ದಕ್ಷಿಣ ಭಾರತದ ಸಿನಿ ಕಾರ್ಮಿಕರ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿದ ಅಜಿತ್
ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಅವರು ದಕ್ಷಿಣ ಭಾರತದ ಸಿನಿಮಾ ಕಾರ್ಮಿಕರ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಖುದ್ದು ಸಂಘದ ಅಧ್ಯಕ್ಷ ಆರ್‌ಕೆ ಸೆಲ್ವಮಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ ಎಂದು ಅಧ್ಯಕ್ಷ ಸೆಲ್ವಮಣಿ ತಿಳಿಸಿದ್ದು, ಕಾರ್ಮಿಕರ ಸಂಘದ ಪರವಾಗಿ ಅಜಿತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಲಾಕ್‌ಡೌನ್‌ನಿಂದ ಸಿನಿಮಾರಂಗ ಸಂಕಷ್ಟದಲ್ಲಿದೆ. ಸಿನಿಮಾ ಕೆಲಸಗಳನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು ದಿನನಿತ್ಯದ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಜಿತ್ ಅವರು ಸಿನಿಮಾ ಕಾರ್ಮಿಕರ ಸಹಾಯಕ್ಕೆ ಬಂದಿರುವುದು ಮೆಚ್ಚುಗೆ ಗಳಿಸಿಕೊಂಡಿದೆ.

ಇದಕ್ಕೂ ಮೊದಲು ನಟ ಅಜಿತ್ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆನ್‌ಲೈನ್ ಮೂಲಕ ಸಿಎಂ ನಿಧಿಗೆ ಹಣ ಕಳುಹಿಸಿರುವುದಾಗಿ ಅಜಿತ್ ಮ್ಯಾನೇಜರ್ ಅಧಿಕೃತವಾಗಿ ಮಾಹಿತಿ ನೀಡಿದ್ದರು.
ತಮಿಳು ನಟ ಸೂರ್ಯ, ಕಾರ್ತಿ ಸಹೋದರರು ಸಿಎಂ ಪರಿಹಾರ ನಿಧಿಗೆ 1 ಕೋಟಿ ದೇಣಿಗೆ ನೀಡಿದ್ದಾರೆ. ರಜನಿಕಾಂತ್ ಮಗಳು ಸೌಂದರ್ಯ ಕುಟುಂಬದವರು ಒಂದು ಕೋಟಿ ಚೆಕ್ ಹಸ್ತಾಂತರಿಸಿದ್ದರು.
ಇನ್ನುಳಿದಂತೆ ಅಜಿತ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ವಾಲಿಮೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಭೀತಿ ಕಡಿಮೆಯಾಗುತ್ತಿದ್ದಂತೆ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ.
ತಮಿಳುನಾಡಿನಲ್ಲಿ ಮೇ 31ರವರೆಗೂ ಸಿನಿಮಾ ಮತ್ತು ಟೆಲಿವಿಷನ್‌ಗೆ ಸಂಬಂಧಿಸಿದ ಚಿತ್ರೀಕರಣ ರದ್ದುಗೊಳಿಸಲಾಗಿದೆ.


Click it and Unblock the Notifications











