ಅಭಿಮಾನಿಗಳಿಗೂ ನಿರಾಸೆ.. ಸೂಪರ್ ಸ್ಟಾರ್ ರಜನಿಕಾಂತ್‌ಗೂ ನೋವು..!

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ವಿಚಾರ ಅಂತಿಮ ಹಂತ ತಲುಪಿದೆ. ಮುಂದಿನ ವಾರವೇ ಇಬ್ಬರಿಗೂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಧನುಷ್ ಹಾಗೂ ಐಶ್ವರ್ಯ ಮತ್ತೆ ಒಂದಾಗುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಇತ್ತೀಚೆಗೆ ವಿಚ್ಛೇದನ ಅರ್ಜಿ ವಿಚಾರಣೆಗೆ ಇಬ್ಬರೂ ಹಿಂದೇಟು ಹಾಕಿದ್ದರು. ಹಾಗಾಗಿ ವಿಚಾರಣೆ ಮುಂದುವರೆಸಲಾಗಿತ್ತು. ಇಬ್ಬರೂ ಸಮಾಲೋಚಿಸಿ ಮತ್ತೆ ಒಟ್ಟಿಗೆ ಇರಲು ತೀರ್ಮಾನಿಸಿದ್ದಾರೆ. ಅದಕ್ಕೆ ಕೋರ್ಟ್‌ಗೆ ಬಂದಿಲ್ಲ ಎನ್ನುವ ಊಹಾಪೋಹ ಶುರುವಾಗಿತ್ತು.

Aishwarya Rajinikanth and Dhanush appeared in Chennai Family Court for divorce

ನಿನ್ನೆ(ನವೆಂಬರ್ 21) ಧನುಷ್ ಹಾಗೂ ಐಶ್ವರ್ಯ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಇಬ್ಬರೂ ಒಟ್ಟಿಗೆ ಬದುಕಲು ಇಷ್ಟವಿಲ್ಲ, ಹಾಗಾಗಿ ವಿಚ್ಚೇದನ ಮಂಜೂರು ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿರುವುದಾಗಿ ವರದಿಯಾಗಿದೆ. 20 ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ 2 ವರ್ಷದ ಹಿಂದೆ ದೂರಾಗಲು ತೀರ್ಮಾನಿಸಿರುವುದಾಗಿ ಘೋಷಿಸಿದ್ದರು.

ಈ ಹಿಂದೆ ಎರಡು ಬಾರಿ ಕೋರ್ಟ್ ವಿಚಾರಣೆಗೆ ಧನುಷ್- ಐಶ್ವರ್ಯ ಹಾಜರ್ ಆಗಿರಲಿಲ್ಲ. ಇನ್ನು ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಚಿತ್ರವನ್ನು ಒಂದೇ ಚಿತ್ರಮಂದಿರದಲ್ಲಿ ಇಬ್ಬರೂ ವೀಕ್ಷಿಸಿದ್ದರು. ಇದನ್ನೆಲ್ಲಾ ನೋಡಿ ಮತ್ತೆ ಇಬ್ಬರೂ ಒಂದಾಗ್ತಾರಾ? ರಜನಿಕಾಂತ್ ಇಬ್ಬರನ್ನು ಒಪ್ಪಿಸುತ್ತಾರಾ? ಎನ್ನುವ ಚರ್ಚೆ ನಡೆದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನುವುದು ಈಗ ಸಾಬೀತಾಗಿದೆ.

ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ಐಶ್ವರ್ಯ ಚೆನ್ನೈ ಫ್ಯಾಮಿಲಿ ಕೋರ್ಟ್‌ಗೆ ಬಂದರು. ಆದರೆ ಧನುಷ್ ಬರುವುದ ತಡವಾಗಿತ್ತು. ಹಾಗಾಗಿ 12 ಗಂಟೆಗೆ ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ತಮ್ಮ ಮನವಿಯನ್ನು ನ್ಯಾಯಾಧೀಶರ ಮುಂದಿಟ್ಟರು. ಬಳಿಕ ತೀರ್ಪನ್ನು ನವೆಂಬರ್ 27ಕ್ಕೆ ಮುಂದೂಡಲಾಯಿತು. ಈ ವಿಚಾರ ಅಭಿಮಾನಿಗಳಿಗೆ ಬೇಸರ ತಂದಿದೆ.

ಮುಂದಿನ ವಾರ ಅಧಿಕೃತವಾಗಿ ಧನುಷ್- ಐಶ್ವರ್ಯಗೆ ಕೋರ್ಟ್ ವಿಚ್ಛೇದನ ಮಂಜೂರು ಮಾಡಬಹುದು ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್‌ಗೆ ತಮ್ಮ ಇಬ್ಬರೂ ಹೆಣ್ಣು ಮಕ್ಕಳ ಜೀವನದಲ್ಲಿ ಪದೇ ಪದೆ ಇಂತಹ ಸಂಕಷ್ಟ ಎದುರಾಗುತ್ತಿರುವುದು ಬಹಳ ನೋವು ತಂದಿದೆ. ಅದೇ ಕಾರಣಕ್ಕೆ ಇಬ್ಬರಿಗೂ ಈ ಬಗ್ಗೆ ತಿಳಿ ಹೇಳುವ ಸಾಧ್ಯತೆಯಿದೆ. ಇಬ್ಬರೂ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಎಂದು ಭಾವಿಸಲಾಗಿತ್ತು.

ರಜನಿಕಾಂತ್ ಕಿರಿಯ ಪುತ್ರಿ ಸೌಂದರ್ಯ ಕೂಡ ಮೊದಲ ಪತಿಗೆ ಡಿವೋರ್ಸ್ ನೀಡಿ ಬಳಿಕ ಮತ್ತೊಂದು ಮದುವೆ ಆಗಿದ್ದರು. ಪತಿ ಅಶ್ವಿನ್ ರಾಮ್‌ಕುಮಾರ್‌ ಅವರಿಂದ ಆೆ ದೂರಾದಾಗ ತಲೈವಾ ಬಹಳ ನೊಂದುಕೊಂಡಿದ್ದರು. ಇದೀಗ ಐಶ್ವರ್ಯ ವೈವಾಹಿಕ ಜೀವನ ಕೂಡ ಈ ರೀತಿ ಆಗುತ್ತಿರುವುದು ಮತ್ತಷ್ಟು ನೋವು ತಂದಿದೆ.

ಧನುಷ್ ನಟನೆ ಜೊತೆಗೆ ಚಿತ್ರ ನಿರ್ದೇಶಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮಿಳು ಮಾತ್ರವಲ್ಲದೇ ಹಿಂದಿ, ಇಂಗ್ಲೀಷ್ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಐಶ್ವರ್ಯ ಕೂಡ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವರ್ಷ ಆಕೆ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾ ರಿಲೀಸ್ ಆಗಿತ್ತು.

2022ರ ಜನವರಿ 7ರಂದು ಧನುಷ್ ಹಾಗೂ ಐಶ್ವರ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ವಿಚಾರವನ್ನು ಬಹಿರಂಗ ಪಡಿಸಿದ್ದರು. ದಂಪತಿಗೆ ಯಾತ್ರಾ ಹಾಗೂ ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. 2003ರಲ್ಲಿ ಧನುಷ್ 'ಕಾದಲ್ ಕೊಂಡೇನ್' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ನೋಡಿ ಅವರ ಮೇಲೆ ಐಶ್ವರ್ಯಗೆ ಲವ್ವಾಗಿತ್ತು.

ಸಿನಿಮಾ ನೋಡಿ ಬಂದ ಮರುದಿನ ಧನುಷ್ ಮನೆಗೆ ಐಶ್ವರ್ಯ ಹೂವಿನ ಬೊಕ್ಕೆ ಕಳುಹಿಸಿದ್ದರು. ಬಳಿಕ ಇಬ್ಬರ ನಡುವೆ ಮಾತುಕತೆ ಶುರುವಾಗಿತ್ತು. ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರೂ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ಮದುವೆ ಆಗಿದ್ದರು.

More from Filmibeat

English summary
Dhanush and Aishwarya Rajinikanth divorce case: The court will announce verdict on november 27.
Read more about: dhanush rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X