಿಶಾ ಅವರನ್ನು ಬಿಟ್ಟು ಝೊರೋ ಅಗಲಿದೆ. ಇದೇ ನೋವಿನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದಾರೆ.
"ನನ್ನ ಮಗ ಝೊರೋ ಕ್ರಿಸ್‌ಮಸ್ ದಿನವಾದ ಇಂದು ಅಗಲಿದ್ದಾನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಝೊರೋ ಇಲ್ಲದ ದಿನ ಝೀರೋ ಎಂದು ಗೊತ್ತಿದೆ. ನಾನು ಹಾಗೂ ನನ್ನ ಕುಟುಂಬ ಹೃದಯ ಒಡೆದು ಹೋಗಿದೆ. ಹಾಗೇ ಶಾಕ್‌ನಲ್ಲಿ ಇದ್ದೇವೆ. ಹೀಗಾಗಿ ಕೆಲಸದಿಂದ ಕೆಲವು ದಿನಗಳು ದೂರು ಇಳಿಯಲಿದ್ದೇನೆ. ಹಾಗೇ ಯಾರ ಕೈಗೂ ಸಿಗುವುದಿಲ್ಲ." ಎಂದು ತ್ರಿಶಾ ತಮ್ಮ ಪೋಸ್ಟ್‌ನಲ್ಲಿ ತಿಳಿದಿದ್ದಾರೆ.
ಬಹುಭಾಷಾ ನಟಿ ತ್ರಿಶಾ ಈಗಲೂ ತಮಿಳಿನ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಯನತಾರಾ ಬಿಟ್ಟರೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ತ್ರಿಶಾ ಕೃಷ್ಣನ್ ಕೂಡ ಸೇರಿಕೊಂಡಿದ್ದಾರೆ. ಇತ್ತೀಚೆಗೆ ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್ ಅವರೊಂದಿಗೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಅನ್ನೋ ಸುದ್ದಿ ತಮಿಳುನಾಡಿನಲ್ಲಿ ಹಲ್‌ಚಲ್ ಎಬ್ಬಿಸಿದೆ.
ದಳಪತಿ ವಿಜಯ್ ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳುನಾಡಿನ ಮುಂದಿನ ಸಿಎಂ ಎಂದೇ ಬಿಂಬಿತವಾಗುತ್ತಿರುವ ವಿಜಯ್ ಚುನಾವಣೆಗೆ ಸ್ಪರ್ಧಿಸುವ ಮೊದಲೇ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವದಂತಿಗಳು ಹಬ್ಬಿವೆ. ಪತ್ನಿ ಸಂಗೀತಾಗೆ ವಿಚ್ಚೇದನ ನೀಡಿ, ನಟಿ ತ್ರಿಶಾ ಕೃಷ್ಣನ್ ಅವರನ್ನು ವಿವಾಹವಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಈ ಮಧ್ಯೆ ಇತ್ತೀಚೆಗೆ ಕೀರ್ತಿ ಸುರೇಶ್ ಮದುವೆಗೆ ತ್ರಿಶಾ ಹಾಗೂ ದಳಪತಿ ವಿಜಯ್ ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡಿದ್ದಾರೆ ಅನ್ನೋದು ಸುದ್ದಿಯಾಗಿತ್ತು. ಕೆಲವು ಫೋಟೊಗಳು ಕೂಡ ಹರಿದಾಡಿದ್ದವು. ಈ ಫೋಟೊಗಳು ಲೀಕ್ ಆದ ಬಳಿಕ ವಿಜಯ್ ಹಾಗೂ ತ್ರಿಶಾ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಅಂಚಿಕೊಂಡಿದ್ದವು. ಈ ವಿಷಯ ಚರ್ಚೆಯಲ್ಲಿರುವಾಗಲೇ ತ್ರಿಶಾ ಸಾಕಿದ ಪ್ರೀತಿಯ ನಾಯಿ ಸಾವನ್ನಪ್ಪಿದೆ. ಅದಕ್ಕೆ ಭಾವನಾತ್ಮಕ ಫೋಸ್ಟ್ ಹಾಕಿ ಎಲ್ಲದರಿಂದಲೂ ಕೆಲವು ದಿನ ದೂರವಿರುವುದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











