"ಕರ್ನಾಟಕ ಹುಡುಗಿ ಎನ್ನುವ ಕಾರಣಕ್ಕೆ ಟಾರ್ಚರ್, ಇದೇ ಕೊನೆ ವಿಡಿಯೋ" ಎಂದ ನಟಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ ಮತ್ತೆ ತಮಿಳುನಾಡು ರಾಜಕೀಯ ಮುಖಂಡ, ಫಿಲ್ಮ್ ಮೇಕರ್ ಸೀಮಾನ್ ವಿರುದ್ಧ ಕೆಂಡಕಾರಿದ್ದಾರೆ. ನನಗೆ ಮೋಸ ಮಾಡಿಬಿಟ್ಟೆ. ನಾನು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತೇನೆ ನಿನಗೆ ಆ ಸುದ್ದಿ ಆದಷ್ಟು ಬೇಗ ಬರುತ್ತದೆ ಎಂದು ವಿಡಿಯೋ ಮಾಡಿ ಹೇಳಿದ್ದಾರೆ. ಸದ್ಯ ವಿಜಯಲಕ್ಷ್ಮಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಈ ಹಿಂದೆ ಕೂಡ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚೆನ್ನೈ ಮೂಲದ ವಿಜಯಲಕ್ಷ್ಮಿ ಕನ್ನಡದ 'ನಾಗಮಂಡಲ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರಾಗಿದ್ದಾರೆ. ಫೇಸ್‌ಬುಕ್ ವಿಡಿಯೋ ಮೂಲಕ ಸಾಕಷ್ಟು ಆರೋಪಗಳನ್ನು ಮಾಡುತ್ತಾ ಬರ್ತಿದ್ದಾರೆ.

Actress Vijayalakshmi threatens to end her life in Karnataka because of Seeman

ಇದೀಗ ಸೀಮಾನ್ ವಿರುದ್ಧ ಮತ್ತೆ ಆರೋಪಗಳನ್ನು ಮಾಡಿ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗ್ತಿದೆ. "ಮಾಧ್ಯಮ ಮಿತ್ರರಿಗೆ ನಮಸ್ಕಾರ.. ಫೆ.29ರಂದು ನಾನು ವಿಡಿಯೋ ಹಾಕಿ ಒಂದು ಬೇಡಿಕೆ ಇಟ್ಟಿದ್ದೆ. ನಾಮ್ ತಮಿಳರ್ ಪಕ್ಷದ ಸೀಮಾನ್ ನನೊಟ್ಟಿಗೆ ಮಾತನಾಡಬೇಕು ಎಂದು ಕೇಳಿದ್ದೆ. ಈಗ ಮಾರ್ಚ್ 5. ಒಂದು ಹೆಣ್ಣು ಎಷ್ಟು ನೋವಾಗಿದ್ದರೆ ಕಟ್ಟಡದ ತೆರೆಸ್ ಮೇಲೆ ಹೋಗಿ ಆ ರೀತಿ ವಿಡಿಯೋ ಮಾಡಿ ಹಾಕಿರುತ್ತಾಳೆ ಅಲ್ವಾ? ಅಂತಹ ವೀಡಿಯೋ ಹಾಕಿದ ಮೇಲೂ ಅವಳು ಸಾಯಲಿ ಎಂದು ಆತ ಸುಮ್ಮನಿರುತ್ತಾನೆ ಅಂದ್ರೆ ಏನು ಮಾಡುವುದು"

"2008ರಲ್ಲಿ ನನ್ನ ಸಹೋದರಿ ಸಮಸ್ಯೆ ವಿಚಾರಕ್ಕೆ ಸೀಮಾನ್ ಬಳಿ ಹೋಗಿದ್ದೆವು. ಆತನಿಗೆ ಆಗ ಇನ್ನು ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ 3 ವರ್ಷ ಸಂಸಾರ ಮಾಡಿ ನನ್ನು ಜೀವನ ಹಾಳು ಮಾಡಿ, ರಸಹ್ಯವಾಗಿ ನನ್ನೊಟ್ಟಿಗೆ ಮದುವೆ ಕೂಡ ಆಗಿ ಅದನ್ನು ಎಲ್ಲೂ ಹೇಳದೇ ಜೀವನ ಹಾಳು ಮಾಡಿದ. ಬಳಿಕ ಆತನಿಗೆ ಏನೋ ಸಮಸ್ಯೆ ಎಂದು ನನ್ನನ್ನು ನಡು ಬೀದಿಯಲ್ಲಿ ಬಿಟ್ಟು ಹೋದರು. ಸರಿ ನನ್ನನ್ನು ಬಾಳಲು ಬಿಡಲಿಲ್ಲ. ನನಗೆ ವ್ಯಭಿಚಾರಿ ಎನ್ನುವ ಪಟ್ಟ ಕಟ್ಟಿ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು"

"ಕಳೆದ ವರ್ಷ ಸಮಸ್ಯೆ ಆಗುತ್ತದೆ ಎಂದು ಗೊತ್ತಾಗಿ ತಿಂಗಳಿಗೆ 50 ಸಾವಿರ ಕೊಡುತ್ತೀನಿ. ನಾನು ಆಕೆಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಈಗಾ ಡ್ರಾಮಾ ಮಾಡುತ್ತಿದ್ದಾರೆ. ನನಗೆ ಮಾಡಿದ ಮೋಸಕ್ಕೆ ಪ್ರತಿಯಾಗಿ ನಾನು ದೂರು ನೀಡಿದೆ. ಈಗ ನಾನು ಕರ್ನಾಟಕದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದರೂ ಪರವಾಗಿಲ್ಲ ಅಲ್ಲೇ ಸಾಯಿ ಎಂದು ಹೇಳ್ತಾರೆ ಅಂದ್ರೆ, ಮುಂದೆ ಅದೇ ನಡೆಯುತ್ತದೆ' ಎಂದು ವಿಜಯಲಕ್ಷ್ಮಿ ಸೀಮಾನ್‌ಗೆ ಬೆದರಿಕೆ ಹಾಕಿದ್ದಾರೆ.

"ತಮಿಳುನಾಡಿಗೆ ಇದೇ ಕೊನೆಯ ವಿಡಿಯೋ. ಇನ್ನೆರಡು ದಿನಗಳಲ್ಲಿ ಕರ್ನಾಟಕದಿಂದ ನಿಮಗೆ ಸುದ್ದಿ ಬರುತ್ತದೆ. ಕರ್ನಾಟದಲ್ಲಿ ಜಗ್ಗೇಶ್ ಎನ್ನುವ ನಟನೊಟ್ಟಿಗೆ ನನ್ನ ಹೆಸರನ್ನು ತಳಕು ಹಾಕಿ ಮಾತನಾಡಿ ಬಹಳ ನೋವು ಕೊಟ್ಟು ಕರ್ನಾಟಕದ ಹುಡುಗಿ ಎನ್ನುವ ಕಾರಣಕ್ಕೆ ಬಹಳ ಟಾರ್ಚರ್ ಮಾಡಿದರು. ನನ್ನ ಸಾವಿನ ಬಳಿಕ ಕರ್ನಾಟಕದಿಂದ ಸೀಮಾನ್‌ಗೆ ಕರೆ ಬರುತ್ತದೆ" ಎಂದು ಸೀಮಾನ್‌ಗೆ ವಿಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.

ವಿಜಯಲಕ್ಷ್ಮಿ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಿರುತೆರೆ ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Vijayalakshmi alleges once again politician Seeman;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X