ವಿಜಯ್ 65: ಎಆರ್ ಮುರುಗದಾಸ್ ಜಾಗಕ್ಕೆ ಮೂವರು ನಿರ್ದೇಶಕರ ಹೆಸರು!
ತಮಿಳು ನಟ ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ಸದ್ಯ ದಳಪತಿ-65 ಎಂದು ಕರೆಯಲಾಗುತ್ತಿದೆ. ಕಾಲಿವುಡ್‌ನಲ್ಲಿ ಆರಂಭಕ್ಕೂ ಮುನ್ನವೇ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಎಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ಕತ್ತಿ' ನಿರ್ದೇಶಕ ಈ ಪ್ರಾಜೆಕ್ಟ್‌ನಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.
ಸ್ಕ್ರಿಪ್ಟ್ ವಿಚಾರದಲ್ಲಿ ವಿಜಯ್ ಮತ್ತು ಮುರುಗದಾಸ್ ನಡುವೆ ಒಮ್ಮತ ಮೂಡಿಲ್ಲ, ಕೆಲವು ಬದಲಾವಣೆ ಮಾಡಲು ಸೂಚಿಸಿದ್ದಾರಂತೆ. ಆದರೆ, ಬದಲಾವಣೆ ಮಾಡಲು ನಿರ್ದೇಶಕ ಒಪ್ಪಲಿಲ್ಲ. ಈ ಕಡೆ ಸಂಭಾವನೆ ವಿಚಾರದಲ್ಲೂ ಸನ್ ಪಿಕ್ಚರ್ಸ್ ಹಾಗೂ ಮುರುಗದಾಸ್ ನಡುವೆ ಒಮ್ಮತ ಮೂಡಿಲ್ಲ ಎಂದು ಹೇಳಲಾಗಿದೆ.
ಈ ಎಲ್ಲ ಕಾರಣದಿಂದ ಸ್ಟಾರ್ ಡೈರೆಕ್ಟರ್ ವಿಜಯ್ 65 ಪ್ರಾಜೆಕ್ಟ್‌ನಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಇದೀಗ, ಮುರುಗದಾಸ್ ಬದಲು ಬೇರೆ ನಿರ್ದೇಶಕರ ಹುಡುಕಾಟದಲ್ಲಿರುವ ಸನ್ ಪಿಕ್ಚರ್ಸ್‌ಗೆ ಮೂರು ಆಯ್ಕೆಗಳು ಸಿಕ್ಕಿವೆ. ಮುಂದೆ ಓದಿ...

'ಮಾಸ್ಟರ್' ನಂತರ ಘೋಷಣೆ ಮಾಡಬೇಕು
ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಚಿತ್ರದ ಬಳಿಕ ವಿಜಯ್ ಯಾವ ಪ್ರಾಜೆಕ್ಟ್ ಸಹ ಘೋಷಣೆ ಮಾಡಿಲ್ಲ. ವಿಜಯ್ 65 ಆರಂಭಿಸಬೇಕು ಎಂದು ನಿರ್ಮಾಪಕರು ತಲೆಕೆಡಿಸಿಕೊಂಡಿದ್ದಾರೆ. ಮುರುಗದಾಸ್ ಬಿಟ್ಟು ಜಾಗಕ್ಕಾಗಿ ಹೊಸ ನಿರ್ದೇಶಕರನ್ನು ಹುಡುಕುತ್ತಿರುವ ಸನ್ ಪಿಕ್ಚರ್ಸ್‌ಗೆ ಮೂವರು ಯುವ ನಿರ್ದೇಶಕರನ್ನು ಪರಿಗಣಿಸಿದೆಯಂತೆ.

ಯಾರು ಆ ಮೂವರು?
ವಿಜಯ್ 65 ಚಿತ್ರವನ್ನು ನಿರ್ದೇಶನ ಮಾಡಬಹುದಾದ ಸಾಮರ್ಥ್ಯ ಹೊಂದಿರುವ ಮೂವರು ನಿರ್ದೇಶಕರನ್ನು ನಿರ್ಮಾಪಕರು ಗುರುತಿಸಿದ್ದಾರೆ. 'ಬಿಗಿಲ್' ಖ್ಯಾತಿಯ ಅಟ್ಲಿ, ವೆಟ್ರಿಮಾರನ್ ಹಾಗೂ ಸುಧಾ ಕೊಂಗರ ಅವರಲ್ಲಿ ಯಾರಾದರೂ ಒಬ್ಬರು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಅಟ್ಲಿ-ವೆಟ್ರಿಮಾರನ್ ಬ್ಯುಸಿ
ಅಟ್ಲಿ ಹಾಗೂ ವೆಟ್ರಿಮಾರನ್ ಈಗಾಗಲೇ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸುಧಾ ಕೊಂಗರ ಅವರನ್ನು ನೋಡುವುದಾದರೆ ಸದ್ಯಕ್ಕೆ ಅವರು ಸಹ ತಲಾ ಅಜಿತ್ ಜೊತೆ ಮುಂದಿನ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಹಾಗಾಗಿ, ಈ ಮೂವರು ಒಪ್ಪಿಕೊಳ್ಳುವುದು ಬಹುತೇಕ ಅನುಮಾನ ಎನ್ನಲಾಗಿದೆ.
Recommended Video

'ಮಾಸ್ಟರ್' ಚಿತ್ರದ ಬಗ್ಗೆ....
ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ವಿಜಯ್ ಜೊತೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ಪೋಸ್ಟರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಬಹುಶಃ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಈ ಸಿನಿಮಾ ತೆರೆಗೆ ಬರಬಹುದು.


Click it and Unblock the Notifications











