'ಸೂರರೈ ಪೊಟ್ರು' ಯಶಸ್ಸಿನ ಬಳಿಕ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ ನಟ ಸೂರ್ಯ
ನಟ ಸೂರ್ಯ ಸದ್ಯ 'ಸೂರರೈ ಪೊಟ್ರು' ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಇತ್ತೀಚಿಗೆ ಒಟಿಟಿಯಲ್ಲಿ ರಿಲೀಸ್ ಆಗಿರುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಗಣ್ಯರು ಸಹ ಚಿತ್ರ ನೋಡಿ ಹಾಡಿಹೊಗಳುತ್ತಿದ್ದಾರೆ.
ಈ ಸಿನಿಮಾದ ಸಕ್ಸಸ್ ನ ಬೆನ್ನಲ್ಲೇ ಸೂರ್ಯ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಚಿತ್ರದಲ್ಲಿ ಸೂರ್ಯ ನಟಿಸಲಿದ್ದಾರೆ. ಇದು ವೆಬ್ ಸಿನಿಮಾವಾಗಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಇದು ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಸೂರ್ಯ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ವಿಜಯ್ ಸೇತುಪತಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅರವಿಂದ್ ಸ್ವಾಮಿ, ಸಿದ್ಧಾರ್ಥ್ ಸೇರಿದಂತೆ ಅನೇಕರು ನಟಿಸಲಿದ್ದಾರಂತೆ. ಈ ವೆಬ್ ಸಿನಿಮಾಗೆ ಖ್ಯಾತ ನಿರ್ದೇಶಕ ಮಣಿರತ್ನಂ ಕೂಡ ಒಂದು ಭಾಗವಾಗಿದ್ದಾರಂತೆ.

ನಟ ಸೂರ್ಯ ಮತ್ತು ಗೌತಮ್ ಮೆನನ್ 12 ವರ್ಷದ ಬಳಿಕ ಒಂದಾಗುತ್ತಿದ್ದಾರೆ. ಇಬ್ಬರದ್ದು ಸಕ್ಸಸ್ ಫುಲ್ ಕಾಂಬಿನೇಷನ್. ವಾರಣಂ ಆಯಿರಾಮ್ ಮತ್ತು ಕಾಖಾ ಕಾಖಾ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಟ ಸೂರ್ಯ ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ, ಸಖತ್ ಎನರ್ಜಿ ಇದೆ ಸೆಟ್ ನಲ್ಲಿ ಎಂದು ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.


Click it and Unblock the Notifications











