ಸಿಎಂ ಆಗುವ ತ್ರಿಶಾ ಕನಸು ನನಸಾಗುತ್ತಾ? ದಳಪತಿ ವಿಜಯ್ ಜೊತೆ ರಾಜಕೀಯರಂಗಕ್ಕೆ ಎಂಟ್ರಿ?
ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಅಧ್ಯಕ್ಷ, ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿಚಾರ ಕೋಲಾಹಲ ಸೃಷ್ಟಿಸಿದೆ. ಅತ್ತ ಸಿನಿಮಾರಂಗ ಇತ್ತ ರಾಜಕೀಯರಂಗದಲ್ಲಿ ಇದೇ ಹಾಟ್ ಟಾಪಿಕ್ ಆಗಿದೆ. ಇನ್ನು ಇವರಿಬ್ಬರ ಡಿವೋರ್ಸ್ ವಿಚಾರದಲ್ಲಿ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಅಭಿಮಾನಿಗಳು ದಳಪತಿ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಸಾಕಷ್ಟು ಜನ ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ. ಎದುರಾಳಿ ಪಕ್ಷದ ನಾಯಕರು ಇದನ್ನೇ ಆಧಾರವಾಗಿಟ್ಟುಕೊಂಡು ರಾಜಕಾರಣದಲ್ಲಿ ವಿಜಯ್ ಹಣಿಯಲು ಮುಂದಾಗಿದ್ದಾರೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ವದಂತಿ ಇಂದು ನಿನ್ನೆಯದ್ದಲ್ಲ. ಬಹಳ ದಿನಗಳಿಂದ ಇಂತಾದೊಂದು ಊಹಾಪೋಹ ಶುರುವಾಗಿತ್ತು. ಸದ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾ ನಟಿಯೊಬ್ಬರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವಿಜಯ್ ಹಾಗೂ ತ್ರಿಶಾ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಜೋಡಿ ಶಾಕ್ ಕೊಟ್ಟಿದೆ. ಇಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಬಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಆಡಿಕೊಳ್ಳುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ದಳಪತಿಗೆ ಇದೆಲ್ಲಾ ಬೇಕಿರಲಿಲ್ಲ ಎಂದು ಚಿತ್ರರಂಗದವರೇ ಮಾತನಾಡುವಂತಾಗಿದೆ. ಇದೆಲ್ಲದರ ನಡುವೆ ತ್ರಿಶಾ ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ಹಳೇ ಸಂದರ್ಶನವೊಂದರಲ್ಲಿ ತ್ರಿಶಾ ತಾನು ಸಿಎಂ ಆಗಬೇಕು ಎನ್ನುವ ಕನಸು ಬಿಚ್ಚಿಟ್ಟಿದ್ದರು.
ವಿಜಯ್ ಈಗಾಗಲೇ ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯರಂಗ ಪ್ರವೇಶಿಸಿದ್ದಾರೆ. ಅದಕ್ಕಾಗಿ ಸಿನಿಮಾವನ್ನು ತ್ಯಾಗ ಮಾಡಿದ್ದಾರೆ. ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳುತ್ತಿದ್ದಾರೆ. ತ್ರಿಶಾ ಕೂಡ ವಿಜಯ್ ಜೊತೆ ಚುನಾವಣೆ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಹಿಂದೆ ಎಂಜಿಆರ್ ಜೊತೆ ಜಯಲಲಿತಾ ರಾಜಕೀಯರಂಗಕ್ಕೆ ಬಂದು ತಮಿಳುನಾಡು ಸಿಎಂ ಆಗಿದ್ದರು. ಅವರ ಹಾದಿಯಲ್ಲೇ ವಿಜಯ್, ತ್ರಿಶಾ ರಾಜಕೀಯರಂಗದಲ್ಲಿ ಮಿಂಚಬಹುದು ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
1999ರಲ್ಲಿ ತ್ರಿಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 2004ರಲ್ಲಿ ಸನ್ ಟಿವಿ ವಾಹಿನಿ ಒಂದು ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಬಂದು ಗೆದ್ದಿದ್ದೀರಾ. ಈಗ ನಟಿಸುತ್ತಿದ್ದೀರಾ. ಮುಂದೆ ಏನು ಮಾಡಬೇಕು ಎನ್ನುವ ಪ್ರಶ್ನೆ ಎದುರಾಗಿತ್ತು. ಕೂಡಲೇ ಪ್ರತಿಕ್ರಿಯಿಸಿದ್ದ ತ್ರಿಶಾ "ನಾನು ಸಿಎಂ ಆಗಬೇಕು. ನಿಜವಾಗಿ ಹೇಳ್ತಿದ್ದೀನಿ. ಖಂಡಿತ.. 10 ವರ್ಷ ಬಿಟ್ಟು ನೋಡಿ. ನಾನು ಸಿಎಂ ಆಗ್ತೀನಿ. ನನಗೆ ವೋಟ್ ಹಾಕಿ ನೋಡಿ. ಆಮೇಲೆ ರಾಜಕಾರಣಿ ಆಗಿ ಏನೆಲ್ಲಾ ಮಾಡ್ತೀನಿ ಅಂತ" ಹೇಳಿದ್ದರು.
ತ್ರಿಶಾ ಅಂದೇ ಸಿಎಂ ಆಗುವ ಕನಸು ಕಂಡಿದ್ದರು. ವಿಜಯ್ ಜೊತೆ ಸೇರಿ ಅದನ್ನು ನನಸು ಮಾಡಿಕೊಳ್ಳಲು ಹೊರಟ್ಟಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಇಷ್ಟು ರಾಜಾರೋಷವಾಗಿ ಮದುವೆಗೆ ತ್ರಿಶಾ ಅವರನ್ನು ವಿಜಯ್ ಕರ್ಕೊಂಡು ಬಂದಿದ್ದಾರೆ. ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲ್ವಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ನಾಲ್ಕೈದು ಸಿನಿಮಾಗಳಲ್ಲಿ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ನಟಿಸಿದ್ದಾರೆ. ಗಿಲ್ಲಿ, ತಿರುಪಾಚ್ಚಿ ಹಾಗೂ ಲಿಯೋ ಸಿನಿಮಾಗಳು ಹಿಟ್ ಆಗಿತ್ತು. ಇವರಿಬ್ಬರದ್ದು ಸೂಪರ್ ಹಿಟ್ ಜೋಡಿ ಎಂದು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ವಿಜಯ್ ಹಾಗೂ ತ್ರಿಶಾ ಇಬ್ಬರೂ ಆತ್ಮೀಯ ಸ್ನೇಹಿತರು ಅಷ್ಟೆ. ಒಟ್ಟಿಗೆ ಒಂದೇ ಸಮಯಕ್ಕೆ ಮದುವೆ ಸಮಾರಂಭಕ್ಕೆ ಬಂದಿದ್ದಾರೆ. ಅದಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಪತ್ನಿ ಸಂಗೀತಾ ಅವರಿಗೆ 250 ಕೋಟಿ ರೂ. ಜೀವನಾಂಶ ನೀಡಲು ವಿಜಯ್ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











