ತಮಿಳು ನಟ ಸೂರ್ಯ ಈಗ ಎರಡು ರೂಪಾಯಿ ಡಾಕ್ಟರ್!

ಕಾಲಿವುಡ್ ಸೋಲಿನ ಸರಣಿಗೆ 'ಕರುಪ್ಪು' ಸಿನಿಮಾ ಬ್ರೇಕ್ ಆಗಿದೆ. ಮೇ 15ರಂದು ತೆರೆಗೆ ಬಂದ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. 13 ವರ್ಷಗಳ ಬಳಿಕ ಸೂರ್ಯ ಬ್ಲಾಕ್‌ಬಸ್ಟರ್ ಸಿನಿಮಾ ಕಟ್ಟಿದ್ದಾರೆ

'ಕರುಪ್ಪು' ಸಕ್ಸಸ್ ಬಳಿಕ ಸೂರ್ಯ ನಟನೆಯ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಟಿ. ಜೆ ಜ್ಞಾನವೇಲ್ ನಿರ್ದೇಶನದ ಬಯೋಪಿಕ್ ಚಿತ್ರದಲ್ಲಿ ನಟ ಸೂರ್ಯ ನಟಿಸುತ್ತಾರೆ ಎನ್ನಲಾಗ್ತಿದೆ. ಚೆನ್ನೈ ಮೂಲದ ವೈದ್ಯರೊಬ್ಬರ ಜೀವನಾಧರಿತ ಚಿತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಜ್ಹಗಾರಂ ಸ್ಟುಡಿಯೊಸ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

After Karuppu Actor Suriya to star in Thiruvengadam Veeraraghavan biopic Reports

ಚೆನ್ನೈನಲ್ಲಿ ಡಾ. ತಿರುವೇಂಗಡಂ ವೀರರಾಘವನ್ ಬಡವರಿಗಾಗಿ 2 ರೂಪಾಯಿಗೆ ಚಿಕಿತ್ಸೆ ನೀಡಿ ಗಮನ ಸೆಳೆದಿದ್ದರು. ಸತತ 50 ವರ್ಷಗಳ ಕಾಲ ಅವರು ಬಡವರಿಗೆ ಸಹಾಯವಾಗಲಿ ಎಂದು ಬಹಳ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಮೆಚ್ಚುಗೆ ಗಳಿಸಿದ್ದರು. "ಎರಡು ರೂಪಾಯಿ ಡಾಕ್ಟರ್" ಎಂದೇ ಜನ ಅವರನ್ನು ಕರೆಯುತ್ತಿದ್ದರು. ಸಮಾಜಕ್ಕೆ ಅವರ ಸೇವೆ ಪುರಸ್ಕರಿಸಿ 2021ರಲ್ಲಿ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಚೆನ್ನೈನ ಶ್ರೀ ಕಲ್ಯಾಣಪುರಂ ಹಾಗೂ ಎರುಕ್ಕಂಚೇರಿಯ ಭಾಗದ ಜನರಿಗೆ ಡಾ. ತಿರುವೇಂಗಡಂ ವೀರರಾಘವನ್ ಸೇವೆ ಸಲ್ಲಿಸಿದರು. ಆಗಸ್ಟ್ 15, 2020 ರಂದು ಕೊನೆಯುಸಿರೆಳೆದಿದ್ದರು. ಅವರ ಕಥೆಯನ್ನು ಆಧರಿಸಿ ಜ್ಞಾನವೇಲ್ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ಈ ಹಿಂದೆ ಜ್ಞಾನವೇಲ್ ನಿರ್ದೇಶನದ 'ಜೈಭೀಮ್' ಚಿತ್ರದಲ್ಲಿ ವಿಜಯ್ ನಟಿಸಿದ್ದರು. ವಕೀಲನ ಪಾತ್ರದಲ್ಲಿ ನಟಿಸಿದ್ದರು. ಈಗ ಮುಂದಿನ ಚಿತ್ರಕ್ಕಾಗಿ ಸ್ಟೆತೊಸ್ಕೋಪ್ ಹಿಡಿಯಲಿದ್ದಾರೆ.

After Karuppu Actor Suriya to star in Thiruvengadam Veeraraghavan biopic Reports

ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜಿನಲ್ಲಿ ಡಾ. ತಿರುವೇಂಗಡಂ ವೀರರಾಘವನ್ ಓದಿ ವೈದ್ಯರಾಗಿದ್ದರು. ಅಧ್ಯಯನ ಮಾಡಿದರು. ಆದಾಯಕ್ಕಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಣ್ಣ ಕ್ಲಿನಿಕ್ ಹೊಂದಿದ್ದ ಅವರು ಬಡವರಿಗೆ ಕನಿಷ್ಠ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಮಂಡ್ಯದಲ್ಲಿ ಡಾ. ಶಂಕರೇಗೌಡ ಎಂಬುವವರು ಕೂಡ ಇದೇ ರೀತಿ ಬಹಳ ಕಡಿಮೆ ಹಣ ಪಡೆದು ಜನರಿಗೆ ಚಿಕಿತ್ಸೆ ನೀಡಿ ಪ್ರಸಿದ್ಧರಾಗಿದ್ದರು. "ಐದು ರೂಪಾಯಿ ಡಾಕ್ಟರ್" ಎಂದೇ ಅವರು ಹೆಸರಾಗಿದ್ದಾರೆ.

ನಿಜಜೀವನದಲ್ಲಿ ಸೂರ್ಯ ಕೂಡ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡ್ತಾ ಬರ್ತಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದಲೂ ಮನೆ ಮಾತಾಗಿದ್ದಾರೆ. ಇದೀಗ ನಿಜವಾದ ಸಾಧಕನ ಜೀವನಧರಿತ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ. 'ಜೈಭೀಮ್' ಚಿತ್ರದಲ್ಲಿ ಕೂಡ ಅಸಹಾಯಕರಿಗೆ ನೆರವಾಗುವ ವಕೀಲನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.

'ಕರುಪ್ಪು' ಬಳಿಕ ಸೂರ್ಯ ನಟನೆಯ 'ವಿಶ್ವನಾಥ್ & ಸನ್ಸ್' ಸಿನಿಮಾ ತೆರೆಗೆ ಬರಲಿದೆ. ಆ ನಂತರ ಮತ್ತೊಂದು ಸಿನಿಮಾದಲ್ಲಿ ಅವರು ಬಣ್ಣ ಹಚ್ಚಲಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಡಾ. ತಿರುವೇಂಗಡಂ ವೀರರಾಘವನ್ ಜೀವನಾಧರಿತ ಸಿನಿಮಾ ಶುರುವಾಗಲಿದೆ. ಈಗಾಗಲೇ ಸ್ಕ್ರಿಪ್ಟ್ ಹಾಗೂ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೀತಿದೆ.

ಸಾಧಕರೊಬ್ಬರ ಜೀವನವನ್ನು ಆಧರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭದ ವಿಷಯ ಅಲ್ಲ. ಕಮರ್ಷಿಯಲ್ ಅಂಶಗಳು ಇಲ್ಲದೇ ಈಗ ಸಿನಿಮಾ ಮಾಡಿ ಗೆಲ್ಲುವುದು ಸವಾಲಿನ ಕೆಲಸ. ಸದ್ಯ ಎರಡು ರೂಪಾಯಿ ವೈದ್ಯರ ಕಥೆಯನ್ನು ಜ್ಞಾನವೇಲ್ ಹೇಗೆ ತೆರೆಮೇಲೆ ತರುತ್ತಾರೆ, ಸೂರ್ಯ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.

Read more about: suriya kollywood biopic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X