ಸದ್ದಿಲ್ಲದೇ ಎರಡನೇ ಮದುವೆಯಾದ ಖ್ಯಾತ ನಿರೂಪಕಿ, ಬಿಗ್ ಬಾಸ್‌ನಲ್ಲಿಯೂ ಮೋಡಿ ಮಾಡಿದ್ದ ಚೆಲುವೆ..!
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ. ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ.ಮುಂದಿನ ಜೀವನವನ್ನು ಖುಷಿ ಖುಷಿಯಾಗಿ ಕಳೆಯಲು ಇಷ್ಟ ಪಡುತ್ತಾರೆ.
ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಉದಾಹರಣೆಗೆ ಪ್ರಿಯಾಂಕ ದೇಶಪಾಂಡೆ.

ಹೌದು. ಪ್ರಿಯಾಂಕ ದೇಶಪಾಂಡೆ.. ಪಕ್ಕದ ಚೆನ್ನೈನ ಖ್ಯಾತ ನಿರೂಪಕಿ. ಸೂಪರ್ ಸಿಂಗರ್, ಸ್ಟಾರ್ಟ್ ಮ್ಯೂಸಿಕ್, ದಿ ವಾಲ್, ಜೋಡಿ ನಂಬರ್ ಒನ್, ಕಿಂಗ್ಸ್ ಆಫ್ ಕಾಮಿಡಿ ಜ್ಯೂನಿಯರ್ಸ್, ಹೀಗೆ ಹಲವಾರು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿರುವ ಪ್ರಿಯಾಂಕ ದೇಶಪಾಂಡೆ ಅತೀ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಿರೂಪಕಿಯರಲ್ಲಿ ಒಬ್ಬರು. ಸ್ಟಾರ್ ವಿಜಯ್, ಸನ್ ಟಿವಿ, ಜೀ ತಮಿಳ್, ಸನ್ ಮ್ಯೂಸಿಕ್, ಹೀಗೆ ಹಲವು ವಾಹಿನಿಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಹೆಗ್ಗಳಿಕೆ ಇವರದ್ದು.
ಇನ್ನು, ಕೇವಲ ನಿರೂಪಣೆ ಮಾತ್ರವಲ್ಲದೇ ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 5ರಲ್ಲಿಯೂ ಕೂಡ ಭಾಗವಹಿಸಿದ್ದ ಪ್ರಿಯಾಂಕ ದೇಶಪಾಂಡೆ ಕೊನೆಯ ಹಂತದವರೆಗೆ ತಲುಪಿದ್ದರು. ರನ್ನರ್ ಅಪ್ ಆಗಿ ಕೂಡ ಹೊರ ಹೊಮ್ಮಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ನಡೆ ಮತ್ತು ನುಡಿಗಳಿಂದ ತಮಿಳುನಾಡಿನಲ್ಲಿ ಅನೇಕರ ಹೃದಯವನ್ನು ಗೆದ್ದಿದ್ದರು. ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಪ್ರಿಯಾಂಕ ದೇಶಪಾಂಡೆ 2015ರಲ್ಲಿ ತೆರೆಗೆ ಬಂದ ರಾಣಿ ಆಟಂ ಮತ್ತು 2016ರಲ್ಲಿ ತೆರೆಗೆ ಬಂದ ಉನ್ನೋಡು ವಾಜಂತಾಲ್ ವರಮಲ್ಲವ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಇಂಥಾ ಪ್ರಿಯಾಂಕ ದೇಶಪಾಂಡೆ ಸದ್ಯ ಸದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬ ವರ್ಗದ ಸಮ್ಮುಖದಲ್ಲಿ ವಾಸಿ ಸಾಚಿ ಅವರನ್ನು ವರಿಸಿದ್ದಾರೆ. ವಾಸಿ ಸಾಚಿ ವೃತ್ತಿಯಲ್ಲಿ ಡಿಜೆ ಆಗಿದ್ದು ಉದ್ಯಮಿ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಕ್ಲಿಕ್ 187 ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ.
ಅಂದ್ಹಾಗೇ ಪ್ರಿಯಾಂಕ ದೇಶಪಾಂಡೆಗೆ ಇದು ಎರಡನೇ ಮದುವೆ. 2016ರಲ್ಲಿ ಪ್ರವೀಣ್ ಕುಮಾರ್ ಅವರನ್ನು ಪ್ರಿಯಾಂಕ ಮದುವೆಯಾಗಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಇಬ್ಬರು ದೂರವಾಗಲಿದ್ದಾರೆ ಎನ್ನುವ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇತ್ತು. ಹೀಗೆ ವಿಚ್ಛೇದನದ ಸುದ್ದಿ ಹಬ್ಬಿದಾಗೆಲ್ಲ ಪ್ರಿಯಾಂಕ ದೇಶಪಾಂಡೆ ಸುದ್ದಿಗಳನ್ನು ಅಲ್ಲಗೆಳೆಯುತ್ತಾನೇ ಬಂದಿದ್ದರು. ನಾವು ಇಬ್ಬರು ಚೆನ್ನಾಗಿಯೇ ಇದ್ದೇವೆ ಎಂದು ಹೇಳುತ್ತಿದ್ದರು. ಆದರೆ ಅಂತಿಮವಾಗಿ 2022ರಲ್ಲಿ ಪ್ರಿಯಾಂಕ ದೇಶಪಾಂಡೆ ಮತ್ತು ಪ್ರವೀಣ್ ಕುಮಾರ್ ದಾಂಪತ್ಯ ಮುರಿದು ಬಿತ್ತು.
ಹೀಗೆ ಪ್ರವೀಣ್ ಕುಮಾರ್ ಅವರಿಂದ ದೂರವಾದ ಪ್ರಿಯಾಂಕ ದೇಶಪಾಂಡೆ ಕೆಲ ತಿಂಗಳ ಹಿಂದೆ ವಾಸಿ ಸಾಚಿ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರ ನಿರೂಪಣೆ ಮಾಡಲು ಹೋಗಿದ್ದರು. ಈ ಸಮಯದಲ್ಲಿ ಆದ ಪರಿಚಯ ಆ ನಂತರ ಸ್ನೇಹದ ಸ್ವರೂಪ ಪಡೆಯಿತು. ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಇದೀಗ ಇಬ್ಬರು ಮದುವೆಯಾಗಿದ್ದಾರೆ. ಸದ್ಯ ಪ್ರಿಯಾಂಕ ದೇಶಪಾಂಡೆ ಮತ್ತು ವಾಸಿ ಸಾಚಿ ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ಪ್ರಿಯಾಂಕ ದೇಶಪಾಂಡೆ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications











