For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

  |

  ಈ ಹಿಂದೆ ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಅಲ್ಲಿಂದ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಜೊತೆಗೆ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಇಬ್ಬರೂ ಆತ್ಮೀಯ ಸ್ನೇಹಿತರು. ಹೀಗಾಗಿ ಮೊದಲಿನಿಂದಲೂ ಐಶ್ವರ್ಯಾ ರೈ ಮೇಲೆ ವಿಶೇಷ ಗೌರವ. ಬಹಳ ದಿನಗಳ ಬಳಿಕ ಮತ್ತೆ ಐಶ್ವರ್ಯಾ ರೈ ಬಚ್ಚನ್ ಹಾಗೂ ರಜನಿಕಾಂತ್ ಇಬ್ಬರೂ ಮುಖಾಮುಖಿಯಾಗಿದ್ದಾರೆ.

  ನಿನ್ನೆ (ಸೆಪ್ಟೆಂಬರ್ 6) 'ಪೊನ್ನಿಯನ್ ಸೆಲ್ವನ್ ಪಾರ್ಟ್ 1' ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಈ ಅದ್ಧೂರಿ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಅದರಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ಪ್ರಮುಖ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಲ್ಲದೆ ಪೊನ್ನಿಯನ್ ಸೆಲ್ವನ್ ಚಿತ್ರತಂಡ ಕೂಡ ಭಾಗವಹಿಸಿತ್ತು.

  'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!

  ರಜನಿಕಾಂತ್ ಹಾಗೂ ಕಮಲ್‌ ಹಾಸನ್ ಜೊತೆಗೆ ಐಶ್ವರ್ಯಾ ರೈ ಬಚ್ಚನ್ ಕೂಡ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಹಾಗೇ ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಬಹಳ ದಿನಗಳ ಬಳಿಕ ಮತ್ತೆ ಭೇಟಿಯಾದ ಕ್ಷಣವೇ ಹೈಲೈಟ್ ಆಗಿತ್ತು.

   ರಜನಿ ಕಾಲಿಗೆ ಬಿದ್ದ ಐಶ್ವರ್ಯಾ ರೈ

  ರಜನಿ ಕಾಲಿಗೆ ಬಿದ್ದ ಐಶ್ವರ್ಯಾ ರೈ

  12 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಎಂದಿರನ್' ಸಿನಿಮಾದಲ್ಲಿ ರಜನಿಕಾಂತ್‌ಗೆ ಐಶ್ವರ್ಯಾ ರೈ ಜೋಡಿಯಾಗಿದ್ದರು. ಅಲ್ಲಿಂದ ಇವರಿಬ್ಬರ ಕಾಂಬಿನೇಷನ್‌ ಅನ್ನು ತೆರೆಮೇಲೆ ನೋಡಲು ಇಬ್ಬರ ಅಭಿಮಾನಿಗಳೂ ಕಾದು ಕೂತಿದ್ದಾರೆ. ಈ ಮಧ್ಯೆ 2.0 ಸಿನಿಮಾದಲ್ಲಿ ಐಶ್ವರ್ಯಾ ರೈ ಧ್ವನಿ ನೀಡಿದ್ದು ಬಿಟ್ಟರೆ, ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಹೀಗಿದ್ದರೂ ಐಶ್ವರ್ಯಾಗೆ ಸೂಪರ್‌ಸ್ಟಾರ್ ಮೇಲಿನ ಗೌರವ ಕಮ್ಮಿಯಾಗಿಲ್ಲ. ಅದಕ್ಕೆ ರಜನಿಕಾಂತ್ ನೋಡಿದೊಡನೇ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

   ಟ್ರೈಲರ್‌ಗಿಂತ ಹೈಲೈಟ್

  ಟ್ರೈಲರ್‌ಗಿಂತ ಹೈಲೈಟ್

  ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಇಬ್ಬರ ಭೇಟಿಯಾದ ಕ್ಷಣವೇ ಹೈಲೈಟ್ ಆಗಿತ್ತು. ಟ್ರೈಲರ್ ಲಾಂಚ್‌ಗಿಂತಲೂ ಐಶ್ವರ್ಯಾ ತಲೈವಾ ರಜನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ಹೆಚ್ಚು ಕಾಲ ಇಬ್ಬರೂ ಮಾತುಕತೆಯಲ್ಲಿ ತೊಡಗಿದ್ದರು. ಈ ಕ್ಷಣಗಳನ್ನು ನೋಡಿ ಸೂಪರ್‌ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಅಲ್ಲದೆ ಐಶ್ವರ್ಯಾ ರೈ ವೇದಿಕೆ ಮೇಲೆ ಆಡಿದ ಮಾತುಗಳು ಫ್ಯಾನ್ಸ್ ಎಂದೂ ಮರೆಯಲಾಗದ ಕ್ಷಣ. ಹಾಗಂತ ಐಶ್ವರ್ಯಾ ರೈ ಸೂಪರ್‌ಸ್ಟಾರ್ ಕಾಲಿಗೆ ಬಿದ್ದಿದ್ದು ಇದೇ ಮೊದಲೇನಲ್ಲ. ಈ ಹಿಂದೆನೂ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

  ರಜನಿಕಾಂತ್ 'ಜೈಲರ್' ಸಿನಿಮಾದಿಂದ ಐಶ್ವರ್ಯಾ ರೈ ಔಟ್: ತಮನ್ನಾ ಇನ್?ರಜನಿಕಾಂತ್ 'ಜೈಲರ್' ಸಿನಿಮಾದಿಂದ ಐಶ್ವರ್ಯಾ ರೈ ಔಟ್: ತಮನ್ನಾ ಇನ್?

  ಇಬ್ಬರೂ ಒಟ್ಟಿಗೆ ನೋಡಿದ್ದು ಕನಸೆಂಬಂತಿದೆ

  ಇಬ್ಬರೂ ಒಟ್ಟಿಗೆ ನೋಡಿದ್ದು ಕನಸೆಂಬಂತಿದೆ

  'ಪೊನ್ನಿಯನ್ ಸೆಲ್ವನ್' ಟ್ರೈಲರ್ ಲಾಂಚ್ ವೇಳೆ ಐಶ್ವರ್ಯಾ ರೈ ರಜನಿಕಾಂತ್, ಕಮಲ್ ಹಾಸನ್ ಹಾಗೂ ಮನಿರತ್ನಂರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. " ಮಣಿರತ್ನಂ ನನ್ನ ಗುರುಗಳು. ಅವರಿಂದ ಸಿನಿಮಾ ಬಗ್ಗೆ ಕಮಿಟ್ಮೆಂಟ್, ಡೆಡಿಕೇಷನ್ ಮತ್ತು ಹೇಗೆ ಫೋಕಸ್ ಮಾಡಬೇಕು ಅನ್ನೋದನ್ನು ಕಲಿತಿದ್ದೇನೆ. ರಜನಿ ಮತ್ತು ಕಮಲ್ ಸರ್ ನಿಮ್ಮನ್ನು ಒಟ್ಟಿಗೆ ನೋಡಿದ್ದು ಕನಸು ಎಂಬಂತಿದೆ. ನಾವು ನಿಮ್ಮ ಮುಂದೆ ವಿದ್ಯಾರ್ಥಿಗಳಿದ್ದಂತೆ. ನಾವು ನಿಮ್ಮ ಅಭಿಮಾನಿಗಳು. ಯಾವಾಗಲೂ ಈ ಅಭಿಮಾನ ಇದ್ದೇ ಇರುತ್ತೆ." ಎಂದಿದ್ದಾರೆ ಐಶ್ವರ್ಯ ರೈ.

  ದ್ವಿ ಪಾತ್ರದಲ್ಲಿ ಐಶ್ವರ್ಯಾ ರೈ

  ದ್ವಿ ಪಾತ್ರದಲ್ಲಿ ಐಶ್ವರ್ಯಾ ರೈ

  ಬಹು ದೊಡ್ಡ ಅಭಿಮಾನಿಗಳ ಮಧ್ಯೆ 'ಪೊನ್ನಿಯನ್ ಸೆಲ್ವನ್' ಸಿನಿಮಾ ಟ್ರೈಲರ್ ಲಾಂಚ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಒಂದು ಪಳುವೂರಿನ ರಾಣಿ ನಂದಿನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಮಂದಾಕಿನಿ ದೇವಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಪಾತ್ರಗಳಲ್ಲಿ ರಜನಿಕಾಂತ್ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

  ಐಶ್ವರ್ಯಾ ರೈ ಪಡೆದ ಮೊದಲ ಸಂಬಳ ಎಷ್ಟು?ಐಶ್ವರ್ಯಾ ರೈ ಪಡೆದ ಮೊದಲ ಸಂಬಳ ಎಷ್ಟು?

  English summary
  Aishwarya Rai Bachchan Touches Rajinikanth Feet At Ponniyin Selvan Part 1 Trailer Launch, Know More.
  Wednesday, September 7, 2022, 14:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X