twitter
    For Quick Alerts
    ALLOW NOTIFICATIONS  
    For Daily Alerts

    ದಕ್ಷಿಣ ಭಾರತದ ಸಿನಿ ಕಾರ್ಮಿಕರ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿದ ಅಜಿತ್

    |

    ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಅವರು ದಕ್ಷಿಣ ಭಾರತದ ಸಿನಿಮಾ ಕಾರ್ಮಿಕರ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಖುದ್ದು ಸಂಘದ ಅಧ್ಯಕ್ಷ ಆರ್‌ಕೆ ಸೆಲ್ವಮಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ ಎಂದು ಅಧ್ಯಕ್ಷ ಸೆಲ್ವಮಣಿ ತಿಳಿಸಿದ್ದು, ಕಾರ್ಮಿಕರ ಸಂಘದ ಪರವಾಗಿ ಅಜಿತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ನಟ ಸೂರ್ಯ ಮತ್ತು ಕಾರ್ತಿ ಸಹೋದರರಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆನಟ ಸೂರ್ಯ ಮತ್ತು ಕಾರ್ತಿ ಸಹೋದರರಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

    ಲಾಕ್‌ಡೌನ್‌ನಿಂದ ಸಿನಿಮಾರಂಗ ಸಂಕಷ್ಟದಲ್ಲಿದೆ. ಸಿನಿಮಾ ಕೆಲಸಗಳನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು ದಿನನಿತ್ಯದ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಜಿತ್ ಅವರು ಸಿನಿಮಾ ಕಾರ್ಮಿಕರ ಸಹಾಯಕ್ಕೆ ಬಂದಿರುವುದು ಮೆಚ್ಚುಗೆ ಗಳಿಸಿಕೊಂಡಿದೆ.

    Ajith has donated 10 lakhs for the benefit of the FEFSI

    ಇದಕ್ಕೂ ಮೊದಲು ನಟ ಅಜಿತ್ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆನ್‌ಲೈನ್ ಮೂಲಕ ಸಿಎಂ ನಿಧಿಗೆ ಹಣ ಕಳುಹಿಸಿರುವುದಾಗಿ ಅಜಿತ್ ಮ್ಯಾನೇಜರ್ ಅಧಿಕೃತವಾಗಿ ಮಾಹಿತಿ ನೀಡಿದ್ದರು.

    ತಮಿಳು ನಟ ಸೂರ್ಯ, ಕಾರ್ತಿ ಸಹೋದರರು ಸಿಎಂ ಪರಿಹಾರ ನಿಧಿಗೆ 1 ಕೋಟಿ ದೇಣಿಗೆ ನೀಡಿದ್ದಾರೆ. ರಜನಿಕಾಂತ್ ಮಗಳು ಸೌಂದರ್ಯ ಕುಟುಂಬದವರು ಒಂದು ಕೋಟಿ ಚೆಕ್ ಹಸ್ತಾಂತರಿಸಿದ್ದರು.

    ಇನ್ನುಳಿದಂತೆ ಅಜಿತ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ವಾಲಿಮೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಭೀತಿ ಕಡಿಮೆಯಾಗುತ್ತಿದ್ದಂತೆ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ.

    Recommended Video

    ನೆಚ್ಚಿನ ಟೀಂ RCB, ಆದ್ರೆ ನೆಚ್ಚಿನ ಪ್ಲೇಯರ್ ಇರೋದು CSK ನಲ್ಲಿ ಎಂದ ರಶ್ಮಿಕಾ ಮಂದಣ್ಣ | Filmibeat Kannada

    ತಮಿಳುನಾಡಿನಲ್ಲಿ ಮೇ 31ರವರೆಗೂ ಸಿನಿಮಾ ಮತ್ತು ಟೆಲಿವಿಷನ್‌ಗೆ ಸಂಬಂಧಿಸಿದ ಚಿತ್ರೀಕರಣ ರದ್ದುಗೊಳಿಸಲಾಗಿದೆ.

    English summary
    Tamil Actor Ajith has donated 10 lakhs for the benefit of the FEFSI (Film Employees federation Of South India) union cine industry workers.
    Saturday, May 15, 2021, 19:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X