For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಜೊತೆ ಮಿಂಚಿದ ಬಾಲನಟ, ಯಾರು ಈ ಹುಡುಗ?

  |

  ಮಣಿರತ್ನಂ ಸಿನಿಮಾದ ಶೂಟಿಂಗ್‌ಗಾಗಿ ದಕ್ಷಿಣ ಭಾರತಕ್ಕೆ ಬಂದಿರುವ ನಟಿ ಐಶ್ವರ್ಯ ರೈ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 'ಪೊನ್ನಿಯನ್ ಸೆಲ್ವನ್' ಚಿತ್ರೀಕರಣಕ್ಕಾಗಿ ಪಾಂಡಿಚೆರಿಗೆ ಆಗಮಿಸಿದ್ದ ಐಶ್ ಕೊನೆಯ ಹಂತದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಐಶ್ವರ್ಯ ಎಂಟ್ರಿಯಿಂದ ಈ ಚಿತ್ರ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದೆ.

  ಇದೀಗ, ಐಶ್ವರ್ಯ ರೈ ಬಚ್ಚನ್ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲನಟನೊಬ್ಬನ ಜೊತೆ ಐಶ್ವರ್ಯ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ, ಈ ಬಾಲಕ ಯಾರು ಎನ್ನುವ ಕುತೂಹಲ ಸಹ ಸಹಜವಾಗಿ ಕಾಡ್ತಿದೆ. ಈತ ತಮಿಳು ನಟ ವಿಜಯ್ ಸೇತುಪತಿ ಅವರ ಆನ್‌ ಸ್ಕ್ರೀನ್ ಮಗ ಮಾಸ್ಟರ್ ರಾಘವನ್. ಬಹಳಷ್ಟು ಜನ ಈತ ಸೇತುಪತಿ ಅವರ ನಿಜವಾದ ಮಗ ಎಂದೇ ನಂಬಿದ್ದಾರೆ. ಮುಂದೆ ಓದಿ...

  ಯಾರು ಈ ಮಾಸ್ಟರ್ ರಾಘವನ್?

  ಯಾರು ಈ ಮಾಸ್ಟರ್ ರಾಘವನ್?

  ಐಶ್ವರ್ಯ ರೈ ಬಚ್ಚನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಈ ಹುಡುಗ ಮಾಸ್ಟರ್ ರಾಘವನ್ ಮುರುಗನ್. ಐಶ್ವರ್ಯ ನಟಿಸುತ್ತಿರುವ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ರಾಘವನ್ ನಟಿಸುತ್ತಿದ್ದು, ಶೂಟಿಂಗ್ ವೇಳೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ''ವಿರಾಮದ ನಡುವೆ ಮೇಡಂ, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ'' ಎಂದು ಬರೆದುಕೊಂಡಿದ್ದಾರೆ.

  'ಮರಳಿ ಬಂದಿದೆ ಸುವರ್ಣ ಯುಗ': ಮಣಿರತ್ನಂ ಚಿತ್ರದ ಬಗ್ಗೆ ಐಶ್ವರ್ಯ ರೈ ಸಂತಸ'ಮರಳಿ ಬಂದಿದೆ ಸುವರ್ಣ ಯುಗ': ಮಣಿರತ್ನಂ ಚಿತ್ರದ ಬಗ್ಗೆ ಐಶ್ವರ್ಯ ರೈ ಸಂತಸ

  ಹಲವು ಚಿತ್ರಗಳಲ್ಲಿ ನಟನೆ

  ಹಲವು ಚಿತ್ರಗಳಲ್ಲಿ ನಟನೆ

  ಮಾಸ್ಟರ್ ರಾಘವನ್ ಮುರುಗನ್ ಈ ಮುಂಚೆಯೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಸೇತುಪತಿ ಜೊತೆ 'ಸೇತುಪತಿ' ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲಿಂದ, ಈತ ಸೇತುಪತಿ ಮಗ ಅಂತಾನೇ ಬಹಳಷ್ಟು ಜನ ನಂಬಿದ್ದರು. ಆದರೆ, ತೆರೆಮೇಲೆ ಸೇತುಪತಿಯ ಮಗನಾಗಿ ನಟಿಸಿರುವುದು ಅಷ್ಟೇ. ಸೇತುಪತಿಯ ಮಗನ ಹೆಸರು ಸೂರ್ಯ. ಈಗ ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲೂ ಮಾಸ್ಟರ್ ರಾಘವನ್ ವಿಶೇಷ ಪಾತ್ರ ನಿಭಾಯಿಸುತ್ತಿದ್ದಾರೆ.

  ಶರತ್ ಕುಮಾರ್ ಕುಟುಂಬದ ಜೊತೆ ಐಶ್ ಫ್ಯಾಮಿಲಿ

  ಶರತ್ ಕುಮಾರ್ ಕುಟುಂಬದ ಜೊತೆ ಐಶ್ ಫ್ಯಾಮಿಲಿ

  ಇತ್ತೀಚಿಗಷ್ಟೆ ತಮಿಳು ತಾರಾದಂಪತಿ ಶರತ್ ಕುಮಾರ್-ರಾಧಿಕಾ ಶರತ್ ಕುಮಾರ್ ಮನೆಗೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇನ್ ಬಚ್ಚನ್ ಭೇಟಿ ನೀಡಿದ್ದರು. ಈ ವೇಳೆ ಆರಾಧ್ಯ ಬಚ್ಚನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಸಹ ಇದ್ದರು. ಈ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

  ಪೊನ್ನಿಯನ್ ಸೆಲ್ವನ್ ಸಿನಿಮಾ ಕುರಿತು

  ಪೊನ್ನಿಯನ್ ಸೆಲ್ವನ್ ಸಿನಿಮಾ ಕುರಿತು

  ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ತ್ರಿಷಾ, ಐಶ್ವರ್ಯ ರೈ ಬಚ್ಚನ್, ಅಮಿತಾಭ್ ಬಚ್ಚನ್, ವಿಕ್ರಂ, ವಿಕ್ರಂ ಪ್ರಭು, ಜಯ ರವಿ, ಐಶ್ವರ್ಯ ಲಕ್ಷ್ಮಿ, ಕಿಶೋರ್, ಸಾರಾ ಅರ್ಜುನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿದಿದ್ದು, ಇದು ಕೊನೆಯ ಶೆಡ್ಯೂಲ್ ಎನ್ನಲಾಗಿದೆ. ಅಂದ್ಹಾಗೆ, ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದು, ಮೊದಲ ಭಾಗ 2022ರ ಸಮ್ಮರ್‌ನಲ್ಲಿ ತೆರೆಗೆ ಬರಬಹುದು. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ.

  English summary
  Bollywood actress Aishwarya Rai bachchan poses with Master Raaghavan in Ponniyin Selvan Shooting Set.
  Thursday, July 29, 2021, 12:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X