ವಿಡಿಯೋ ವೈರಲ್: ಆಸ್ಪತ್ರೆಯಲ್ಲಿ ನಟ ತಲಾ ಅಜಿತ್ ದಂಪತಿ, ಅಭಿಮಾನಿಗಳಲ್ಲಿ ಆತಂಕ
ಕಾಲಿವುಡ್ ಸ್ಟಾರ್ ನಟ ತಲಾ ಅಜಿತ್ ದಂಪತಿ ಆಸ್ಪತ್ರೆಯಲ್ಲಿರುವ ವಿಡಿಯೋ ವೈರಲ್ ಆಗಿದೆ. ಕೊರೊನಾ ಹಾವಳಿಯ ನಡುವೆಯೂ ಅಜಿತ್ ದಂಪತಿ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
Recommended Video
ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj
ಅಜಿತ್ ಮಾಸ್ಕ್ ಹಾಕಿಕೊಂಡು ಚೆನ್ನೈ ಆಸ್ಪತ್ರೆಗೆ ಎಂಟ್ರಿ ಕೊಡುವ ಮತ್ತು ಆಸ್ಪತ್ರೆ ಒಳಗೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜಿತ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಅಜಿತ್ ರೊಟಿನ್ ಚೆಕಪ್ ಗೆ ಬಂದಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ. ಚೆಕಪ್ ಮಾಡಿಸಿಕೊಂಡು ಅಜಿತ್ ಮನೆಗೆ ವಾಪಸ್ ಆಗುತ್ತಿರುವ ವಿಡಿಯೋ ಸಹ ಹರಿದಾಡುತ್ತಿದೆ.

ಅಂದ್ಹಾಗೆ ಅಜಿತ್ ಸದ್ಯ ವಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದ ಸಿನಿಮಾತಂಡ ಈಗ ಭಾರತದಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಲು ನಿರ್ಧರಿಸಿದೆ.
English summary
Tamil Actor Ajith and his wife visited to Chennai hospital video viral.


Click it and Unblock the Notifications