Rajinikanth's Next Movie: ಬ್ರೇಕಿಂಗ್ ನ್ಯೂಸ್.. ಒಂದೇ ಏಟಿಗೆ ಸುಳ್ಳು ಸುದ್ದಿ ಹಬ್ಬಿಸಿದವರ ಬಾಯಿ ಮುಚ್ಚಿಸಿದ ಸನ್ ಪಿಕ್ಚರ್ಸ್
Jailer Rajinikanth's Next Movie: ರಜನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಕ್ರೇಜಿ ನ್ಯೂಸ್ ಸಿಕ್ಕಿದೆ. ಕಳೆದೆರಡು ದಿನಗಳಿಂದ ತಲೈವಾ- ಲೋಕೇಶ್ ಕನಕರಾಜ್ ಕಾಂಬೋ ಪ್ರಾಜೆಕ್ಟ್ ಬಗ್ಗೆ ಭಾರೀ ಚರ್ಚೆ ನಡೀತಿತ್ತು. ಸಿನಿಮಾ ಬರುತ್ತೋ ಇಲ್ವೋ ಎನ್ನುವ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಸನ್ ಪಿಕ್ಚರ್ಸ್ ದಿಢೀರನೇ ಸಿನಿಮಾ ಘೋಷಿಸಿ ಎಲ್ಲದಕ್ಕೂ ತೆರೆ ಎಳೆದಿದೆ. ಸೂಪರ್ ಹಿಟ್ 'ಜೈಲರ್' ಕಾಂಬಿನೇಷನ್ ರಿಪೀಟ್ ಆಗ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಅದ್ಧೂರಿ ಸಿನಿಮಾ ಬರುತ್ತದೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿತ್ತು. ಆದರೆ ಯಾವಾಗ? ಏನು? ಎನ್ನುವುದು ಖಚಿತವಾಗಿರಲಿಲ್ಲ. ಅಧಿಕೃತವಾಗಿ ಯಾರು ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಅದು ತಲೈವಾ171ನೇ ಸಿನಿಮಾ. ಹಾಗಾಗಿ ತಲೈವಾ171 ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಇದೆಲ್ಲದರ ನಡುವೆ ದಳಪತಿ ವಿಜಯ್ ಹಾಗೂ ರಜನಿಕಾಂತ್ ಫ್ಯಾನ್ಸ್ ನಡುವೆ ತಿಕ್ಕಾಟ, ಕೆಸರೆರಚಾಟ ಆರಂಭವಾಗಿತ್ತು. ನಿನ್ನೆ(ಸೆಪ್ಟೆಂಬರ್ 10) ಇದ್ದಕ್ಕಿದಂತೆ ತಲೈವಾ171 ಸಿನಿಮಾ ನಿಂತುಹೋಯ್ತು ಎನ್ನುವ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ಕಳೆದೆರಡು ದಿನಗಳಿಂದ ತಲೈವಾ171 ಸಿನಿಮಾ ಬರುತೋ ಬರಲ್ವೋ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತು. ಲೋಕೇಶ್ ಕನಕರಾಜ್ ಚಿತ್ರದಿಂದ ಹೊರ ಬಂದಿದ್ದಾರೆ. ಅದಕ್ಕೆ ಕಾರಣ ರಜನಿಕಾಂತ್, ಎನ್ನುವ ಅರ್ಥದಲ್ಲಿ ಕೆಲವರು ಸುಳ್ಳು ಸುದ್ದಿ ತೇಲಿ ಬಿಟ್ಟಿದ್ದರು. ಎಲ್ಲರೂ ನಂಬುವಂತೆ ಫೇಕ್ ಪೋಸ್ಟ್‌ಗಳನ್ನು ಮಾಡಿದ್ದರು. ಕೆಲವರು ಇದನ್ನು ನಿಜ ಅಂತಲೇ ನಂಬಿದ್ದರು. ಇದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದರೆ ಈಗ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿದ್ದು ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಈ ಸುದ್ದಿ ಕೇಳಿ ಸೂಪರ್ ಸ್ಟಾರ್ ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿದ್ದಾರೆ.
ರಜನಿಕಾಂತ್ ಹಾಗೂ ಡ್ಯಾಶಿಂಗ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಹೇಗಿರುತ್ತೋ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಬಹಳ ಹಿಂದೆ ಲೋಕೇಶ್ ಕನಕರಾಜ್, ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಲೋಕೇಶ್ ಪ್ರತಿಭೆ ಬಗ್ಗೆ ತಲೈವಾ ಕೊಂಡಾಡಿ ಮಾತನಾಡಿದ್ದರು. ಆ ಫೋಟೊಗಳು ವೈರಲ್ ಆಗುತ್ತಿದ್ದಂತೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತದೆ ಎನ್ನುವ ಗುಸುಗುಸು ಶುರುವಾಗಿತ್ತು. ಅದು ಈಗ ಖಚಿತವಾದಂತಾಗಿದೆ.
ಲೋಕೇಶ್ ಕನಕರಾಜ್ ಹೇಳಿದ ಕಥೆಯಲ್ಲಿ ಸ್ನಿಪರ್ ಸೀಕ್ವೆನ್ ಐಡಿಯಾವನ್ನು ತಲೈವಾಗೆ ಹೇಳಿದ್ದರು. ಅದೇ ಸೀನ್ 'ಜೈಲರ್' ಚಿತ್ರದಲ್ಲಿದೆ. ಲೋಕೇಶ್ ಐಡಿಯಾವನ್ನು ರಜನಿಕಾಂತ್, ನೆಲ್ಸನ್‌ಗೆ ಹೇಳಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಲೋಕೇಶ್ ಮಾಡಿಕೊಂಡಿದ್ದ ಕಥೆ ಕೂಡ ಹೆಚ್ಚುಕಮ್ಮಿ 'ಜೈಲರ್' ಕಥೆಯಂತೆಯೇ ಇದೆ. ಹಾಗಾಗಿ ಲೋಕೇಶ್ ತಲೈವಾ171 ಸಿನಿಮಾದಿಂದ ಹಿಮದೆ ಸರಿದಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ವೈರಲ್ ಮಾಡಲಾಗಿತ್ತು. ಆದರೆ ರಜನಿಕಾಂತ್ ಅಭಿಮಾನಿಗಳು ಇದನ್ನೆಲ್ಲಾ ನಂಬಲಿಲ್ಲ. ಕೊನೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ಇನ್ನು ತಲೈವಾ171 ಸಿನಿಮಾ ಬಗ್ಗೆ ಹೇಳುವುದಾದರೆ 5ನೇ ಬಾರಿಗೆ ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. 'ಜೈಲರ್' ಸಿನಿಮಾ ಈ ಸಂಸ್ಥೆ ನೂರಾರು ಕೋಟಿ ಗಳಿಸಿತ್ತು. ಇದೀಗ ಮತ್ತೆ ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಬರ್ತಿರೋದು ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳ್ತಿರೋದು ವಿಶೇಷ. ಇನ್ನು ಅನಿರುದ್ಧ್ ರವಿಚಂದರ್ ಸಂಗೀತ, ಅನ್ಬರಿವ್ ಆಕ್ಷನ್ ಚಿತ್ರಕ್ಕಿರಲಿದೆ. ಮುಂದಿನ ವರ್ಷ ದೀಪಾವಳಿಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
'ಕೈದಿ', 'ಮಾಸ್ಟರ್', 'ವಿಕ್ರಂ' ಸಿನಿಮಾಗಳನ್ನು ಕಟ್ಟಿಕೊಟ್ಟು ಲೋಕೇಶ್ ಕನಕರಾಜ್ ಸಂಚಲನ ಸೃಷ್ಟಿಸಿದ್ದಾರೆ. ಸದ್ಯ ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಸರಾಗೆ ಈ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ತಲೈವಾ171 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.


Click it and Unblock the Notifications











