Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟೂ ಪೀಸ್‌ನಲ್ಲಿ ವೇದಿಕಾಳ ಅಂದ ಕಂಡು ಸೂರ್ಯ ಕಣ್ಣು ಹೊಡೆದ!
ಅಂದ, ಪ್ರತಿಭೆ ಇದ್ದರೂ ಪಂಚಭಾಷಾ ತಾರೆ ವೇದಿಕಾ ರಂಗೀನ್ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿನುಗಲೇ ಇಲ್ಲ. ಅಲ್ಲೊಂದು ಇಲ್ಲೊಂದು ಅವಕಾಶಗಳು ಸಿಕ್ಕರೂ ಪ್ರಯೋಜನವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ವೀಟ್ ಆಗಿರೊ ಚೆಲುವೆ ಬಿಕಿನಿಯಲ್ಲಿ ದರ್ಶನ ಕೊಟ್ಟು ಅಭಿಮಾನಿಗಳ ಕಣ್ಣು ತಂಪಾಗಿಸಿದ್ದಾರೆ.
ಕಳೆದೊಂದು ವಾರದಿಂದ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಮುಂಬೈ ಪೋರಿ ಹಾಟ್ ಹಾಟ್ ಫೋಟೊ, ವಿಡಿಯೋಗಳನ್ನು ಇನ್‌ಸ್ಟ್ರಾಮ್‌ನಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಅಭಿಮಾನಿಗಳಂತೂ ವೇದಿಕಾ ಅಂದ ಚೆಂದ ಕಂಡು ಹುಚ್ಚರಾಗಿದ್ದಾರೆ. ಇದೀಗ ಬಿಳಿ ಬಣ್ಣದ ಬಿಕಿನಿಯಲ್ಲಿ ಸಮುದ್ರದ ತಿಳಿ ನೀರಿನಲ್ಲಿ ಬಿಂದಾಸ್ ಪೋಸ್ ಕೊಟ್ಟಿರೋ ಚೆಲುವೆ ಅಂತರ್ಜಾಲಕ್ಕೆ ಕಿಚ್ಚು ಹಚ್ಚಿದ್ದಾರೆ. ವೇದಿಕಾಳ ಪರ್ಫೆಕ್ಟ್ ಬಿಕಿನಿ ಬಾಡಿ ನೋಡಿ ಪಡ್ಡೆ ಹೈಕಳು ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡಂಗಾಗಿದ್ದಾರೆ.
ಅತಿ
ಹೆಚ್ಚು
ತೆರಿಗೆ
ಕಟ್ಟಿ
ಪ್ರಶಸ್ತಿ
ಪಡೆದ
ತಲೈವಾ-
ಕಿಲಾಡಿಯ
ಒಟ್ಟು
ಆಸ್ತಿ
ಮೌಲ್ಯ
ಎಷ್ಟು?
ವಯಸ್ಸು 30 ದಾಟಿದ್ರು, ವೇದಿಕಾಳ ಚೆಲುವು 16ರ ಹುಡುಗಿಯರನ್ನು ನಾಚಿಸುವಂತಿದೆ. ದ್ವೀಪ ರಾಷ್ಟ್ರದ ಸಮುದ್ರದ ನಡುವೆ ಬಿಕಿನಿಯಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿಂತಿರೋ ವೇದಿಕಾಳ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಲೈಕ್ ಬಟನ್ ಒತ್ತುತ್ತಾ ಕೂತಿದ್ದಾರೆ. ಸಮುದ್ರ ಆಕಾಶ ಒಂದಾದಂತೆ ಕಾಣುವ ಹಿನ್ನಲೆಯಲ್ಲಿ ಬಿಳಿ ಹಂಸದಂತೆ ವೇದಿಕಾ ಕಂಗೊಳಿಸುತ್ತಿದ್ದಾರೆ. ಇನ್ನು ಬೀಚ್ ಸೈಡ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿರೋ ಚೆಲುವೆ ಮೂರ್ನಾಲ್ಕು ದಿನಗಳಿಂದ ತುಂಡು ಉಡುಗೆಯಲ್ಲಿ ಸಾಕಷ್ಟು ಹಾಟ್ ಹಾಟ್ ಫೋಟೊ, ವಿಡಿಯೋಗಳನ್ನು ತೇಲಿ ಬಿಟ್ಟಿದ್ದಾರೆ.
ಪತ್ನಿಯಿಂದ
ನಗ್ನ
ಚಿತ್ರ
ಕ್ಲಿಕ್ಕಿಸಿಕೊಂಡು
ಹಂಚಿಕೊಂಡ
ತಮಿಳು
ನಟ!

'ಸಂಗಮ' ಚಿತ್ರದಲ್ಲಿ ಮಿಂಚಿದ್ದ ವೇದಿಕಾ
ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದ ವೇದಿಕಾ 2006ರಲ್ಲಿ ತಮಿಳಿನ 'ಮದ್ರಾಸಿ' ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಈ ಮುಂಬೈ ಬೆಡಗಿ ನಟಿಸಿದ ಮೊದಲ ಕನ್ನಡ ಸಿನಿಮಾ 'ಸಂಗಮ'. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಜೊತೆ 'ಕಾದು ಕಾದು ನಾ ಕುಳಿತಿರುವೆ' ಎಂದು ಹಾಡಿದ್ದ ಈ ಚೆಲುವೆಯನ್ನು ಕನ್ನಡ ಸಿನಿರಸಿಕರು ಇನ್ನೂ ಮರೆತ್ತಿಲ್ಲ.
ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇದಿಕಾ
ಕೆಲವರ ನಸೀಬೇ ಚೆನ್ನಾಗಿರಲ್ಲ. ಅಂದ, ಪ್ರತಿಭೆ ಎಲ್ಲಾ ಇದ್ದರೂ ದೊಡ್ಡ ಸಕ್ಸಸ್ ಮಾತ್ರ ಸಿಗೋದಿಲ್ಲ. ವೇದಿಕಾ ಸಿನಿ ಜೀವನದಲ್ಲೂ ಆಗಿದ್ದು ಇದೆ. ಮೀಡಿಯಂ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದು ಬಿಟ್ಟರೇ ದೊಡ್ಡ ಸಿನಿಮಾಗಳು ಗಗನ ಕುಸುಮವಾಗಿಯೇ ಉಳಿದುಬಿಡ್ತು.

ವೇದಿಕಾ ಮಾತೃಭಾಷೆ ಕನ್ನಡ
ಹೌದು. ನಟಿ ವೇದಿಕಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಅವರ ಪೋಷಕರು ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಊರಿನವರು. ಹಾಗಾಗಿ ಮನೆಯಲ್ಲಿ ಉತ್ತರ ಕನ್ನಡ ಭಾಷೆಯನ್ನೇ ಮಾತನಾಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸಿದಾಗ ಸುದ್ದಿಗೋಷ್ಠಿಗಳಲ್ಲಿ ಕನ್ನಡದಲ್ಲೇ ಮಾತನಾಡುವ ವೇದಿಕಾ ನಮ್ಮ ಮಾತೃಭಾಷೆ ಕನ್ನಡ ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೊನೆಯದಾಗಿ 'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ನಟಿಸಿದ್ದರು.

ಒಟ್ಟು 5 ಚಿತ್ರಗಳಲ್ಲಿ ವೇದಿಕಾ ಬ್ಯುಸಿ
'ಶಿವಲಿಂಗ' ಹಾಗೂ 'ಗೌಡ್ರು ಹೋಟೆಲ್' ವೇದಿಕಾ ನಟಿಸಿದ ಮತ್ತೆರಡು ಕನ್ನಡ ಸಿನಿಮಾಗಳು. ಇನ್ನು 'ತಮಿಳಿನ 'ವಿನೋದನ್' ಮತ್ತು 'ಜಂಗಲ್', ಮಲಯಾಳಂನ 'ಚೀತಿ ಮಂದಾರಂ ತುಳಸಿ' ಹಾಗೂ 'ನಾಳಂ ತೂನು' ಜೊತೆಗೆ ಕನ್ನಡದ 'ಗಣ' ಸೇರಿ ಒಟ್ಟು 5 ಸಿನಿಮಾಗಳು ವೇದಿಕಾ ಕೈಯಲ್ಲಿವೆ.