For Quick Alerts
  ALLOW NOTIFICATIONS  
  For Daily Alerts

  'ಅಂಧಾದುನ್' ತಮಿಳು ರೀಮೇಕ್‌ನಲ್ಲಿ ಐಶ್ವರ್ಯ ರೈ ನಟನೆ!

  |

  2018ರ ಹಿಂದಿಯ ಸೂಪರ್ ಹಿಟ್ ಚಿತ್ರ ಅಂಧಾದುನ್ ರೀಮೇಕ್ ಮಾಡಲು ಸೌತ್ ಇಂಡಸ್ಟ್ರಿಯಲ್ಲಿ ತಯಾರಿ ಜೋರಾಗಿ ನಡೆದಿದೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ರೀಮೇಕ್‌ಗಾಗಿ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಭಾರಿ ಕುತೂಹಲ ಮೂಡಿಸಿದೆ.

  ಅಂಧಾದುನ್ ತೆಲುಗು ರೀಮೇಕ್‌ನಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಈಗ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ನಟ ಪ್ರಶಾಂತ್ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಜೊತೆಗೆ ಐಶ್ವರ್ಯ ರೈ ಅವರನ್ನು ಕರೆತರಲು ನಿರ್ಮಾಪಕರು ಮುಂದಾಗಿದ್ದಾರೆ. ಮುಂದೆ ಓದಿ...

  ಮಾತುಕತೆ ಆಗಿದೆ, ಖಚಿತ ಆಗಿಲ್ಲ

  ಮಾತುಕತೆ ಆಗಿದೆ, ಖಚಿತ ಆಗಿಲ್ಲ

  ಅಂಧಾದುನ್ ಚಿತ್ರದಲ್ಲಿ ಟಬು ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಐಶ್ವರ್ಯ ರೈ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ನಿರ್ಧರಿಸಿರುವ ನಿರ್ಮಾಪಕ ಹಾಗೂ ಹಿರಿಯ ನಟ ತ್ಯಾಗರಾಜನ್ ಐಶ್ ಜೊತೆ ಮಾತುಕತೆ ಸಹ ಮಾಡಿದ್ದಾರೆ. ಆದ್ರೆ, ಐಶ್ವರ್ಯ ಕಡೆಯಿಂದ ಪಕ್ಕಾ ಆಗಿಲ್ಲ. ಇನ್ನು ನಿರ್ಧಾರ ತಿಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಅಂಧಾಧುನ್ ತೆಲುಗು ರೀಮೇಕ್‌ನಲ್ಲಿ ಕನ್ನಡತಿ ನಾಯಕಿ: ನಿತಿನ್ ಜತೆ ರೊಮ್ಯಾನ್ಸ್ ಮಾಡುವ ನಟಿ ಯಾರು?ಅಂಧಾಧುನ್ ತೆಲುಗು ರೀಮೇಕ್‌ನಲ್ಲಿ ಕನ್ನಡತಿ ನಾಯಕಿ: ನಿತಿನ್ ಜತೆ ರೊಮ್ಯಾನ್ಸ್ ಮಾಡುವ ನಟಿ ಯಾರು?

  ಆಯುಷ್ಮಾನ್ ಪಾತ್ರದಲ್ಲಿ ಪ್ರಶಾಂತ್

  ಆಯುಷ್ಮಾನ್ ಪಾತ್ರದಲ್ಲಿ ಪ್ರಶಾಂತ್

  ಅಂಧಾದುನ್ ಚಿತ್ರದಲ್ಲಿ ಆಯುಷ್ಮಾನ್ ಖುರಾನ್ ನಾಯಕನಾಗಿ ನಟಿಸಿದ್ದರು. ಈ ಪಾತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. ತಮಿಳಿನಲ್ಲಿ ಈ ಪಾತ್ರವನ್ನು ಖ್ಯಾತ ನಟ ಪ್ರಶಾಂತ್ ಮಾಡಲಿದ್ದಾರೆ. ಪ್ರಶಾಂತ್ ಅವರ ತಂದೆ ತ್ಯಾಗರಾಜನ್ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.

  ನಿರ್ದೇಶಕ ಬದಲಾದ್ರು!

  ನಿರ್ದೇಶಕ ಬದಲಾದ್ರು!

  ತಮಿಳಿನ ಅಂಧಾದುನ್ ಚಿತ್ರವನ್ನು ಮೋಹನ್ ರಾಜ್ ನಿರ್ದೇಶಿಸಬೇಕಿತ್ತು. ಮೋಹನ್ ರಾಜ್ ಜಾಗಕ್ಕೆ ಈಗ ಹೊಸ ನಿರ್ದೇಶಕ ಜೆಜೆ ಫ್ರೆಡ್ರಿಕ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಜ್ಯೋತಿಕಾ ನಟನೆಯ 'ಪೊನ್‌ ಮಗಳ್ ವಂದಾಲ್' ಚಿತ್ರವನ್ನು ಜೆಜೆ ಫ್ರೆಡ್ರಿಕ್ ನಿರ್ದೇಶಿಸಿದ್ದರು.

  ಬಾಲಿವುಡ್ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್ಬಾಲಿವುಡ್ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್

  22 ವರ್ಷದ ಬಳಿಕ ಪ್ರಶಾಂತ್-ಐಶ್ವರ್ಯ

  22 ವರ್ಷದ ಬಳಿಕ ಪ್ರಶಾಂತ್-ಐಶ್ವರ್ಯ

  ಒಂದು ವೇಳೆ ಐಶ್ವರ್ಯ ರೈ ಈ ಸಿನಿಮಾ ಒಪ್ಪಿಕೊಂಡರೆ, ನಟ ಪ್ರಶಾಂತ್ ಜೊತೆ 22 ವರ್ಷದ ಬಳಿಕ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿಂದೆ 1998ರಲ್ಲಿ ಬಿಡುಗಡೆಯಾಗಿದ್ದ ಜೀನ್ಸ್ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

  ತೆಲುಗಿನಲ್ಲಿ ಅಂಧಾದುನ್ ರೀಮೇಕ್

  ತೆಲುಗಿನಲ್ಲಿ ಅಂಧಾದುನ್ ರೀಮೇಕ್

  ತೆಲುಗಿನಲ್ಲಿ ಅಂಧಾದುನ್ ಸಿನಿಮಾ ರೀಮೇಕ್ ಆಗುತ್ತಿದೆ. ಆಯುಷ್ಮಾನ್ ಖುರಾನ್ ಪಾತ್ರದಲ್ಲಿ ನಿತೀನ್ ನಟಿಸಲಿದ್ದಾರೆ. ಆದ್ರೆ, ನಾಯಕಿಯ ವಿಚಾರದಲ್ಲಿ ಬಹಳ ಹೆಸರುಗಳು ಚರ್ಚೆಯಾಗುತ್ತಿದೆ. ರಮ್ಯಾಕೃಷ್ಣ, ಕೀರ್ತಿ ಸುರೇಶ್, ನಭಾ ನಟೇಶ್ ಹಾಗೂ ತಮನ್ನಾ ಹೆಸರುಗಳು ಬಂದು ಹೋಗಿವೆ. ಆದ್ರೆ, ಅಧಿಕೃತವಾಗಿ ಯಾರು ಪಕ್ಕಾ ಆಗಿಲ್ಲ.

  English summary
  Bollywood actress Aishwarya Rai bachchan has been approached to play Tabu's role andhadhun Tamil remake. But, no official announcement yet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X