For Quick Alerts
  ALLOW NOTIFICATIONS  
  For Daily Alerts

  'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!

  |

  ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮಣಿರತ್ನಂ. ಇವರ ಸಿನಿಮಾ ಬರ್ತಿದೆ ಅಂದ್ರೆ, ಕಾದು ಕೂತು ಸಿನಿಮಾ ನೋಡುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಸದ್ಯ ಮಣಿರತ್ನಂ ನಿರ್ದೇಶಿಸಿದ ಬಹು ನಿರೀಕ್ಷಿತ ಚಿತ್ರ 'ಪೊನ್ನಿನ್ ಸೆಲ್ವನ್ 1' ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾ ಬಿಡುಗಡೆ ತಯಾರಿ ಕೂಡ ನಡೆಯುತ್ತಿದೆ.

  ದಕ್ಷಿಣ ಭಾರತದ ಐತಿಹಾಸಿಕ ಸಿನಿಮಾ 'ಪೊನ್ನಿ ಸೆಲ್ವನ್ ಮೊದಲ ಭಾಗದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ, ತ್ರಿಶಾ, ಪ್ರಕಾಶ್ ರಾಜ್, ಶರತ್‌ ಕುಮಾರ್, ಪ್ರಭು ಸೇರಿದಂತೆ ದಕ್ಷಿಣ ಭಾರತದ ಗಣ್ಯರೇ ಸೇರಿಕೊಂಡಿದ್ದಾರೆ.

  ರಜನಿಕಾಂತ್ 'ಜೈಲರ್' ಸಿನಿಮಾದಿಂದ ಐಶ್ವರ್ಯಾ ರೈ ಔಟ್: ತಮನ್ನಾ ಇನ್?ರಜನಿಕಾಂತ್ 'ಜೈಲರ್' ಸಿನಿಮಾದಿಂದ ಐಶ್ವರ್ಯಾ ರೈ ಔಟ್: ತಮನ್ನಾ ಇನ್?

  'ಪೊನ್ನಿಯ ಸೆಲ್ವನ್' ಸಿನಿಮಾದಲ್ಲಿ ಸುಮಾರು 50 ಪಾತ್ರಗಳಿವೆ ಎನ್ನಲಾಗಿದೆ. ಇವುಗಳಲ್ಲಿ 15 ಮಂದಿ ದಿಗ್ಗಜರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ಅವರ ಈ ಮಹತ್ವಾಕಾಂಕ್ಷೆ ಸಿನಿಮಾ ಬಿಡುಗಡೆಗೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಭರ್ಜರಿ ಪ್ರಚಾರ ನಡೆಯುತ್ತಿದೆ.

  ಹಾಡುಗಳು ಸಿಂಪ್ಲಿ ಸೂಪರ್

  ಹಾಡುಗಳು ಸಿಂಪ್ಲಿ ಸೂಪರ್

  ಪೊನ್ನಿಯನ್ ಸೆಲ್ವನ್ ಸಿನಿಮಾದ ಎರಡು ಹಾಡುಗಳನ್ನು ಬಿಡುಗಡೆಯಾಗಿದ್ದು, ಸಿನಿಮಾ ಪ್ರಿಯರು ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಆ ಎರಡೂ ಹಾಡುಗಳ ಮೇಕಿಂಗ್ ವಿಡಿಯೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಜನರು ಸೂಪರ್ ಅಂತಿದ್ದಾರೆ.

  ಮೇಕಿಂಗ್ ಪೋಟೊ ಲೀಕ್

  ಮೇಕಿಂಗ್ ಪೋಟೊ ಲೀಕ್

  ಒಂದ್ಕಡೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ 'ಪೊನ್ನಿಯ ಸೆಲ್ವನ್' ಸಿನಿಮಾ ಮೇಕಿಂಗ್ ಫೋಟೊಗಳು ಲೀಕ್ ಆಗಿವೆ. ಸಿನಿಮಾ ಸೆಟ್‌ನಲ್ಲಿರುವ ಐಶ್ವರ್ಯಾ ರೈ ಫೋಟೊ ಲೀಕ್ ಆಗಿದ್ದು, ಚಿತ್ರತಂಡಕ್ಕೆ ಶಾಕ್ ಆಗಿದೆ ಎನ್ನಲಾಗಿದೆ. ಇದೇ ಸಿನಿಮಾದ ಶೂಟಿಂಗ್ ನಡೆಯುವ ವೇಳೆ ಐಶ್ವರ್ಯಾ ರೈ ಕೆಂಪು ಡ್ರೆಸ್‌ನಲ್ಲಿದ್ರು. ಈ ಫೋಟೊ ಲೀಕ್ ಆಗುತ್ತಿದ್ದಂತೆ ಸೆಟ್ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಆ ಬಳಿಕ ಫೋಟೊಗಳು ಲೀಕ್ ಆಗಿರಲಿಲ್ಲ.

  ಐಶ್ ಫೋಟೊ ಮತ್ತೆ ಲೀಕ್

  ಐಶ್ ಫೋಟೊ ಮತ್ತೆ ಲೀಕ್

  'ಪೊನ್ನಿಯನ್ ಸೆಲ್ವನ್' ಸಿನಿಮಾ ಇನ್ನೇನು ಬಿಡುಗಡೆಗೆ ರೆಡಿಯಾಗುತ್ತಿರುವಾಗಲೇ ಮತ್ತೆ ಐಶ್ವರ್ಯಾ ರೈ ಸೆಟ್ಟಿನಲ್ಲಿರುವ ಫೋಟೊ ಲೀಕ್ ಆಗಿದೆ. ಐಶ್ವರ್ಯಾ ರೈ ಅಷ್ಟೇ ಅಲ್ಲ. ಕಾರ್ತಿ, ವಿಕ್ರಮ್ ಮತ್ತು ಜಯರಾಮ್ ಫೋಟೊಗಳು ಕೂಡ ಲೀಕ್ ಆಗಿದೆ. ಈ ಫೋಟೊಗಳನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 'ಪೊನ್ನಿಯ ಸೆಲ್ವನ್' ಚಿತ್ರದ ಛಾಯಾಗ್ರಾಹಕ ರವಿ ವರ್ಮಾ ಜೊತೆ ಟಾಪ್ ನಟರ ಫೋಟೊ ಸದ್ಯಕ್ಕೆ ಸದ್ದು ಮಾಡುತ್ತಿದೆ.

  ರಾಣಿ ಲುಕ್ ಬ್ಯೂಟಿಫುಲ್

  ರಾಣಿ ಲುಕ್ ಬ್ಯೂಟಿಫುಲ್

  ಈ ಫೋಟೊದಲ್ಲಿ ಐಶ್ವರ್ಯಾ ರೈ, ನಂದಿನಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದು, ಸಾಕಷ್ಟು ಒಡವೆಗಳನ್ನು ಧರಿಸಿ ಪಕ್ಕಾ ರಾಣಿಯಂತೆಯೇ ಕಾಣಿಸಿಕೊಂಡಿದ್ದಾರೆ. ಈ ಪೋಟೊ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  ಐಶ್ವರ್ಯಾ ರೈ ಎರಡು ರೋಲ್

  ಐಶ್ವರ್ಯಾ ರೈ ಎರಡು ರೋಲ್

  'ಪೊನ್ನಿಯ ಸೆಲ್ವನ್' ಸಿನಿಮಾದಲ್ಲಿ ಐಶ್ವರ್ಯ ರೈ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿದೆ. ನಂದಿನಿ ದೇವಿ ಮತ್ತು ಮಂದಾಕಿನಿ ದೇವಿ ಅವತಾರವೆತ್ತಿದ್ದಾರೆ. ಇನ್ನೊಂದು ಕಡೆ ಐಶ್ವರ್ಯಾ ರೈ ವಿಲನ್ ಶೇಡ್‌ನಲ್ಲಿರುತ್ತಾರೆ ಎನ್ನಲಾಗಿದೆ. ಈ ಪಾತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  English summary
  Aishwarya Rai Karthi Vikram Of Ponniyin Selvan Photo Leaked, Know More.
  Friday, August 26, 2022, 9:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X