Dhanush: ಐಶ್ವರ್ಯಾ ರಜನಿಕಾಂತ್‌ರನ್ನು ಸ್ನೇಹಿತೆ ಎಂದು ಕರೆದ ನಟ ಧನುಷ್: ಇಲ್ಲಿದೆ ಕಾರಣ!
ಕಳೆದ ವರ್ಷ ಸಾಕಷ್ಟು ಸುದ್ದಿಯಾದ ವಿಚಾರಗಳಲ್ಲಿ ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಚೇದನದ ಸುದ್ದಿ ಕೂಡ ಹೆಚ್ಚಾಗಿ ಸೌಂಡ್ ಮಾಡಿತ್ತು. ಅನ್ಯೋನ್ಯವಾಗಿದ್ದ ಈ ಜೋಡಿ ಸಡನ್ ಆಗಿ ವಿಚ್ಛೇದನಕ್ಕೆ ಮುಂದಾಗಿದ್ದರು.
ವಿಚ್ಛೇದನದ ಪಡೆಯಲು ತೀರ್ಮಾಸಿದ ಬಳಿಕ ಸಾಕಷ್ಟು ಬೆಳವಣಿಗೆಗಳು ಆದವು. ಕುಟುಂಬದ ಸದಸ್ಯರು, ಆಪ್ತರು ಇವರಿಬ್ಬರು ಮತ್ತೆ ಒಂದಾಗುತ್ತಾರೆ. ಇದು ಆತುರದ ನಿರ್ಧಾರವಷ್ಟೇ ಎಂದು ಹೇಳಿಕೆ ನೀಡಿದ್ದರು. ಇವರುಗಳು ಹೇಳುವಂತೆ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕೂಡ ಅಂದುಕೊಳ್ಳುತ್ತಿದ್ದರು.
ಡಿವೋರ್ಸ್ ಅನೌನ್ಸ್ ಆದ ಬಳಿಕ ಧನುಷ್ ಆಗಲಿ, ಐಶ್ವರ್ಯಾ ಆಗಲಿ ಈ ಬಗ್ಗೆ ಮೌನ ಮುರಿದಿಲ್ಲ. ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಐಶ್ವರ್ಯಾ ಮತ್ತೆ ನಿರ್ದೇಶನಕ್ಕೆ ಮರಳಿದ್ದು, ಈ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶೇಷ ಅಂದರೆ ಐಶ್ವರ್ಯಾ ಡೈರೆಕ್ಷನ್‌ಗೆ ನಟ ಧನುಷ್ ಕೂಡ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
Recommended Video


ಡಿವೋರ್ಸ್ ಬಳಿಕವೂ ಜೋಡಿಗೆ ಜನರಿಂದ ಮೆಚ್ಚುಗೆ
ನಾವು ಸಾಕಷ್ಟು ತಾರಾ ಜೋಡಿಗಳನ್ನು ನೋಡಿರುತ್ತೇವೆ. ಡಿವೋರ್ಸ್ ಬಳಿಕ ಮುಖ ತಿರುಗಿಸಿಕೊಂಡು ಓಡಾಡುವುದೇ ಹೆಚ್ಚು. ಆದರೆ ಐಶ್ವರ್ಯಾ ಮತ್ತು ಧನುಷ್ ವಿಚಾರದಲ್ಲಿ ಹಾಗೆ ಆಗಿಲ್ಲ. ಡಿವೋರ್ಸ್ ಅನೌನ್ಸ್ ಮಾಡಿದ ನಂತರದಲ್ಲೂ ಇವರಿಬ್ಬರು ಆಪ್ತ ಸ್ನೇಹಿತರಂತೆ ಇದ್ದಾರೆ. ಅದಕ್ಕೆ ಉದಾಹರಣೆ ಎಂಬಂತಿದೆ ಈ ಸ್ಟೋರಿ. ಕಳೆದ ವರ್ಷ ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಈಗ ವೃತ್ತಿಪರ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ರಜನಿಕಾಂತ್ ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಸದ್ದು ಮಾಡಿದ್ದರು. ಈಗ ಐಶ್ವರ್ಯಾ 9 ವರ್ಷಗಳ ಬಳಿಕ ಮತ್ತೆ ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ.

ಐಶ್ವರ್ಯಾ ಮ್ಯೂಸಿಕಲ್ ವಿಡಿಯೋಗೆ ಶುಭವಾಗಲಿ ಎಂದ ಧನುಷ್
ಹೌದು, ಐಶ್ವರ್ಯಾ ರಜನಿಕಾಂತ್ ಒಂದು ಮ್ಯೂಸಿಕಲ್ ವಿಡಿಯೋವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಈ ಹಾಡನ್ನು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಮ್ಯೂಸಿಕ್ ವಿಡಿಯೋ ಮೂಲಕ ಮತ್ತೆ ನಿರ್ದೇಶನಕ್ಕೆ ಇಳಿದಿರೋದಕ್ಕೆ ಸಾಕಷ್ಟು ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆ. ವಿಶೇಷ ಮತ್ತು ಅಚ್ಚರಿ ಎಂದರೆ, ನಟ ಧನುಷ್ ಕೂಡ ಐಶ್ವರ್ಯಾ ರಜನಿಕಾಂತ್ ಅವರ ಈ ಮ್ಯೂಸಿಕಲ್ ವಿಡಿಯೋಗೆ ಶುಭವಾಗಲಿ ಎಂದು ಟ್ವೀಟ್ ಮೂಲಕ ಹರಸಿದ್ದಾರೆ. ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೂ ಅಡಗಿದೆ.
ಮ್ಯೂಸಿಕ್ ವಿಡಿಯೊಗೆ ಅಭಿನಂದನೆ ಎಂದ ಧನುಷ್
ಹೌದು, ಟ್ವೀಟ್ ಮಾಡಿ ಐಶ್ವರ್ಯಾ ರಜನಿಕಾಂತ್ ಮ್ಯೂಸಿಕ್ ವಿಡಿಯೋಗೆ ಶುಭ ಹಾರೈಸಿರುವ ಧನುಷ್ "ನನ್ನ ಸ್ನೇಹಿತೆ ಐಶ್ವರ್ಯಾ ಆರ್ ಧನುಷ್, ನಿಮ್ಮ ಮ್ಯೂಸಿಕ್ ವಿಡಿಯೊಗೆ ಅಭಿನಂದನೆಗಳು #Payaniಗೆ ದೇವರು ಒಳ್ಳೆಯದು ಮಾಡಲಿ" ಎಂದು ಬರೆದುಕೊಂಡಿದ್ದಾರೆ. ಡಿವೋರ್ಸ್ ಬಳಿಕ ಉತ್ತಮ ಸ್ನೇಹಿತರಂತೆ ಇವರಿಬ್ಬರೂ ಇದ್ದಾರೆ ಅನ್ನೋದು ಈ ಮೂಲಕ ತಿಳಿದು ಬರುತ್ತಿದೆ. ಇನ್ನು ಧನುಷ್ ಅವರ ಟ್ವೀಟ್‌ಗೆ ಐಶ್ವರ್ಯಾ ರಜನಿಕಾಂತ್ "ಧನ್ಯವಾದಗಳು ಧನುಷ್.. ಗಾಡ್ ಸ್ಪೀಡ್" ಎಂದು ರೀ-ಟ್ವೀಟ್ ಮಾಡಿದ್ದಾರೆ. ಡಿವೋರ್ಸ್ ಅನೌನ್ಸ್ ಆದ ಬಳಿಕವೂ ಇವರಿಬ್ಬರು ಇಷ್ಟು ಅನ್ಯೊನ್ಯವಾಗಿ ಇರೋದು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಟ್ರೆಂಡಿಂಗ್‌ನಲ್ಲಿರುವ ಮ್ಯೂಸಿಕ್ ವೀಡಿಯೊ
ಐಶ್ವರ್ಯಾ ರಜನಿಕಾಂತ್ ಮ್ಯೂಸಿಕ್ ವಿಡಿಯೋಗೆ ತಂದೆ ಸೂಪರ್‌ಸ್ಟಾರ್ ರಜನಿಕಾಂತ್ ಸೇರಿದಂತೆ ಟಾಲಿವುಡ್‌ನ ಚಿರಂಜೀವಿ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ರಾಣಾ ದಗ್ಗುಬಾಟಿ ಮತ್ತು ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ಇವರೆಲ್ಲರೂ ಐಶ್ವರ್ಯಾ ಹಾಗೂ ಅವರ ತಂಡಕ್ಕೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. '3' ಮತ್ತು 'ವೈ ರಾಜಾ ವೈ' ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿರುವ ಐಶ್ವರ್ಯಾ ಈಗ ತಮ್ಮ ಮ್ಯೂಸಿಕಲ್ ವೀಡಿಯೊವನ್ನು ಅದ್ಭುತ ಪರಿಕಲ್ಪನೆ ಮೂಲಕ ಹೊರ ತಂದಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದು, ಯೂಟ್ಯೂಬ್‌ನಲ್ಲಿ ಸಾಕಷ್ಟು ವೀಕ್ಷಣೆ ಕೂಡ ಕಂಡಿದೆ. ಈ ಹಾಡು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತಮಿಳಿನಲ್ಲಿ 'ಪಯಾನಿ' ಎಂದೂ, ತೆಲುಗಿನಲ್ಲಿ 'ಸಂಚಾರಿ' ಮತ್ತು ಮಲಯಾಳಂನಲ್ಲಿ 'ಯಾತ್ರಕಾರನ್' ಎಂಬ ಟೈಟಲ್‌ನಲ್ಲಿ ರಿಲೀಸ್ ಆಗಿದೆ.


Click it and Unblock the Notifications