"ಸಿಂಗಲ್ ಆಗಿ ಇರುವುದೇ ಬಹಳ ಸೇಫ್"; ಐಶ್ವರ್ಯ ರಜನಿಕಾಂತ್ ಶಾಕಿಂಗ್ ಕಾಮೆಂಟ್ಸ್
ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ 20 ವರ್ಷಗಳ ಹಿಂದೆ ಪ್ರೀತಿಗೆ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ 2 ವರ್ಷಗಳ ಹಿಂದೆ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದರು. ಸದ್ಯ ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಯಾಗಿದೆ.
ಐಶ್ವರ್ಯ- ಧನುಷ್ ದೂರಾಗಲು ಕಾರಣ ಏನು ಎನ್ನುವುದು ಗುಟ್ಟಾಗಿಯೇ ಇದೆ. ಧನುಷ್ ಸ್ಟಾರ್ ನಟನಾಗುವುದಕ್ಕೂ ಮುನ್ನವೇ ಸೂಪರ್ ಸ್ಟಾರ್ ಮಗಳಾಗಿದ್ದ ಐಶ್ವರ್ಯ ಆತನನ್ನು ಇಷ್ಟಪಟ್ಟಿದ್ದರು. ಎಲ್ಲರನ್ನು ಒಪ್ಪಿಸಿ ಮದುವೆ ಆಗಿದ್ದರು. ಇಬ್ಬರೂ ಗಂಡು ಮಕ್ಕಳು ಇದ್ದಾರೆ. ಹಸೆಮಣೆ ಏರಿ ಬರೋಬ್ಬರಿ 18 ವರ್ಷಗಳ ಬಳಿಕ ದಂಪತಿ ದೂರಾಗಿದ್ದರು ಅಭಿಮಾನಿಗಳಿಗೆ ಶಾಕ್ ತಂದಿತ್ತು.

ಮತ್ತೊಬ್ಬ ಮಗಳ ಸಾಂಸಾರಿಕ ಜೀವನವೂ ಹೀಗಾಯಿತ್ತಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ನೊಂದಿದ್ದು ನಿಜ. ಐಶ್ವರ್ಯ ನಿರ್ದೇಶಕಿಯಾಗಿ ಚಿತ್ರರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದ ರಜನಿಕಾಂತ್ ಪುತ್ರಿ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಇನ್ನು ಧನುಷ್-ಐಶ್ವರ್ಯಗೆ ಡಿವೋರ್ಸ್‌ಗೆ ಕಾರಣ ಏನು? ಎಂದು ಸಾಕಷ್ಟು ವಿಚಾರಗಳು ಚರ್ಚೆ ಆಯಿತು. ಕೆಲವರು ಸಾರಾ ಅಲಿಖಾನ್ ಹೆಸರನ್ನು ಇದರಲ್ಲಿ ಎಳೆದು ತಂದರು. ಮೀನಾ ಹಾಗೂ ಧನುಷ್ ಮದುವೆ ಆಗುತ್ತಾರೆ ಎಂದವರು ಇದ್ದಾರೆ. ಇನ್ನು ಇದೆಲ್ಲದರ ನಡುವೆ ಮತ್ತೆ ಇಬ್ಬರೂ ಒಂದಾಗುತ್ತಾರೆ ಎನ್ನುವ ಗುಸುಗುಸು ಕೂಡ ಶುರುವಾಗಿತ್ತು. ಧನುಷ್‌ಗೆ ದೂರಾಗುವುದು ಇಷ್ಟವಿಲ್ಲ, ಇದು ಐಶ್ವರ್ಯ ನಿರ್ಣಯ ಮಾತ್ರ ಎನ್ನುವ ಚರ್ಚೆ ಕೂಡ ನಡೀತಿದೆ. ಇತ್ತೀಚೆಗೆ 'ಲಾಲ್ ಸಲಾಂ' ಚಿತ್ರಕ್ಕೆ ಟ್ವೀಟ್ ಮಾಡಿ ಧನುಷ್ ಶುಭ ಕೋರಿದ್ದರು.

'ಲಾಲ್ ಸಲಾಂ' ಸಿನಿಮಾ ಪ್ರಮೋಷನ್ ವೇಳೆ ಐಶ್ವರ್ಯ ಧನುಷ್ ತಮ್ಮ ಡಿವೋರ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವುದಾಗಿ ವರದಿಯಾಗಿದೆ. ವೈಯಕ್ತಿಕ ವಿಚಾರವಾಗಿ ಮಾತನಾಡುತ್ತಾ ಮತ್ತೆ ಧನುಷ್ ಜೊತೆ ಒಟ್ಟಿಗೆ ಬಾಳುವ ಬಗ್ಗೆಯೂ ಪರೋಕ್ಷವಾಗಿ ಮಾತನಾಡಿದ್ದಾರೆ.
"ಕಳೆದೆರಡು ವರ್ಷಗಳಿಂದ ನಾನು ಒಂಟಿಯಾಗಿ ಜೀವಿಸುತ್ತಿದ್ದೇನೆ. ಆದರೆ ನಾನು ಈ ಒಂಟಿ ಜೀವನವನ್ನು ತುಂಬಾ ಆನಂದಿಸುತ್ತಿದ್ದೇನೆ. ಈ ಎರಡು ವರ್ಷಗಳಲ್ಲಿ ನನಗೆ ಅರ್ಥವಾಗಿದ್ದು ಏನು ಅಂದ್ರೆ? ನಾವು ಒಂಟಿಯಾಗಿರುವಾಗ ಮತ್ತಷ್ಟು ಸುರಕ್ಷಿತವಾಗಿರಬಹುದು. ಇದೀಗ ನನಗೆ ಹೀಗಿರುವುದೇ ಚೆನ್ನಾಗಿದೆ" ಎಂದಿದ್ದಾರೆ.
"ಮಕ್ಕಳಿಗಾಗಿ ಈ ಹಿಂದೆ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದೆ. ಆದರೆ ಜಗತ್ತು ತುಂಬಾ ವೇಗವಾಗಿ ಓಡುತ್ತಿದೆ. ಟೈಮ್ ಹೋಗುವುದೇ ಗೊತ್ತಾಗುತ್ತಿಲ್ಲ. ಅಷ್ಟು ವೇಗವಾಗಿ ಸಾಗಿ ಹೋಗುತ್ತಿದೆ. ಹೀಗೆ ಒಂಟಿಯಾಗಿ ಜೀವನ ಸಾಗಿಸುವುದೇ ಈಸಿ ಎನಿಸುತ್ತಿದೆ" ಎಂದು ಐಶ್ವರ್ಯ ಹೇಳಿದ್ದಾರೆ. ಈ ಮೂಲಕ ಮತ್ತೆ ಧನುಷ್ ಜೊತೆ ಸೇರುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಐಶ್ವರ್ಯ ಮಾತು ಕೇಳಿ ಇಬ್ಬರೂ ಒಂದಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ. ಕ್ರಿಕೆಟ್ ಜೊತೆ ಜೊತೆಗೆ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.
'ಲಾಲ್ ಸಲಾಂ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಕಥೆ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಒಳ್ಳೆ ಪ್ರಯತ್ನವೇ ಆಗಿದ್ದು ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಮೊದಲ 3 ದಿನಕ್ಕೆ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಇನ್ನು ಧನುಷ್- ಐಶ್ವರ್ಯ ಪುತ್ರ ಯಾತ್ರಾ ಕೂಡ ಚಿತ್ರರಂಗಕ್ಕೆ ಬರುವ ಬಗ್ಗೆ ಗುಸುಗುಸು ಶುರುವಾಗಿದೆ.


Click it and Unblock the Notifications











