ಅಜಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಸೂಪರ್ ಹಿಟ್ 'ಬಿಲ್ಲ'

By ಫಿಲ್ಮ್ ಡೆಸ್ಕ್

ತಮಿಳು ಸ್ಟಾರ್ ನಟ ಅಜಿತ್ ಸದ್ಯ ವಾಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡ ಅಜಿತ್ ಅವರ ಅನಾರೋಗ್ಯದಿಂದ ಕೆಲವು ದಿನಗಳು ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ನಡೆಯುತ್ತಿದೆ.

ವಾಲಿಮೈ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಅಪ್ ಡೇಟ್ ಸಿಗದೆ ಬೇಸರಾಗಿದ್ದ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಜಿತ್ ನಟನೆಯ ಸೂಪರ್ ಹಿಟ್ ಬಿಲ್ಲ ಸಿನಿಮಾ ಮತ್ತೆ ತೆರೆಮೇಲೆ ಬರ್ತಿದೆ.

2007ರಲ್ಲಿ ರಿಲೀಸ್ ಆಗಿದ್ದ ಬಿಲ್ಲ ಸಿನಿಮಾ ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಮಾರ್ಚ್ 12ರಂದು ಸಿನಿಮಾ ತಮಿಳುನಾಡಿನಾದ್ಯಂತ ರಿಲೀಸ್ ಆಗಲಿದೆ. ಬಿಲ್ಲ ಚಿತ್ರದಲ್ಲಿ ನಟ ಅಜಿತ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಅಜಿತ್ ಗೆ ನಾಯಕಿಯಾಗಿ ಇಬ್ಬರು ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ ಮತ್ತು ನಮಿತಾ ಇಬ್ಬರು ಬಿಲ್ಲ ಸಿನಿಮಾದಲ್ಲಿ ಮಿಂಚಿದ್ದಾರೆ.

Ajith starrer Billa movie re release in Theaters on March 12th

ಅಜಿತ್ ನಟನೆಯ ಬಿಲ್ಲ ಸಿನಿಮಾಗೆ ವಿಷ್ಣುವರ್ಧನ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಬಿಲ್ಲ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಿಲ್ಲ ಸಿನಿಮಾ ರಿಮೇಕ್. ಅಂದು ಅಭಿಮಾನಿಗಳ ಮನಗೆದಿದ್ದ ಬಿಲ್ಲ ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಬರ್ತಿದೆ.

ಬಿಲ್ಲ ರೀ ರಿಲೀಸ್ ಸುದ್ದಿ ಕೇಳಿ ಅಜಿತ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಳೆ ಸಿನಿಮಾವನ್ನು ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಅಂದಹಾಗೆ ಬಿಲ್ಲ ಮತ್ತೊಮ್ಮೆ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕು.

Recommended Video

ದರ್ಶನ್ ಬಿಟ್ಟು ಪುನೀತ್ ಕಡೆ ಮುಖ ಮಾಡಿದ ದಿನಕರ್ | Filmibeat Kannada

More from Filmibeat

English summary
Tamil Actor Ajith starrer Billa movie re release in Theaters on March 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X