ಆಸ್ಪತ್ರೆ ಬೆಡ್ ಮೇಲೆ ಹೀರೊಯಿನ್: "ಹೋರಾಟ ಮಾಡುತ್ತಲೇ ಇದ್ದೇನೆ" ಎಂದು ಪೋಸ್ಟ್
ಬಹುಭಾಷಾ ನಟಿ ವಿಶಾಖ ಸಿಂಗ್ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೋಟೊ ಸಮೇತ ಈ ವಿಚಾರವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಬುದಾಬಿಯಲ್ಲಿ ಹುಟ್ಟಿ ಬೆಳೆದ ನಟಿ ವಿಶಾಖ ಮುಂದೆ ತೆಲುಗಿನ ಜ್ಞಾಪಕಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿ ಇಟ್ಟರು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ನಟಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
ದಿಗಂತ್ ನಟನೆಯ 'ಹೌಸ್‌ಫುಲ್' ಹಾಗೂ 'ಅಂತರಾತ್ಮ' ಎನ್ನುವ ಸಿನಿಮಾಗಳಲ್ಲಿ ವಿಶಾಖ ಸಿಂಗ್ ನಟಿಸಿದ್ದಾರೆ. ತೆಲುಗು ಸಿನಿಮಾ ಚಿತ್ರರಂಗಕ್ಕೆ ಪರಿಚಿತರಾದರೂ ಏನು ಪ್ರಯೋಜನವಾಗಲಿಲ್ಲ. ನಂತರ ಹಿಂದಿ, ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಿರಾಸೆ ಅನುಭವಿಸಿದ ಚೆಲುವೆ ಕೊನೆಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಕ್ಸಸ್ ಕಂಡರು. ಕಳೆದರಡು ವರ್ಷಗಳಿಂದ ವಿಶಾಖ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ.

ಸದ್ಯ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೊಗಳನ್ನು ಹಂಚಿಕೊಂಡಿರುವ ವಿಶಾಖ ಸಿಂಗ್ "ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಈ ರೀತಿ ಬಹಳ ದಿನ ಒಂದೆಡೆ ಇರಲ್ಲ. ಚಳಿಗಾಲದಲ್ಲಿ ವಿಚಿತ್ರ ಘಟನೆಗಳು, ಭಯಂಕರವಾದ ಅವಘಡಗಳು ಜೊತೆಗೆ ಆರೋಗ್ಯ ಸಮಸ್ಯೆಗಳು ಭಾದಿಸುತ್ತಿವೆ. ಸಮ್ಮರ್‌ನಲ್ಲಿ ಮತ್ತೆ ಚೇತರಿಸಿಕೊಳ್ಳುತ್ತೇನೆ. ಅದೇನೊ ಗೊತ್ತಿಲ್ಲ ಪ್ರತಿ ಏಪ್ರಿಲ್ ನನಗೆ ಹೊಸ ವರ್ಷದಂತೆ ಕಾಣಿಸುತ್ತದೆ. ಬಹಶಃ ಅದು ಹೊಸ ಆರ್ಥಿಕ ವರ್ಷ ಆಗಿರುವುದಕ್ಕೋ ಅಥವಾ ನಾನು ಹುಟ್ಟಿದ ತಿಂಗಳು ಆಗಿರುವುದಕ್ಕೋ ಇರಬಹುದು. ಎಷ್ಟೇ ಸಮಸ್ಯೆಗಳು ಬಂದರೂ ಧೃಡಸಂಕಲ್ಪದೊಂದಿಗೆ ಮುಂದೆ ಸಾಗುತ್ತೇನೆ" ಎಂದಿದ್ದಾರೆ.
ಸದ್ಯ ನಟಿ ಪೋಸ್ಟ್ ಮಾಡಿರುವ ಫೋಟೊಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕೆ ತಮ್ಮ ಆರೋಗ್ಯದ ಬಗ್ಗೆ ಕ್ಲಾರಿಟಿ ನೀಡದೇ ಇರುವುದು ಕೂಡ ಬೇಸರ ತಂದಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ ಆಕೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ 2 ವರ್ಷಗಳ ಹಿಂದೆ ಸೆಟ್ಟೇರಿದ್ದ ಬಾಲಿವುಡ್‌ನ 'ದಿ ಮಾಯ ಟೇಪ್' ಹಾಗೂ ತೆಲುಗಿನ 'ತುರಂ' ಸಿನಿಮಾಗಳ ಕೆಲಸಗಳು ನಡೀತಿದೆ.
ಹೇಮಂತ್ ಹೆಗ್ಡೆ ನಿರ್ದೇಶನದ 'ಹೌಸ್‌ಫುಲ್' ಚಿತ್ರದಲ್ಲಿ ಮೊದಲಿಗೆ ವಿಶಾಖ ಸಿಂಗ್ ನಟಿಸಿದ್ದರು. ದಿಗಂತ್ ಹೀರೊ ಆಗಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಶಂಕರ್ ನಿರ್ದೇಶನದ 'ಅಂತರಾತ್ಮ' ಸಿನಿಮಾ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡರೂ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಲ್ಲ. ಅಬುದಾಬಿಯಲ್ಲಿ ಹುಟ್ಟಿದ್ದ ವಿಶಾಖ ದೆಹಲಿಯಲ್ಲಿ ಪದವಿ ಪಡೆದರು. 2007ರಲ್ಲಿ ಮಾಡೆಲಿಂಗ್ ಆರಂಭಿಸಿದ ನಟಿ ನಿಧಾನವಾಗಿ ಕಿರುತೆರೆ ಹಾಗೂ ಜಾಹೀರಾತುಗಳಲ್ಲಿ ಮಿಂಚಿದ್ದರು.
'ಕಣ್ಣಾ ಲಡ್ಡು ತಿನ್ನ ಆಸೆಯಾ', 'ಫುಕ್ರೇ', 'ಬಜಾತೆ ರಹೋ', 'ರೌಡಿ ಫೆಲೋ', 'ವಾಲಿಬ ರಾಜಾ', 'ಭಯಂ ಒರು ಪಯಣಂ', 'ಫುಕ್ರೇ ರಿಟರ್ನ್ಸ್', 'ಅಂಕುರ್ ಅರೋರ ಮರ್ಡರ್ ಕೇಸ್' ವಿಶಾಖ ಸಿಂಗ್ ನಟಿಸಿರುವ ಕೆಲ ಸಿನಿಮಾಗಳು.


Click it and Unblock the Notifications











