4ನೇ ಮದುವೆ ದಿನಾಂಕ ಘೋಷಿಸಿದ ನಟಿ; ಈ ಬಾರಿ ಕೊರಿಯೋಗ್ರಫರ್ ಜೊತೆ ಡುಂಡುಂಡುಂ ಪಿಪಿಪಿ

ಇತ್ತೀಚೆಗೆ ಮದುವೆ ಬಂಧ ಎನ್ನುವುದು ಅಷ್ಟೇನು ಗಟ್ಟಿಯಾಗಿ ಉಳಿಯುತ್ತಿಲ್ಲ. ಡಿವೋರ್ಸ್ ಎನ್ನುವುದು ಸರ್ವೇ ಸಾಧಾರಣ ಎನ್ನುವಂತಾಗಿದೆ. ಒಟ್ಟಿಗೆ ಬಾಳುವುದು ಇಷ್ಟವಿಲ್ಲ ಎನಿಸಿದಾಗ ಪರಸ್ಪರ ಒಪ್ಪಿಗೆ ಪಡೆದು ದೂರಾಗುತ್ತಿದ್ದಾರೆ. ಸಿನಿಮಾ ತಾರೆಯರು ಡಿವೋರ್ಸ್ ಕೊಟ್ಟು ದೂರಾಗುವುದು ದೊಡ್ಡದಾಗಿ ಸುದ್ದಿ ಆಗುತ್ತದೆ.

ಇನ್ನು ಒಬ್ಬರಿಗೆ ಡಿವೋರ್ಸ್ ಕೊಟ್ಟು ಮತ್ತೊಬ್ಬರ ಕೈ ಹಿಡಿಯುವುದು ಕೂಡ ಹೆಚ್ಚಾಗುತ್ತಿದೆ. ಕೆಲವರು ಒಮ್ಮೆ ಡಿವೋರ್ಸ್ ಪಡೆದ ಬಳಿಕ ಒಂಟಿಯಾಗಿಯೇ ಇದ್ದು ಬಿಡಲು ತೀರ್ಮಾನಿಸುತ್ತಾರೆ. ಆದರೆ ಇನ್ನು ಕೆಲವರು ಮತ್ತೊಮ್ಮೆ ಪ್ರೀತಿಯ ಹುಡುಕಾಟ ನಡೆಸುತ್ತಾರೆ. ಎಲ್ಲವೂ ಸರಿಯಾಗಿ ಇರುತ್ತದೆ, ಹೊಸ ಸಂಗಾತಿ ಜೊತೆ ಹೊಸ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

Actress Vanitha Vijayakumar announces her fourth marriage with Robert

ಇಲ್ಲೊಬ್ಬ ನಟಿ ಒಂದಲ್ಲ ಎರಡಲ್ಲ ಈಗಾಗಲೇ ಮೂರು ಮದುವೆ ಆಗಿದ್ದಾರೆ. ಭಿನ್ನಾಭಿಪ್ರಾಯಗಳಿಂದ ಮೂವರಿಂದರೂ ದೂರಾಗಿ ಡಿವೋರ್ಸ್ ಪಡೆದಿದ್ದಾರೆ. ಇದೀಗ ನಾಲ್ಕನೇ ಬಾರಿ ಮದುವೆಗೆ ಸಜ್ಜಾಗಿದ್ದಾರೆ. ಡ್ಯಾನ್ಸ್ ಕೊರಿಯೋಗ್ರಫರ್ ಜೊತೆ ಹಸೆಮಣೆ ಏರಲು ಮುಂದಾಗಿದ್ದಾರೆ. ಮದುವೆ ದಿನಾಂಕವನ್ನು ಕೂಡ ಘೋಷಣೆ ಮಾಡಿದ್ದಾರೆ. ಇದೇ ಈಗ ಹಾಟ್ ಟಾಪಿಕ್ ಆಗಿದೆ.

ತಮಿಳು ನಟ ವಿಜಯ್ ಕುಮಾರ್ ಪುತ್ರಿ ವನಿತಾ ಇದೀಗ 4ನೇ ಮದುವೆಗೆ ಮುಂದಾಗಿದ್ದಾರೆ. ಹಿರಿಯ ನಟ ವಿಜಯ್ ಕುಮಾರ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ವನಿತಾ ಸಹೋದರಿ ಶ್ರೀದೇವಿ ಸಹ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕೆಲ ತಮಿಳು, ತೆಲುಗು ಸಿನಿಮಾಗಳಲ್ಲಿ ವನಿತಾ ನಟಿಸಿದ್ದರು. 1995ರಲ್ಲಿ ಬಂದ ತಮಿಳಿನ 'ಚಂದ್ರಲೇಖ' ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿ ನಟಿಸಿದ್ದರು.

ಮುಂದೆ 'ಮಾಣಿಕ್ಕಂ', 'ಮಳ್ಳಿ ಪೆಳ್ಳಿ', 'ಅನೀತಿ', 'ಹಾರ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ವನಿತಾ ಬಣ್ಣ ಹಚ್ಚಿದ್ದರು. ತಮಿಳು ಬಿಗ್‌ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಎರಡೆರಡು ಬಾರಿ ಮನೆ ಒಳಗೆ ಹೋಗಿ ಬಳಿ ಎಲಿಮಿನೇಟ್ ಆಗಿದ್ದರು. ಚಿತ್ರರಂಗದಲ್ಲಿ ದೊಡ್ಡದಾಗಿ ಸಾಧಿಸಲು ಅವಕಾಶ ಇದ್ದರೂ ಅದು ಸಾಧ್ಯವಾಗಲಿಲ್ಲ.

Actress Vanitha Vijayakumar announces her fourth marriage with Robert

ವನಿತಾ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ 24 ವರ್ಷಗಳ ಹಿಂದೆ ಆಕಾಶ್ ಎಂಬುವವರ ಕೈ ಹಿಡಿದಿದ್ದರು. 7 ವರ್ಷಗಳ ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಅದೇ ವರ್ಷ ಆನಂದ್ ಜಯರಾಜನ್ ಜೊತೆ ಹಸೆಮಣೆ ಏರಿದ್ದರು. ಈ ಸಂಸಾರ ಕೂಡ ಬಹಳ ದಿನ ಉಳಿಯಲಿಲ್ಲ. 5 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು.

2ನೇ ಡಿವೋರ್ಸ್ ಬಳಿಕ 8 ವರ್ಷ ವನಿತಾ ಒಬ್ಬೊಂಟಿಯಾಗಿದ್ದರು. ಆದರೆ 2020ರಲ್ಲಿ ಪೀಟರ್ ಪೌಲ್ ಎಂಬುವವರ ಜೊತೆ 3ನೇ ಮದುವೆ ಆಗಿದ್ದರು. ಆದರೆ ಅದೇ ವರ್ಷ ಅದು ಮುರಿದು ಬಿತ್ತು. 3ನೇ ಬಾರಿ ಡಿವೋರ್ಸ್ ಪಡೆದುಕೊಂಡಿದ್ದರು. ಪೀಟರ್‌ಗೆ ಅದಾಗಲೇ ಒಂದು ಮದುವೆ ಆಗಿ ಇಬ್ಬರು ಮಕ್ಕಳು ಇದ್ದರು. ಆತನ ಪತ್ನಿ ತನ್ನಿಂದ ಡಿವೋರ್ಸ್ ಪಡೆಯದೇ ಪೀಟರ್ ಎರಡನೇ ಮದುವೆ ಆಗಿದ್ದಾರೆ ಎಂದು ದೂರು ನೀಡಿದ್ದರು. ಹಾಗಾಗಿ ಆತನಿಂದಲೂ ವನಿತಾ ಡಿವೋರ್ಸ್ ಪಡೆದು ದೂರಾಗುವಂತಾಯಿತು.

ವನಿತಾ ಇದೀಗ ಕೊರಿಯೋಗ್ರಫರ್ ರಾಬರ್ಟ್ ಜೊತೆ 4ನೇ ಮದುವೆಗೆ ಸಿದ್ಧರಾಗಿದ್ದಾರೆ. ಈತ ಒಂದಷ್ಟು ಸಿನಿಮಾಗಳಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಡ್ಯಾನ್ಸ್ ಕೊರಿಯೋಗ್ರಫರ್ ಆಗಿದ್ದಾರೆ. ಅಂದಹಾಗೆ 2013ರಲ್ಲೇ ರಾಬರ್ಟ್ ಜೊತೆ ವನಿತಾಗೆ ಪರಿಚಯವಿತ್ತು. ಇಬ್ಬರೂ ಡೇಟಿಂಗ್ ನಡೆಸಿದ್ದರು. 2017ರಲ್ಲಿ ಇಬ್ಬರಿಗೂ ಬ್ರೇಕ್‌ಅಪ್ ಆಗಿತ್ತು. ಇದೀಗ ರಾಬರ್ಟ್ ಜೊತೆ ವನಿತಾ ಮದುವೆ ಆಗುತ್ತಿದ್ದಾರೆ.

ಅಕ್ಟೋಬರ್ 5ರಂದು ಡೇಟ್ ಸೇವ್ ಮಾಡಿಕೊಳ್ಳಿ ಎಂದು ವನಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್‌ನಲ್ಲಿ ರಾಬರ್ಟ್ ಎದುರು ಮಂಡಿಯೂರಿ ಪ್ರಪೋಸ್ ಮಾಡುವಂತೆ ಫೋಟೊ ಹಂಚಿಕೊಂಡಿದ್ದಾರೆ. ಇಬ್ಬರು ಚರ್ಚ್‌ನಲ್ಲಿ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Famous actress Reveals Her 4th Wedding Date
Read more about: tamil kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X