ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಚಿನ್ನಾಭರಣ ಕಳವು: ಮನೆಯ ಸಿಬ್ಬಂದಿ ಮೇಲೆ ಅನುಮಾನ

ನಟ ಧನುಷ್ ಮಾಜಿ ಪತ್ನಿ, ರಜನಿಕಾಂತ್ ಪುತ್ರಿ ಐಶ್ವರ್ಯ ಮನೆಯಲ್ಲಿ ಕಳ್ಳತನ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರಾಭರಣ ಕಳುವಾಗಿದ್ದು ಐಶ್ವರ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಚಿನ್ನ, ವಜ್ರಾಭರಣ ಕಳುವಾಗಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದು ಮನೆಯಲ್ಲಿ ಕೆಲಸ ಮಾಡುವ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ತೇನಾಂ ಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳತನವಾಗಿರುವ ಆಭರಣಗಳಲ್ಲಿ ಡೈಮಂಡ್ ಸೆಟ್, ಆಲಯ ಆಭರಣಗಳಲ್ಲಿ ಅನ್‌ಕಟ್ ಡೈಮಂಡ್ಸ್, ಪುರಾತನ ಚಿನ್ನದ ತುಂಡುಗಳು, ನವರತ್ನಂ ಸೆಟ್ಟು, ವಜ್ರಖಚಿತ 2 ನೆಕ್‌ಪೀಸ್‌ ಕಿವಿ ಓಲೆ, ಆರಮ್ ನೆಕ್ಲೆಸ್, ಚಿನ್ನದ ಬಳೆಗಳು ಸೇರಿ ಸುಮಾರು 60 ಸವರನ್ ಚಿನ್ನಾಭರರಣ ಇತ್ತು ಎಂದು ಐಶ್ವರ್ಯ ತಿಳಿಸಿದ್ದಾರೆ. ಇದರ ಮೌಲ್ಯ 3.6 ಲಕ್ಷ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಆದರೆ ಅದರ ನಿಜವಾದ ಮೌಲ್ಯ ಅದಕ್ಕಿಂತ ಹೆಚ್ಚು ಎನ್ನಲಾಗ್ತಿದೆ. 2019ರಲ್ಲಿ ನಡೆದ ಸಹೋದರಿ ಸೌಂದರ್ಯ ಮದುವೆ ಸಮಾರಂಭಕ್ಕೆ ಐಶ್ವರ್ಯ ಈ ಚಿನ್ನಾಭರಣ ಧರಿಸಿದ್ದಾಗಿ ಹೇಳಿದ್ದಾರೆ.

Aishwarya Rajinikanth Files Police Complaint After 60 Sovereigns of Jewels Get Stolen

ಸಹೋದರಿ ಮದುವೆಯ ನಂತರ ಆ ಚಿನ್ನಾಭರಣವನ್ನು ಹೊರಗೆ ತೆಗೆದಿರಲಿಲ್ಲ. ಅದನ್ನು ಲಾಕರ್‌ನಲ್ಲಿ ಭದ್ರವಾಗಿ ಇಟ್ಟಿದ್ದೆ. ಆದರೆ ಲಾಕರ್ ನನ್ನ ಅಧೀನದಲ್ಲಿದ್ದರೂ ಅದನ್ನು ಮೂರು ಕಡೆಗೆ ಬದಲಾಯಿಸಿದ್ದೆ. 2021ರವರೆಗೂ ಅದು ತಾನು ವಾಸಿಸುತ್ತಿದ್ದ ಸೇಂಟ್ ಮೇರಿಸ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಇತ್ತು. ನಂತರ ಸಿಐಟಿ ಕಾಲೋನಿಯಲ್ಲಿರುವ ಧನುಷ್ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಮತ್ತೆ ಸೇಂಟ್ ಮೇರಿಸ್ ರಸ್ತೆಯ ಅಪಾರ್ಟ್‌ಮೆಂಟ್‌ಗೆ ವಾಪಸ್ ತರಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಐಶ್ವರ್ಯ ತಿಳಿಸಿದ್ದಾರೆ.

ನಂತರ 2022, ಏಪ್ರಿಲ್‌ 9ರಂದು, ಆ ಲಾಕರ್‌ ಅನ್ನು ರಜನಿಕಾಂತ್‌ ಪೋಯಸ್‌ ಗಾರ್ಡನ್‌ ನಿವಾಸಕ್ಕೆ ಬದಲಾಯಿಸಿಲಾಗಿತ್ತು. ಆದರೆ ಲಾಕರ್‌ ಕೀಯನ್ನು ಸೇಂಟ್ ಮೇರಿಸ್‌ ರಸ್ತೆಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿರುವ ಸ್ಟೀಲ್ ಅಲ್ಮೆರಾದಲ್ಲಿ ಇರಿಸಿದ್ದೆ. ನಾನು ಇಲ್ಲದ ಸಮಯದಲ್ಲಿ ನಮ್ಮ ಮನೆಯ ಸಿಬ್ಬಂದಿ ಕೂಡ ಆ ಅಪಾರ್ಟ್‌ಮೆಂಟ್‌ಗೆ ಹೋಗುತ್ತಿದ್ದರು ಎಂದು ಐಶ್ವರ್ಯ ಹೇಳಿದ್ದಾರೆ. ಫೆಬ್ರವರಿ 10ರಂದು ಲಾಕರ್ ಚೆಕ್ ಮಾಡಿದಾಗ ಚಿನ್ನಾಭರಣ ಕಾಣಿಸಲಿಲ್ಲ. ಅದು ನನ್ನ ಮದುವೆಯಾದ ಸಮಯದಿಂದ ಅಂದರೆ 18 ವರ್ಷಗಳಿಂದ ಇದ್ದ ಚಿನ್ನಾಭರಣ ಎಂದು ವಿವರಿಸಿದ್ದಾರೆ.

Aishwarya Rajinikanth Files Police Complaint After 60 Sovereigns of Jewels Get Stolen

ಐಶ್ವರ್ಯ ರಜನಿಕಾಂತ್‌ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್‌ 381 ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಐಶ್ವರ್ಯ ಮತ್ತೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 'ಲಾಲ್ ಸಲಾಂ' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದರಲ್ಲಿ ತಂದೆ ರಜನಿಕಾಂತ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸ್ತಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಐಶ್ವರ್ಯ ಪತಿ ಧನುಷ್‌ ಅವರಿಂದ ವಿಚ್ಛೇದನ ಪಡೆದು ದೂರಾಗಿದ್ದಾರೆ.

More from Filmibeat

English summary
Aishwarya Rajinikanth Files Police Complaint After 60 Sovereigns of Jewels Get Stolen. Thenampet police investigation on Aishwarya Rajinikanth's complaint. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X