ಚಿತ್ರರಂಗಕ್ಕೆ ತಮಿಳು ನಟಿ ತ್ರಿಶಾ ಗುಡ್‌ಬೈ; ಮೌನ ಮುರಿದ ಚೆಲುವೆ ಹೇಳಿದ್ದಿಷ್ಟು

ಬಹುಭಾಷಾ ನಟಿ ತ್ರಿಶಾ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಅಷ್ಟೇ ಅಲ್ಲ ಆಕೆ ಇತ್ತೀಚೆಗೆ ಮಾಡಿದ್ದ ಪೋಸ್ಟ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿತ್ತು. ಇನ್ನು ಸಿನಿಮಾಗಳಿಂದ ದೂರಾಗಿ ದಳಪತಿ ವಿಜಯ್ ಜೊತೆ ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನುವ ಗುಸುಗುಸು ಜೋರಾಗಿದೆ. ಇದೆಲ್ಲದರ ಬಗ್ಗೆ ಸ್ವತಃ ನಟಿ ತ್ರಿಶಾ ಪ್ರತಿಕ್ರಿಯಿಸಿದ್ದಾರೆ.

ನಟ ವಿಜಯ್ ಹಾಗೂ ಪತ್ನಿ ಸಂಗೀತ ಡಿವೋರ್ಸ್ ವಿವಾದದಲ್ಲಿ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿರುವುದು ಗೊತ್ತೇಯಿದೆ. ಡಿವೋರ್ಸ್ ಚರ್ಚೆ ಶುರುವಾಗಿ ವಾರಕ್ಕೆ ತ್ರಿಶಾ ಜೊತೆ ಒಂದೇ ಕಾರಿನಲ್ಲಿ ಬಂದು ಮದುವೆ ಸಮಾರಂಭದಲ್ಲಿ ವಿಜಯ್ ಒಟ್ಟಿಗೆ ಭಾಗವಹಿಸಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ದಳಪತಿ ವಿಜಯ್ ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು.

Actress Trisha Krishnan Slams Retirement Political Entry Rumors Linked to Vijay

ವಿಜಯ್ ಹಾಗೂ ತ್ರಿಶಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಇಂದು ನಿನ್ನೆಯದ್ದಲ್ಲ. ಬಹಳ ದಿನಗಳಿಂದ ಇಂತಾದೊಂದು ಊಹಾಪೋಹ ಶುರುವಾಗಿತ್ತು. ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು. ಎಂಜಿಆರ್ ಜೊತೆ ಜಯಲಲಿತಾ ರಾಜಕೀಯರಂಗಕ್ಕೆ ಬಂದು ಸಕ್ಸಸ್ ಕಂಡಂತೆ ವಿಜಯ್ ಜೊತೆ ತ್ರಿಶಾ ಪೊಲಿಟಿಕಲ್ ಜರ್ನಿ ಶುರು ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇದೇ ಕಾರಣಕ್ಕೆ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರೆ ಎನ್ನುವ ವದಂತಿ ಹರಿದಾಡ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ನಟಿ ಈಗ ಎಲ್ಲದ್ದಕ್ಕೂ ಬ್ರೇಕ್ ಹಾಕಿದ್ದಾರೆ.

"ನಾನು ಚಿತ್ರರಂಗದಿಂದ ದೂರಾಗುತ್ತೇನೆ, ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನೆ, ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ, ನಾನು ಇನ್ನೇನಾದರೂ ಫಿಕ್ಷನ್ ಕೋಟ್‌ನಲ್ಲಿ ಸೇರಿಸಬೇಕಾ?" ಎಂದು ನಟಿ ತ್ರಿಶಾ ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ವದಂತಿಗಳೆಲ್ಲಾ ಸುಳ್ಳು ಎಂದು ತಿಳಿಸಿದ್ದಾರೆ.

Actress Trisha Krishnan Slams Retirement Political Entry Rumors Linked to Vijay

"ಪ್ರೀತಿಯೇ ಸರ್ವಸ್ವ ಅಲ್ಲ. ಆದರೆ, ಪ್ರೀತಿ ಇಲ್ಲದಿದ್ದರೆ ಯಾವುದಕ್ಕೂ ಅರ್ಥವಿಲ್ಲ" ಎನ್ನುವ ಕೋಟ್‌ವೊಂದನ್ನು ತ್ರಿಶಾ ಇತ್ತೀಚೆಗೆ ಹಂಚಿಕೊಂಡಿದ್ದರು. ಇದನ್ನು ನೋಡಿ ಸಾಕಷ್ಟು ಜನ ಕಾಮೆಂಟ್ ಮಾಡಲು ಆರಂಭಿಸಿದ್ದರು. ಹಾಗಾಗಿ ಕೋಟ್‌ನಲ್ಲಿ ಇನ್ನು ಯಾವುದಾದರೂ ವದಂತಿ ಸೇರಿಸಬೇಕಾ? ಎಂದು ಪ್ರಶ್ನಿಸುವ ಪ್ರಯತ್ನ ಮಾಡಿದ್ದಾರೆ.

ನಟಿ ತ್ರಿಶಾ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿ 25 ವರ್ಷ ಕಳೆದಿದೆ. ಇವತ್ತಿಗೂ ನಾಯಕಿಯಾಗಿಯೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಳಪತ ವಿಜಯ್ ಜೊತೆ 4 ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. 'ಗಿಲ್ಲಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಲಿಯೋ' ಚಿತ್ರದಲ್ಲಿ ಕೂಡ ಇಬ್ಬರೂ ಜೊತೆಯಾಗಿದ್ದರು. 'GOAT' ಚಿತ್ರದ ಹಾಡೊಂದರಲ್ಲಿ ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದ್ದರು.

ವಯಸ್ಸು 40 ದಾಟಿದ್ರು ಇನ್ನು ತ್ರಿಶಾ ಮದುವೆ ಆಗಿಲ್ಲ. ಕೆಲ ವರ್ಷಗಳ ಹಿಂದೆ ಉದ್ಯಮಿ ಒಬ್ಬರ ಜೊತೆ ಮದುವೆ ನಿಶ್ಚಯವಾಗಿತ್ತು. ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಸಿನಿಮಾಗಳಲ್ಲಿ ನಟಿಸಬಾರದು ಎನ್ನುವ ಷರತ್ತು ಹಾಕಿದ್ದಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾಗಿ ಆಕೆ ಹೇಳಿದ್ದರು. ಜೀವನ ಪರ್ಯಂತ ನಟಿಯಾಗಿಯೇ ಇರಬೇಕು ಎನ್ನುವುದು ನನ್ನ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

1999ರಲ್ಲಿ 'ಜೋಡಿ' ಎಂಬ ಚಿತ್ರದಲ್ಲಿ ಮೊದಲ ಬಾರಿ ತ್ರಿಶಾ ನಟಿಸಿದ್ದರು. ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದರು. ಕನ್ನಡದ 'ಪವರ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದು ಗೊತ್ತೇಯಿದೆ. ಆ ಬಳಿಕ ಮತ್ತೆ ಯಾವುದೇ ಕನ್ನಡ ಚಿತ್ರದಲ್ಲಿ ತ್ರಿಶಾ ನಟಿಸಲಿಲ್ಲ. ಸದ್ಯ ಸೂರ್ಯ ಜೊತೆ 'ಕರುಪ್ಪು', ಚಿರಂಜೀವಿ ಜೊತೆ 'ವಿಶ್ವಂಭರ' ಹಾಗೂ ಮೋಹನ್ ಲಾಲ್ ಜೊತೆ 'ರಾಮ್' ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

Read more about: trisha vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X