ಪಾತ್ರಕ್ಕಾಗಿ ಪಲ್ಲಂಗ; "ಹೋಗಿ ರಜನಿಯ ಹೆಂಡತಿ- ಮಕ್ಕಳನ್ನು ಕೇಳಿ" ಎಂದಿದ್ದೇಕೆ ಈ ನಟಿ?

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂ ಸಿನಿಮಾ ಮಂದಿಗೆ ಹೇಮಾ ಕಮಿಟಿ ವರದಿ ಎದೆಯಲ್ಲಿ ಭಯ ಹುಟ್ಟಿಸಿದೆ. ಯಾರ ಹೆಸರನ್ನು ಯಾರು ಹೇಳುತ್ತಾರೋ ಅನ್ನೋ ಭಯದಲ್ಲಿಯೇ ಕೂರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಮಲಯಾಳಂ ಚಿತ್ರರಂಗದ ನಟರು ಹಾಗೂ ತಂತ್ರಜ್ಞರ ವಿರುದ್ಧ ಕೆಲ ನಟಿಯರು ಗಂಭೀರ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ.

ಮಲಯಾಳಂ ಚಿತ್ರರಂಗದ ಬಳಿಕ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲೂ ಇಂತಹದ್ದೇ ಕಮಿಟಿಯನ್ನು ರಚನೆ ಮಾಡುವಂತೆ ಒತ್ತಡ ಹೆಚ್ಚಾಗಿತ್ತಿದೆ. ಕನ್ನಡ ಚಿತ್ರರಂಗದಲ್ಲೂ ನಿವೃತ್ತ ನ್ಯಾಯಾಧೀಶರ ಕಮಿಟಿಯನ್ನು ರಚಿಸಬೇಕು ಅಂತ ಸ್ಯಾಂಡಲ್‌ವುಡ್‌ನ ಆಂತರಿಕ ಕಮಿಟಿ ಫೈರ್ ಸರ್ಕಾರಕ್ಕೆ ಒತ್ತಡ ಹಾಕಿದೆ. ಹೀಗಾಗಿ ಇಲ್ಲೂ ಢವ ಢವ ಶುರುವಾಗಿದೆ.

Actress Vichitra reacted on Hema Committee report and says rajinikanth s wife and daughter

ಈ ಮಧ್ಯೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ವಿಚಿತ್ರಾ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್‌ಗೆ ಓಪನ್ ಆಗಿ ಮಾತಾಡಿದ್ದಾರೆ. ವಿಶೇಷ ಅಂದರೆ, ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಈಕ ನಟಿಯ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ.

ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಬಳಿ ಮಾಧ್ಯಮದವರು ಹೇಮಾ ಕಮಿಟಿ ವರದಿ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. ದಿಢೀರನೇ ಎದುರಾದ ಪ್ರಶ್ನೆಗೆ ರಜನಿಕಾಂತ್ ತನಗೇನು ಗೊತ್ತೇ ಇಲ್ಲ ಅಂತ ಹೇಳಿ ಜಾರಿಕೊಂಡಿದ್ದರು. ಈ ಹೇಳಿಕೆ ಬಳಿಕ ನೆಟ್ಟಿಗರು ಸೂಪರ್‌ಸ್ಟಾರ್ ವಿರುದ್ಧ ಗರಂ ಆಗಿದ್ದರು. ಈಗ ತಮಿಳು ಹಾಗೂ ಮಲಯಾಳಂ ನಟಿ ವಿಚಿತ್ರಾ ಕೂಡ ರಜನಿಕಾಂತ್ ವಿರುದ್ಧ ಕಿಡಿಕಾರಿದ್ದಾರೆ.

Actress Vichitra reacted on Hema Committee report and says rajinikanth s wife and daughter

ಹೇಮಾ ಕಮಿಟಿ ವರದಿ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಯಾವೊಬ್ಬ ಹೀರೋನೂ ಮುಂದೆ ಬಂದಿಲ್ಲ. ಇದನ್ನೆಲ್ಲ ನೋಡಿದರೆ, ಮಾಧ್ಯಮದವರು ಹೇಮಾ ವರದಿ ಬಗ್ಗೆ ಕೇಳ ಬಾರದವರ ಬಳಿ ಹೋಗಿ ಕೇಳುತ್ತಿವೆ ಎಂದು ಕಿಡಿಕಾರಿದ್ದಾರೆ. ರಜನಿಕಾಂತ್ ಬಳಿ ಹೋಗಿ ಹೇಮಾ ವರದಿ ಬಗ್ಗೆ ಕೇಳುವುದಕ್ಕಿಂತ ಅವರ ಪತ್ನಿ ಲತಾ ಹಾಗೂ ಪುತ್ರಿಯರಾದ ಐಶ್ವರ್ಯಾ, ಸೌಂದರ್ಯ ಬಳಿ ಹೋಗಿ ಕೇಳಿ. ರಜನಿಕಾಂತ್ ತಮ್ಮ ಸಿನಿಮಾ ಬಿಡುಗಡೆಯ ಟೆನ್ಷನ್‌ನಲ್ಲಿ ಇದ್ದಾರೆ.

ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ನಟಿಯರು ಧೈರ್ಯವಾಗಿ ಮಾತಾಡುವುದಕ್ಕೆ ಮುಂದೆ ಬರುತ್ತಿದ್ದಾರೆ. ಆದರೆ, ನಟರು ಅವರ ಪರವಾಗಿ ನಿಂತು ಮಾತಾಡಿಲ್ಲ. ಆ ಘಟನೆ ನಡೆದಾಗಲೇ ಈ ವಿಷಯವನ್ನು ಹೇಳಬಹುದಿತ್ತಲ್ಲ. ಈಗ ಯಾಕೆ ಹೇಳುತ್ತಿದ್ದಾರೆಂಬ ಹೇಳುತ್ತಿದ್ದಾರೆ. ಆದರೆ, ನಾನು ಇಂತಹ ಘಟನೆ ನಡೆದ ವೇಳೆ ಪೊಲೀಸ್ ಠಾಣೆಗೆ ಹೋಗಿ ದೂರ ನೀಡಿದ್ದೆ ಆದರೆ, ಯಾವುದೇ ರೀತಿ ಪ್ರಯೋಜನ ಆಗಿಲ್ಲ ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷ ನಟಿ ವಿಚಿತ್ರಾ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ತೆಲುಗು ಚಿತ್ರರಂಗ ಲೆಜೆಂಡರಿ ನಟನಿಂದ ತನಗೆ ಲೈಂಗಿಕ ಕಿರುಕುಳ ಆಗಿತ್ತು ಎಂದು ಹೇಳಿದ್ದರು. ಇದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇಂತಹ ಕೆಲವು ಘಟನೆಗಳಿಂದ ತಾನು ಚಿತ್ರರಂಗವನ್ನೇ ಬಿಡಬೇಕಾಗಿ ಬಂತು ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಬಳಿಕ ನೆಟ್ಟಿಗರು 2001ರಲ್ಲಿ ತೆರೆಕಂಡ ಸೂಪರ್‌ಸ್ಟಾರ್ ಬಾಲಕೃಷ್ಣ ನಟನೆಯ 'ಭಲೆವಾಡಿ ಬಾಸು' ಸಿನಿಮಾದ ಬಗ್ಗೆ ಹೇಳಿದ್ದಾರೆಂದು ಕಾಮೆಂಟ್ ಮಾಡಿದ್ದರು.

More from Filmibeat

English summary
Actress Vichitra reacted on Hema Committee report and says Rajinikanth's wife and daughter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X