ಅಜಿತ್ ಕಾರ್ ಕ್ರೇಜ್, ಮತ್ತೊಂದು ದುಬಾರಿ ಕಾರು ಖರೀದಿಸಿದ ತಲಾ ; ಇದರ ವಿಶೇ‍ಷತೆಗಳೇನು, ಬೆಲೆ ಎಷ್ಟು..?

ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿದವರು ಅಜಿತ್. ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ಅಜಿತ್, ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ ಅಂದರೆ ಅದು ತಪ್ಪಲ್ಲ.

ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.

Ajith Kumar Enhances His Luxury Car Collection with a Stunning Porsche Worth Rs 4 Crore

ಇಷ್ಟೇ ಅಲ್ಲ ನಟನೆಯ ಜೊತೆ ಬೈಕ್‌ ರೇಸರ್‌ ಕೂಡಾ ಆಗಿರುವ ತಲಾ ಅಜಿತ್ ಅವರ ಬಳಿ ದುಬಾರಿ ರೇಸಿಂಗ್ ವೆಹಿಕಲ್ಲುಗಳದ್ದೊಂದು ದೊಡ್ಡ ಸಂಗ್ರಹವೇ ಇದೆ. ವಿಶ್ವದೆಲ್ಲೆಡೆ ಜನಪ್ರಿಯವಾಗಿರೋ ಜಪಾನಿನ ಅತ್ಯಂತ ದುಬಾರಿ ಹೋಂಡಾ ಅಕಾಲರ್ಡ್ ವಿ6, ಬೆನ್ಜ್ ಸೀರೀಸ್ 740 ಎಲ್‌ ಐ ಮುಂತಾದ ಲೆಕ್ಕವಿರದಷ್ಟು ಕಾರುಗಳ ಜೊತೆಗೆ, ಎಪ್ರಿಲಿಯಾ ಪಾಫೋನಾರ್ಕ್, ಬಿಎಂಡಬ್ಲು 51000 ಆರ್ ಆರ್, ಬಿಎಂಡಬ್ಲ್ಯು 13005, ಕವಾಸಾಕಿ ನಿಂಜಾ ಝಡೆಕ್ಸ್ 14 ಆರ್ ಸೇರಿದಂತೆ ಕನಸಿನಂಥಾ ದುಬಾರಿ ಬೈಕುಗಳೂ ಇವೆ. ಈ ಸಾಲಿಗೆ ಈಗ ಮತ್ತೊಂದು ಕಾರು ಸೇರಿಕೊಂಡಿದೆ.

ಹೌದು, ಕಳೆದ ಜುಲೈನಲ್ಲಿ ಕೆಂಪು ಬಣ್ಣದ ಫೆರಾರಿ SF90 ಕಾರ್ ನ್ನ 09 ಕೋಟಿ ನೀಡಿ ಖರೀದಿಸಿದ್ದ ಅಜಿತ್, ಈಗ ಪೋರ್ಷೆ ಕಂಪನಿಯ GT3 RS ಮಾಡೆಲ್ ಕಾರನ್ನು ಖರೀದಿಸಿದ್ದಾರೆ. ಈ ಕಾರಿಗೆ ನಾಲ್ಕು ಕೋಟಿ ಹಣವನ್ನು ಕೂಡ ಸುರಿದಿದ್ದಾರೆ. ಕೇವಲ 3.2 ಸೆಕೆಂಡ್‌ನಲ್ಲಿ 100 ಕೀಲೋ ಮೀಟರ್ ವೇಗವನ್ನೂ ತಲುಪುವ ಸಾಮರ್ಥ್ಯ ಹೊಂದಿರುವ ಈ ಕಾರಿನ ಗರಿಷ್ಠ ವೇಗ 296 ಕೀಲೋ ಮೀಟರ್.

More from Filmibeat

Read more about: ajith car kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X