For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಸಿನಿಮಾ ನೋಡಿ 'ಎಂದಿರನ್' ನಿರ್ದೇಶಕ ಶಂಕರ್ ಹೇಳಿದ್ದೇನು? ಯಶ್ ಜೊತೆ ಸಿನಿಮಾ ಯಾವಾಗ?

  |

  'ಕೆಜಿಎಫ್ 2' ಸಿನಿಮಾ ಒಟಿಟಿಗೂ ಲಗ್ಗೆ ಇಟ್ಟಿದೆ. ಇತ್ತ ಥಿಯೇಟರ್‌ನಲ್ಲೂ ಸಿನಿಮಾ ಸದ್ದು ಮಾಡುತ್ತಲೇ ಇದೆ. ವಿಶ್ವದಾದ್ಯಂತ ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಜೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನೊಂದು ಕಡೆ ಸೆಲೆಬ್ರೆಟಿಗಳು ಭಾಷೆಯನ್ನು ಮರೆತು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಕನ್ನಡದ ಪ್ಯಾನ್ ಇಂಡಿಯಾದ ಸಿನಿಮಾ ದೇಶದ ಉದ್ದಗಲದಲ್ಲೂ ದರ್ಬಾರ್ ನಡೆಸುತ್ತಲೇ ಇದೆ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದರೊಂದಿಗೆ ಸೆಲೆಬ್ರೆಟಿಗಳೂ ಕೂಡ ಸಿನಿಮಾ ನೋಡಿ ಮನಸಾರೆ ಹಾಡಿಹೊಗಳಿದ್ದಾರೆ. ಈ ಬಾರಿ ಭಾರತೀಯ ಚಿತ್ರರಂಗ ಕಂಡ ಬೆಸ್ಟ್ ಡೈರೆಕ್ಟರ್ ಶಂಕರ್ 'ಕೆಜಿಎಫ್ 2' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

  33ನೇ ದಿನ 1200 ಕೋಟಿ ಕ್ಲಬ್ ಸೇರಿದ 'ಕೆಜಿಎಫ್ 2': ಬಾಕ್ಸಾಫೀಸ್‌ನಲ್ಲಿ ಜಗ್ಗೋ ಮಾತೇ ಇಲ್ಲ33ನೇ ದಿನ 1200 ಕೋಟಿ ಕ್ಲಬ್ ಸೇರಿದ 'ಕೆಜಿಎಫ್ 2': ಬಾಕ್ಸಾಫೀಸ್‌ನಲ್ಲಿ ಜಗ್ಗೋ ಮಾತೇ ಇಲ್ಲ

  'ಕೆಜಿಎಫ್ 2' ನೋಡಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ದಿಗ್ಗಜರು ಮೆಚ್ಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಯಶ್ ಪರ್ಫಾಮೆನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಶಂಕರ್ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೊಂಡ ಒಂದು ತಿಂಗಳ ಬಳಿಕ ಸಿನಿಮಾ ನೋಡಿ, ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

  'ಕೆಜಿಎಫ್ 2' ಬಗ್ಗೆ ನಿರ್ದೇಶಕ ಶಂಕರ್ ಮೆಚ್ಚುಗೆ

  'ಕೆಜಿಎಫ್ 2' ಬಗ್ಗೆ ನಿರ್ದೇಶಕ ಶಂಕರ್ ಮೆಚ್ಚುಗೆ

  ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಶಂಕರ್. ಇವರು ತಮಿಳಿನಲ್ಲಿ ನಿರ್ದೇಶಿಸಿದ ಸಿನಿಮಾಗಳು ಬಾಲಿವುಡ್‌ ಹಾಗೂ ತಮಿಳಿಗೆ ಡಬ್ ಆಗಿ ಬಿಡುಗಡೆಯಾಗಿವೆ. 'ಜೆಂಟಲ್‌ಮನ್', 'ಕಾದಲನ್', 'ಇಂಡಿಯನ್', 'ಅನ್ನಿಯನ್', 'ಎಂದಿರನ್, '2.o' ಅಂತ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಶಂಕರ್‌ 'ಕೆಜಿಎಫ್ 2' ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. 'ಕೆಜಿಎಫ್ 2' ಸಿನಿಮಾ ದಲ್ಲಿ ಯಶ್ ನಟನೆ, ಪ್ರಶಾಂತ್ ನೀಲ್ ಡೈರೆಕ್ಷನ್ ನೋಡಿ ದಂಗಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸಿನಿಮಾ ತಂಡವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

  ಶಂಕರ್ ಟ್ವೀಟ್‌ನಲ್ಲಿ ಏನಿದೆ?

  'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ 33 ದಿನಗಳು ಕಳೆದಿವೆ. ಈಗ ಸಿನಿಮಾ ನೋಡಿರುವ ಶಂಕರ್ ಮೆಚ್ಚುಗೆ ಮಾತಿಗಳನ್ನಾಡಿದ್ದಾರೆ. " ಕೊನೆಗೂ 'ಕೆಜಿಎಫ್ 2' ಸಿನಿಮಾವನ್ನು ನೋಡಿದೆ. ತೀಕ್ಷಣವಾದ ಕಥೆ ಹೇಳುವ ಶೈಲಿ, ಚಿತ್ರಕಥೆ, ಸಂಕಲನ. ಇಂಟರ್‌ಕಟ್ ಆಕ್ಷನ್ ಹಾಗೂ ಡೈಲಾಗ್ ತುಂಬಾನೇ ಸುಂದರವಾಗಿ ಕೆಲಸ ಮಾಡಿದೆ. ಪರಿಷ್ಕರಿಸಿದ ಮಾಸ್ ದೃಶ್ಯಗಳ ಶೈಲಿ ಅದ್ಭುತವಾಗಿದೆ. ಯಶ್ ಪವರ್ ಹೌಸ್ ಹಾಗೂ ಅದ್ಭುತ ಅನುಭವ ನೀಡಿದ ಪ್ರಶಾಂತ್ ನೀಲ್‌ಗೆ ಧನ್ಯವಾದಗಳು." ಎಂದು ಶಂಕರ್ ಟ್ವೀಟ್ ಮಾಡಿದ್ದಾರೆ.

  ಶಂಕರ್ ಜೊತೆ ಸಿನಿಮಾ ಆಸೆ ವ್ಯಕ್ತಪಡಿಸಿದ್ದ ಯಶ್

  ಶಂಕರ್ ಜೊತೆ ಸಿನಿಮಾ ಆಸೆ ವ್ಯಕ್ತಪಡಿಸಿದ್ದ ಯಶ್

  2019ರಲ್ಲಿ ತಮಿಳಿನ ಬಿಹೈಂಡ್ ವುಡ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಯಶ್‌ಗೆ 'ಸೆನ್ಸೇಷನ್ ಆಫ್ ಸೌತ್ ಇಂಡಿಯನ್ ಸಿನಿಮಾ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈ ವೇಳೆ ನಿರೂಪಕರು ಶಂಕರ್ ಹಾಗೂ ಮಣಿರತ್ನಂ ಇಬ್ಬರಲ್ಲಿ ಯಾವ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ? ಎಂದು ಕೇಳಿದ್ದರು. ಈ ವೇಳೆ ಯಶ್ ಹಿಂದೆ ಮುಂದೆ ಯೋಚಿಸದೆ, ಶಂಕರ್ ಹೆಸರು ಹೇಳಿದ್ದರು. ಆ ಬಳಿಕ ಯಶ್ ಹಾಗೂ ಶಂಕರ್ ಸಿನಿಮಾ ಬಗ್ಗೆ ಊಹಾ-ಪೋಹಗಳು ಹರಡುತ್ತಲೇ ಇವೆ.

  ಯಶ್‌ ಸಿನಿಮಾ ಮಾಡಬೇಕಿತ್ತಾ ಶಂಕರ್?

  ಯಶ್‌ ಸಿನಿಮಾ ಮಾಡಬೇಕಿತ್ತಾ ಶಂಕರ್?

  ಯಶ್ ನಿರ್ದೇಶಕ ಶಂಕರ್ ಬಗ್ಗೆ ಮಾತಾಡುತ್ತಿದ್ದಂತೆ ಚಿತ್ರರಂಗದಲ್ಲಿ ಗಾಳಿ ಸುದ್ದಿ ಹರಡಿತ್ತು. ಶಂಕರ್ ಜೊತೆ ಯಶ್ ಸಿನಿಮಾ ಮಾಡುತ್ತಾರೆ ಎಂದು ಊಹಾ-ಪೋಹಗಳು ಹಬ್ಬಿದ್ದವು. 'ಇಂಡಿಯನ್ 2' ಸಿನಿಮಾ ಮುಗಿದ ಬಳಿಕ ಐತಿಹಾಸಿಕ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಲಿದ್ದಾರೆ ಎಂಬ ವಿಷಯ ಹಬ್ಬಿತ್ತು. ಆದರೆ, ಶಂಕರ್ ಟಾಲಿವುಡ್ ಕಡೆ ಮುಖ ಮಾಡಿ, ರಾಮ್ ಚರಣ್ 15ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನಿರ್ಧರಿಸಿದ್ದರು.

  English summary
  After Watching KGF Chapter 2 Tamil Director Shankar Praised Yash and Prashanth Neel, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X