ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯ ರೈ ಪಕ್ಕಾ: ಹೊಸ ವರ್ಷಕ್ಕೆ ಅಚ್ಚರಿ
Recommended Video
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಲಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ಆರಂಭಕ್ಕೂ ಮುಂಚೆಯೇ ಭಾರಿ ಸದ್ದು ಮಾಡ್ತಿದೆ. ಭಾರತೀಯ ಸಿನಿಮಾರಂಗದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದೀಗ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ನಟಿಸುವುದು ಪಕ್ಕಾ ಆಗಿದೆ. ಇತ್ತೀಚಿಗಷ್ಟೆ ಪೊನ್ನಿಯನ್ ಸೆಲ್ವನ್ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಈ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗುತ್ತಿದೆಯಂತೆ.
ಐಶ್ವರ್ಯ ರೈ ಕೂಡ ಈ ತಿಂಗಳ ಅಂತ್ಯಕ್ಕೆ ಚಿತ್ರತಂಡ ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಐಶ್ವರ್ಯ ರೈ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂದಿನಿ ಹಾಗೂ ಆಕೆಯೆ ತಾಯಿ ರಾಣಿ ಮಂದಕಿನಿ ಪಾತ್ರದಲ್ಲಿ ಐಶ್ ಬಣ್ಣ ಹಚ್ಚುತ್ತಿದ್ದಾರೆ.

ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಐಶ್ವರ್ಯ ರೈ ಸಂತಸ ಹಂಚಿಕೊಂಡಿದ್ದು ''ಮಣಿರತ್ನಂ ಅವರ ಜೊತೆಯಲ್ಲಿ ಕೆಲಸ ಮಾಡುವುದು ನನಗೆ ಖುಷಿ. ಅವರು ನನ್ನ ಗುರುಗಳು. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುವುದಕ್ಕೆ ಕಾಯುತ್ತಿದ್ದೇನೆ'' ಎಂದಿದ್ದಾರೆ.
ಇನ್ನುಳಿದಂತೆ, ತಮಿಳು ನಟ ವಿಕ್ರಮ್, ಕಾರ್ತಿ, ತ್ರಿಷಾ, ಕೀರ್ತಿ ಸುರೇಶ್, ಜಯಂ ರವಿ, ಐಶ್ವರ್ಯ ರಾಜೇಶ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.
ಪೊನ್ನಿಯನ್ ಸೆಲ್ವನ್ ಚಿತ್ರದ ಶೀರ್ಷಿಕೆ ಪೋಸ್ಟರ್ ಶೇರ್ ಮಾಡಿರುವ ತಮಿಳು ನಟ ಕಾರ್ತಿ ಚಿತ್ರಕ್ಕೆ ಶುಭಕೋರಿದ್ದಾರೆ. ಎ ಆರ್ ರೆಹಮಾನ ಸಂಗೀತವಿದೆ. ರವಿ ವರ್ಮನ್ ಛಾಯಾಗ್ರಹಣ ಈ ಚಿತ್ರದಲ್ಲಿದೆ.


Click it and Unblock the Notifications











