ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಡಿ 51' ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ!
ಲವ್ ಸ್ಟೋರಿ, ಫಿದಾ ಸಿನಿಮಾ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟಾರ್ ಡೈರೆಕ್ಟರ್ ಶೇಖರ್ ಕಮ್ಮುಲ ಅವರು ಧನುಷ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಡಿ 51' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಚಿತ್ರದಲ್ಲಿ ಕಿಂಗ್ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಳ್ಳಲಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಂದಿದೆ.
ತಾತ್ಕಾಲಿಕವಾಗಿ ಡಿ 51 ಎಂದು ಹೆಸರಿಸಲಾದ ನಟ ಧನುಷ್ ಅವರ ಮುಂದಿನ ಚಿತ್ರವನ್ನು ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾನರ್‌ಗಳ ಅಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಷ್ಕರ್ ರಾಮ್ ಮೋಹನ್ ರಾವ್ ಜಂಟಿಯಾಗಿ ನಿರ್ಮಿಸಲಿದ್ದಾರೆ.

ನಾಯಕರಾಗಿ ಧನುಷ್, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಶೇಖರ್ ಕಮ್ಮುಲ ಮೊದಲ ಬಾರಿಗೆ ಕೈಜೋಡಿಸಿರುವುದು ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದರ ನಡುವೆ ಅಕ್ಕಿನೇನಿ ನಾಗಾರ್ಜುನ ಅವರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಡಿ 51 ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಧನುಷ್ ಚಿತ್ರದಲ್ಲಿ ನಾಗಾರ್ಜುನ ಅಕ್ಕಿನೇನಿ
ಆಗಸ್ಟ್ 29 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಕ್ಕಿನೇನಿ ನಾಗಾರ್ಜುನ 'D51' ರ ಭಾಗವಾಗಿದ್ದಾರೆ ಎಂದು ನಿರ್ಮಾಪಕರು ಘೋಷಣೆ ಮಾಡಿದ್ದಾರೆ.

"ನಮಗೆ ಧನುಷ್ ಮತ್ತು ಶೇಖರ್ ಕಮ್ಮುಲ ಅವರೊಂದಿಗಿನ ನಮ್ಮ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ಪವರ್‌ಹೌಸ್ ಅಗತ್ಯವಿದೆ. ನಮ್ಮ 'ಕಿಂಗ್'ಗಿಂತ ಉತ್ತಮ ಪವರ್ ಹೌಸ್ ಎಲ್ಲಿದೆ. ಕಿಂಗ್ ನಾಗರ್ಜುನ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತೊಮ್ಮೆ ನಿಮ್ಮೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ" ಎಂದು ಸುನೀಲ್ ನರಂಗ್ ಮತ್ತು ಪುಷ್ಕರ್ ರಾಮ್ ಮೋಹನ್ ರಾವ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಚಿತ್ರದ ನಿರ್ಮಾಪಕರಾದ ಸುನೀಲ್ ನಾರಂಗ್ ಮತ್ತು ಪುಷ್ಕರ್ ರಾಮ್ ಮೋಹನ್ ರಾವ್ ಜಂಟಿ ಹೇಳಿಕೆಯಲ್ಲಿ ನಾಗಾರ್ಜುನ ಅವರನ್ನು ಡಿ 51 ರಲ್ಲಿ ಸೇರ್ಪಡೆಗೊಳಿಸಲಾಗಿದೆ. ಅವರು ತಮ್ಮ ಪ್ಯಾನ್ ಇಂಡಿಯಾ ಸಿನಿಮಾದ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
ನಾಗಾರ್ಜುನ ಹೊಸ ಸಿನಿಮಾ ಘೋಷಣೆ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಾಗಾರ್ಜುನ ಅವರ ಅಭಿನಯದ ಮತ್ತೊಂದು ಚಿತ್ರ ಘೋಷಣೆಯಾಗಿದೆ. "ನಾ ಸಾಮಿ ರಂಗ" ಸಿನಿಮಾದ ಶೀರ್ಷಿಕೆ ಮತ್ತು ಬಿಡುಗಡೆ ದಿನಾಂಕವನ್ನು ಅಧಿಕೃತಗೊಳಿಸಲಾಗಿದೆ. ಹೊಸ ಚಿತ್ರದ ಘೋಷಣೆಯನ್ನು ಅಭಿಮಾನಿಗಳು ಸಂಭ್ರಮಿಸುತ್ತಿರುವಾಗಲೇ ಅವರು ಡಿ 51 ಸಿನಿಮಾದಲ್ಲಿ ಧನುಷ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಶುಭ ಸುದ್ದಿಯೂ ಹೊರಬಿದ್ದಿದೆ.
ನಾಗಾರ್ಜುನ ಅವರ ಮಗ ನಾಗ ಚೈತನ್ಯ ಕೂಡ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಈ ಹಿಂದೆ ನಟಿಸಿದ್ದರು. 2021 ರ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ 'ಲವ್ ಸ್ಟೋರಿ' ಚಿತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಪ್ರಮುಖ ಪಾತ್ರಧಾರಿಗಳು.


Click it and Unblock the Notifications










