ಜೈಲರ್ ಬಳಿಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್
ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರೆಸುತ್ತಲೇ ಇದೆ. ಆಗಸ್ಟ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು 22 ದಿನಗಳಲ್ಲಿ ಭಾರತದಲ್ಲಿ 328 ಕೋಟಿಗೂ ಹೆಚ್ಚು ಗಳಿಸಿದೆ. ವಿಶ್ವದಾದ್ಯಂತ 650 ಕೋಟಿ ರೂಪಾಯಿ ಗಳಿಸುವತ್ತ ಸಾಗುತ್ತಿದೆ ಎಂದು Sacnilk.com ವರದಿ ಮಾಡಿದೆ.
ಜೈಲರ್ ಸತತ ದಾಖಲೆಗಳನ್ನು ಮುರಿಯುತ್ತಿದ್ದು, ಚಿತ್ರತಂಡದ ಭಾಗವಾಗಿದ್ದ ಎಲ್ಲರಿಗೂ ಹೊಸ ಖ್ಯಾತಿ ತಂದುಕೊಟ್ಟಿದರೆ೪. ಅದರಲ್ಲೂ ಸಿನಿಮಾ ನಾಯಕ ತಲೈವ ರಜನಿಕಾಂತ್ ಅವರಿಗೆ ಮತ್ತೆ ಸೂಪರ್ ಸ್ಟಾರ್ ಪಟ್ಟವನ್ನು ಉಳಿಸಿಕೊಟ್ಟಿದ್ದು, ರಜನಿ ಚಿತ್ರರಂಗದಲ್ಲಿ ಹೊಸ ಮುನ್ನುಡಿ ಬರೆದಿದ್ದಾರೆ.

ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ!
ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಚಿತ್ರ ಜೈಲರ್ ಪ್ರೇಕ್ಷಕರ ಅಗಾಧ ಪ್ರೀತಿ ಮತ್ತು ಬೆಂಬಲದೊಂದಿಗೆ ಅಗಾಧ ಯಶಸ್ಸು ಗಳಿಸಿದ್ದು, ಇದರ ನಂತರ ರಜನಿಕಾಂತ್ ತಮ್ಮ ಚಾರ್ಮ್ ಮರಳಿ ಪಡೆದಿದ್ದಾರೆ.
ಜೈಲರ್ ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ನಟ ರಜನಿಕಾಂತ್ 210 ಕೋಟಿ ರೂಪಾಯಿ ಪಡೆದಿದ್ದಾರೆ. ವರದಿಗಳ ಪ್ರಕಾರ, ಚಿತ್ರದಲ್ಲಿ ನಟಿಸಲು ತಲೈವಾಗೆ 100 ಕೋಟಿ ರೂಪಾಯಿಗಳನ್ನು ಸಂಭಾವನೆ ನೀಡಲಾಗಿದೆ. ಹೆಚ್ಚುವರಿಯಾಗಿ, ಅವರಿಗೆ ಲಾಭದ ಪಾಲನ್ನು ರೂ. 110 ಕೋಟಿ ರೂಪಾಯಿ ರಜನಿ ಕೈ ಸೇರಿದೆ.
ಜೈಲರ್‌ನ ನಿರ್ಮಾಪಕ ಮತ್ತು ಸನ್ ಗ್ರೂಪ್ ಅಧ್ಯಕ್ಷ ಕಲಾನಿತಿ ಮಾರನ್ ಅವರು ಜೈಲರ್‌ನ ಲಾಭದ ಪಾಲನ್ನು ರಜನಿಕಾಂತ್‌ಗೆ ಹಸ್ತಾಂತರಿಸಿದ್ದಾರೆ. ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ, "ಶ್ರೀ ಕಲಾನಿತಿ ಮಾರನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು, ಜೈಲರ್‌ನ ಐತಿಹಾಸಿಕ ಯಶಸ್ಸನ್ನು ಆಚರಿಸಿದರು" ಎಂದಿದೆ.
ಇನ್ನು, ರಜನಿಕಾಂತ್ ಅವರು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎಂಬ ಹಣೆಪಟ್ಟಿ ಪಡೆದಿದ್ದಾರೆ. 2007 ರಲ್ಲಿ ಅವರ ಎಸ್ ಶಂಕರ್ ನಿರ್ದೇಶನದ ಚಿತ್ರ ಶಿವಾಜಿ: ದಿ ಬಾಸ್ ಬಿಡುಗಡೆಗೆ ಮುಂಚೆಯೇ, ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಮತ್ತು ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಏಷ್ಯಾದ ನಟ ಎಂದು ವರದಿಯಾಗಿತ್ತು.

ಜೈಲರ್‌ನ ನಿರ್ಮಾಪಕ, ಕಲಾನಿತಿ ಮಾರನ್, ಚಿತ್ರದ ಭವ್ಯ ಯಶಸ್ಸಿನ ನಂತರ ರಜನಿಕಾಂತ್‌ಗೆ BMW X7 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಲಾನಿತಿ ಮಾರನ್ ತಲೈವಾಗೆ ಹಲವಾರು ಕಾರುಗಳನ್ನು ಆಯ್ಕೆ ನೀಡಿದ್ದರು. ಅದರಲ್ಲಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದರು. ಕಡೆಗೆ ರಜನಿಕಾಂತ್ BMW X7 ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಲಾನಿತಿ ಮಾರನ್ ಅವರು ಹೊಚ್ಚಹೊಸ ಕಾರಿನ ಕೀಯನ್ನು ರಜನಿಕಾಂತ್‌ಗೆ ಹಸ್ತಾಂತರಿಸುವ ವೀಡಿಯೊವನ್ನು ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ.
ಜೈಲರ್‌ನ ಭರ್ಜರಿ ಯಶಸ್ಸಿನೊಂದಿಗೆ ರಜನಿಕಾಂತ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಜೈಲರ್‌ನಲ್ಲಿ ನೆಲ್ಸನ್ ದಿಲೀಪ್‌ಕುಮಾರ್, ತಲೈವಾ ಜೋಡಿ ಕಮಾಲ್ ಮಾಡಿದೆ. ಉತ್ತಮ ಪಾತ್ರವರ್ಗ ಮತ್ತು ಅನಿರುದ್ಧ್ ರವಿಚಂದರ್ ಅವರ ಸಕತ್ ಹಿನ್ನೆಲೆ ಸಂಗೀತ ಚಿತ್ರದ ಯಶಸ್ಸಿಗೆ ಮತ್ತೊಂದು ಕಾರಣ. ಸಿನಿಮಾ ಒಟಿಟಿಗೆ ಬರಲು ಸಿದ್ಧವಾಗಿದ್ದರೂ ಕೂಡ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಇನ್ನೂ ಜೈಲರ್ ಸದ್ದು ಮುಂದುವರೆಯುತ್ತಿದೆ.


Click it and Unblock the Notifications











