ಜವಾನ್ ಸಕ್ಸಸ್ ಬೆನ್ನಲ್ಲೇ ಒಂದಲ್ಲ, ಎರಡಲ್ಲ..ಎಷ್ಟು ಚಿತ್ರಗಳಿಗೆ ಅಟ್ಲಿ ಕೈ ಹಾಕುತ್ತಿದ್ದಾರೆ ಗೊತ್ತಾ?

ತಮಿಳು ನಿರ್ದೇಶಕ ಅಟ್ಲಿ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ವರ್ಷದ ಸೂಪರ್ ಡೂಪರ್ ಹಿಟ್ ಸಿನಿಮಾ ಆಗಿ ಶಾರುಖ್ ಖಾನ್ ಅಭಿನಯದ ಜವಾನ್ ದಾಖಲೆ ಬರೆದಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಿರ್ದೇಶಕ ಅಟ್ಲಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ನಿರ್ದೇಶಕ ಅಟ್ಲಿ ತಮ್ಮ ಪ್ರೊಡಕ್ಷನ್ ಕಂಪನಿ ಎ ಫಾರ್ ಆಪಲ್ ಸ್ಟುಡಿಯೋಸ್ ಅಡಿಯಲ್ಲಿ ಬರೋಬ್ಬರಿ ನಾಲ್ಕು (4) ಚಿತ್ರಗಳನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ಮಾಪಕರಾಗಿ ಅಟ್ಲಿ ಅವರ ಮುಂದಿನ ಚಿತ್ರದಲ್ಲಿ ವರುಣ್ ಧವನ್ ಅವರ ಹಿಂದಿ ಸಿನಿಮಾವಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD18 ಎಂದು ಕರೆಯಲಾಗುತ್ತಿದೆ. ವರುಣ್ ಧವನ್ ಜೊತೆಗೆ ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ಕೂಡ ಜೊತೆಯಾಗಲಿದ್ದಾರೆ.

atlee-to-produce-four-films-under-his-production

ಹಿಂದಿ ಸಿನಿಮಾ ಜೊತೆಗೆ ಅಟ್ಲಿ ನಿರ್ಮಾಪಕರಾಗಿ ಮೂರು ಸಿನಿಮಾಗಳನ್ನು ಮಾಡಲಿದ್ದಾರೆ. ಅದರಲ್ಲಿ ಎರಡು ತಮಿಳು ಚಿತ್ರಗಳು ಮತ್ತು ಒಂದು ತೆಲುಗು ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವೆಬ್‌ಸೈಟ್ ಪಿಂಕ್ವಿಲ್ಲಾ ಜೊತೆಗಿನ ವಿಶೇಷ ಸಂದರ್ಶನದಲ್ಲಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.

ವರುಣ್ ಧವನ್, ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ನಟಿಸಲಿರುವ ಸಿನಿಮಾವು ಈ ಹಿಂದೆ ಅಟ್ಲಿ ನಿರ್ದೇಶಿಸಿದ್ದ 2016 ರ ಬ್ಲಾಕ್‌ಬಸ್ಟರ್ ಚಿತ್ರ 'ಥೇರಿ'ಯ ಬಾಲಿವುಡ್ ರಿಮೇಕ್ ಎಂದು ವದಂತಿಗಳಿವೆ. ಥೇರಿ ಚಿತ್ರದಲ್ಲಿ ದಳಪತಿ ವಿಜಯ್, ಸಮಂತಾ ರುತ್ ಪ್ರಭು ಮತ್ತು ಆಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

atlee-to-produce-four-films-under-his-production

ಸಿನಿಮಾಗಳಿಂದ ಕೊಂಚ ವಿರಾಮ ತೆಗೆದುಕೊಂಡ ನಿರ್ದೇಶಕ ಅಟ್ಲಿ

ಜವಾನ್ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಅಟ್ಲಿ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ತಮ್ಮ ಕುಟುಂಬದ ಜೊತೆಗೆ ಸಮಯ ಕಳೆಯಲು ಮತ್ತು ತಮ್ಮ ಮುದ್ದಾದ ಮಗುವಿನ ಮೇಲೆ ಹೆಚ್ಚು ಗಮನಹರಿಸಲು ಈ ಸಮಯ ಬೇಕು ಎಂದಿದ್ದಾರೆ. ಅಟ್ಲಿ ಈ ವರ್ಷದ ಜನವರಿಯಲ್ಲಿ ತಂದೆಯಾಗಿದ್ದು, ತಮ್ಮ ಪುಟ್ಟ ಕಂದನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿಲ್ಲ.

ಇದರ ಜೊತೆಗೆ ಡ್ಯುಯಲ್ ಹೀರೋ ಚಿತ್ರಕ್ಕೆ ದಳಪತಿ ವಿಜಯ್ ಮತ್ತು ಶಾರುಖ್ ಖಾನ್ ಇಬ್ಬರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಪಿಂಕ್ವಿಲ್ಲಾಗೆ ಅಟ್ಲಿ ತಿಳಿಸಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವ ಕಾರಣ ಪ್ಲ್ಯಾನಿಂಗ್ ಕೂಡ ದೊಡ್ಡದಾಗಿರಬೇಕು. ಹಾಲಿವುಡ್ ಬರಹಗಾರರನ್ನು ಸಹ ಇದಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಇದಲ್ಲದೆ, ಅಟ್ಲಿ ಅವರು ನಟ ಅಜಿತ್ ಕುಮಾರ್‌ಗಾಗಿ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿದ್ದು, ಅವರೊಂದಿಗೆ ಇನ್ನು ಮಾತುಕತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಜವಾನ್

ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ 2023ರ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಶಾರುಖ್ ಖಾನ್ ನಟನೆಯ ಈ ಸಿನಿಮಾದಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಪ್ರಿಯಾಮಣಿ, ವಿಜಯ್ ಸೇತುಪತಿ ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಟರೇ ತುಂಬಿದ್ದರು. ನಟಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 1100 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ಬರೆದಿದೆ.

More from Filmibeat

English summary
Atlee to produce four films under his banner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X