ಚಿತ್ರೀಕರಣದಿಂದ ಹಿಂತಿರುಗುತ್ತಿದ್ದಂತೆ ಕೋವಿಡ್ ಲಸಿಕೆ ಪಡೆದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚಿಗಷ್ಟೆ ಅಣ್ಣಾತ್ತೆ ಶೂಟಿಂಗ್ ಮುಗಿಸಿ ಹೈದರಾಬಾದ್‌ನಿಂದ ಚೆನ್ನೈಗೆ ಮರಳಿದ್ದರು. ಚೆನ್ನೈನ ನಿವಾಸಕ್ಕೆ ಹಿಂತಿರುಗಿದ ಮರುದಿನವೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಮೇ 13 ರಂದು ನಟ ರಜನಿಕಾಂತ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಕುರಿತು ತಲೈವಾ ಮಗಳು ಸೌಂದರ್ಯ ರಜನಿಕಾಂತ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದು ರಜನಿ ಪಡೆದ ಎರಡನೇ ಡೋಸ್ ಎಂದು ತಿಳಿದು ಬಂದಿದೆ.
''ನಮ್ಮ ತಲೈವರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಬನ್ನಿ ಕೊರೊನಾ ವಿರುದ್ಧದ ಒಟ್ಟಾಗಿ ಹೋರಾಡಿ ಗೆಲುವು ಸಾಧಿಸೋಣ'' ಎಂದು ಸೌಂದರ್ಯ ಪೋಸ್ಟ್ ಮಾಡಿದ್ದಾರೆ.

ಸಿರುತೈ ಶಿವ ನಿರ್ದೇಶನದ ಅಣ್ಣಾತ್ತೆ ಚಿತ್ರೀಕರಣಕ್ಕಾಗಿ ರಜನಿಕಾಂತ್ ಹೈದರಾಬಾದ್ ತೆರಳಿದ್ದರು. ತಮ್ಮ ಭಾಗದ ಚಿತ್ರೀಕರಣ ಮುಗಿಸಿ ನಿನ್ನೆಯಷ್ಟೇ ಮನೆಗೆ ಹಿಂತಿರುಗಿದ್ದರು.
ಅದಕ್ಕೂ ಮುಂಚೆ ಕಳೆದ ಡಿಸೆಂಬರ್ ತಿಂಗಳಲ್ಲಿ ಅಣ್ಣಾತ್ತೆ ಸೆಟ್‌ನಲ್ಲಿ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿತ್ತು. ಆ ವೇಳೆ ರಜನಿಕಾಂತ್ ಅವರು ಮುನ್ನೆಚ್ಚರಿಕೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ರಜನಿಕಾಂತ್ ಕೋವಿಡ್ ಲಸಿಕೆ ಪಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯಸ್ಪದ ಮೇಮ್ಸ್ ವೈರಲ್ ಆಗುತ್ತಿದೆ. ತಲೈವಾ ಲಸಿಕೆ ಪಡೆದ್ರು, ಇನ್ಮುಂದೆ ಕೊರೊನಾ ಓಡಿ ಹೋಗುತ್ತದೆ, ರಜನಿ ಲಸಿಕೆ ಹಾಕಿಸಿಕೊಂಡಿದ್ದು ಆಯ್ತು, ಕೊರೊನಾ ಸಾವು ಗ್ಯಾರೆಂಟಿ ಎಂಬ ಟ್ವೀಟ್‌ಗಳು ಹರಿದಾಡುತ್ತಿದೆ.


Click it and Unblock the Notifications











