For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈ 'ಪೊನ್ನಿಯನ್ ಸೆಲ್ವನ್' ಲುಕ್ ಲೀಕ್; ರಾಣಿ ಎನ್ನುತ್ತಿದ್ದಾರೆ ಅಭಿಮಾನಿಗಳು

  |

  ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸದ್ಯ ತಮಿಳು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ತಮಿಳು ಸಿನಿಮಾರಂಗಕ್ಕೆ ಮರಳಿರುವ ಐಶ್ವರ್ಯಾ ರೈ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಐಶ್ವರ್ಯಾ ಬಹುತೇಕ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ.

  ದೊಡ್ಡ ತಾರಾಬಳಗ ಇರುವ ಸಿನಿಮಾದಲ್ಲಿ ಐಶ್ವರ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯ ಮಧ್ಯ ಪ್ರದೇಶದ ಓರ್ಚಾದಲ್ಲಿ ನಡೆಯುತ್ತಿದೆ. ಕೊರೊನಾ ಕಾರಣದಿಂದ ಚಿತ್ರೀಕರಣ ತಡವಾಗುತ್ತಲೇ ಬಂದಿದೆ. ಇದೀಗ ಚುರುಕಾಗಿ ಚಿತ್ರೀಕರಣ ಮಾಡುತ್ತಿದೆ ಸಿನಿಮಾತಂಡ. ಇತ್ತೀಚಿಗಷ್ಟೆ ಪಾಂಡಿಚೆರಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾತಂಡ ಇದೀಗ ಉತ್ತರ ಭಾರತದ ಕಡೆ ಹೊರಟಿದೆ.

  ಕುಟುಂಬದ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್ ದಂಪತಿ; ಫೋಟೋ ವೈರಲ್ಕುಟುಂಬದ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್ ದಂಪತಿ; ಫೋಟೋ ವೈರಲ್

  ಅಂದಹಾಗೆ ಬಹುನಿರೀಕ್ಷೆಯ, ಬಹು ತಾರಾಗಣವಿರುವ ಚಿತ್ರದಲ್ಲಿ ಐಶ್ವರ್ಯಾ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾದ ಐಶ್ವರ್ಯಾ ಲುಕ್ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ಐಶ್ವರ್ಯಾ ಎರಡು ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಂದಿನಿ ಮತ್ತು ಮಂದಾಕಿನಿ ದೇವಿ ಎನ್ನುವ ಎರಡು ಪಾತ್ರಗಳಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಓದಿ..

  ಐಶ್ವರ್ಯಾ ರೈ ರಾಣಿ ಲುಕ್

  ಐಶ್ವರ್ಯಾ ರೈ ರಾಣಿ ಲುಕ್

  ಸದ್ಯ ಲೀಕ್ ಆಗಿರುವ ಲುಕ್ ನಲ್ಲಿ ಐಶ್ವರ್ಯಾ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಐಶ್ ಭಾರಿ ಆಭರಣ ಧರಿಸಿರುವುದನ್ನು ಸೋರಿಯಾಗಿರುವ ಫೋಟೋದಲ್ಲಿ ಕಾಣಬಹುದು. ಈ ಲುಕ್ ನೋಡಿ ನೆಟ್ಟಿಗರು ರಾಣಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಲುಕ್ ನೋಡುತ್ತಿದ್ದರೆ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಲುಕ್ ಈಗ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  ಪಾಂಡಿಚೆರಿಯಲ್ಲಿದ್ದ ಐಶ್ವರ್ಯಾ ಕುಟುಂಬ

  ಪಾಂಡಿಚೆರಿಯಲ್ಲಿದ್ದ ಐಶ್ವರ್ಯಾ ಕುಟುಂಬ

  ಇತ್ತೀಚಿಗಷ್ಟೆ ಐಶ್ವರ್ಯಾ ರೈ ಚಿತ್ರೀಕರಣಕ್ಕೆಂದು ಕುಟುಂಬದ ಜೊತೆ ಪಾಂಡಿಚೆರಿಯಲ್ಲಿ ಬೀಡುಬಿಟ್ಟಿದ್ದರು. ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯಾ ಜೊತೆ ಕೆಲ ದಿನಗಳು ಪಾಂಡಿಚೆರಿಯಲ್ಲಿದ್ದರು. ಈ ಸಮಯದಲ್ಲಿ ಐಶ್ವರ್ಯಾ, ಪತಿ ಅಭಿಷೇಕ್ ಜೊತೆ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಕುಟುಂಬವನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಐಶ್ವರ್ಯಾ ಭೇಟಿಯ ಫೋಟೋವನ್ನು ಶರತ್ ಕುಮಾರ್ ಮಗಳು ವರಲಕ್ಷ್ಮಿ ಶರತ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದರು.

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಅಂದಹಾಗೆ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ಜೊತೆಗೆ ನಟಿ ತ್ರಿಷಾ, ಚಿಯಾನ್ ವಿಕ್ರಮ್, ಕಾರ್ತಿ, ಪ್ರಕಾಶ್ ರಾಜ್, ಜಯಮ್, ಪ್ರಭು ಸೇರಿದಂತೆ ದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ತಮಿಳು ಸಿನಿಮಾರಂಗದಿಂದ ಬಣ್ಣ ಲೋಕಕ್ಕೆ ಕಾಲಿಟ್ಟ ಐಶ್ವರ್ಯಾ

  ತಮಿಳು ಸಿನಿಮಾರಂಗದಿಂದ ಬಣ್ಣ ಲೋಕಕ್ಕೆ ಕಾಲಿಟ್ಟ ಐಶ್ವರ್ಯಾ

  ಐಶ್ವರ್ಯಾ ರೈ ಸಿನಿಮಾ ಲೋಕದ ಪಯಣ ಪ್ರಾರಂಭ ಮಾಡಿದ್ದೇ ತಮಿಳು ಸಿನಿಮಾರಂಗದಿಂದ. ಮಣಿರತ್ನಂ ನಿರ್ದೇಶನದ ಇರುವರ್ ಸಿನಿಮಾ ಮೂಲಕ ಐಶ್ವರ್ಯಾ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ಬಳಿಕ ಐಶ್ವರ್ಯಾ ಬಾಲಿವುಡ್ ಕಡೆ ಮುಖ ಮಾಡಿದರು. ಬಳಿಕ ಅನೇಕ ವರ್ಷಗಳ ನಂತರ ಐಶ್ವರ್ಯಾ ಮತ್ತೆ ತಮಿಳು ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ರೊಬೋಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

  ಫನ್ನೆ ಖಾನ್ ಕೊನೆಯ ಸಿನಿಮಾ

  ಫನ್ನೆ ಖಾನ್ ಕೊನೆಯ ಸಿನಿಮಾ

  ರೊಬೊಟ್ ಸಿನಿಮಾ ಬಳಿಕ ಇದೀಗ ಮಣಿರತ್ನಂ ಸಿನಿಮಾ ಮೂಲಕ ಮತ್ತೆ ಸೌತ್ ಕಡೆ ಮುಖ ಮಾಡಿದ್ದಾರೆ. ಇದೀಗ ಮತ್ತೆ ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ನಟಿಸುತ್ತಿರುವುದು ವಿಶೇಷವಾಗಿದೆ. ಇನ್ನು ಐಶ್ವರ್ಯಾ ರೈ ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದ ಫನ್ನೆ ಖಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 3 ವರ್ಷದ ಬಳಿಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.

  English summary
  Actress Aishwarya Rai's look from Ponniyin Selvan movie leaked, she look like a Queen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X