ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್
ದಕ್ಷಿಣ ಭಾರತದ ಸ್ಟಾರ್ ನಟಿ ಅಮಲಾ ಪೌಲ್ ದಾಂಪತ್ಯ ಜೀವನ ವಿಚಾರಕ್ಕೆ ತಮಿಳು ನಟ ಧನುಶ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಅಮಲಾ ಮತ್ತು ನಿರ್ದೇಶಕ ವಿಜಯ್ ವೈವಾಹಿಕ ಬದುಕು ಮುರಿದುಬಿದ್ದಿದ್ದು ಇಬ್ಬರು ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.
ಇವರಿಬ್ಬರ ದಾಂಪತ್ಯ ಕಲಹಕ್ಕೆ ನಟ ಧನುಶ್ ಕಾರಣ ಎಂಬ ಮಾತು ಸದ್ದು ಮಾಡಿತ್ತು. ಅಮಲಾ ಪೌಲ್ ಮಾಜಿ ಮಾವ ಕೂಡ ಈ ಕುರಿತು ಮಾತನಾಡಿ 'ಧನುಶ್ ಕಾರಣದಿಂದಲೇ ನನ್ನ ಮಗ ಮತ್ತು ಸೊಸೆ ದಾಂಪತ್ಯ ಅಂತ್ಯ ಆಯಿತು' ಎಂದು ಆರೋಪಿಸಿದ್ದರು.
ಈ ಬಗ್ಗೆ ಅಮಲಾ ಪೌಲ್ ಕೂಡ ಸ್ಪಷ್ಟನೆ ನೀಡಿದ್ದರು. ಆ ಸ್ಪಷ್ಟನೆ ಬಳಿಕಯೂ ಅಮಲಾ ಮತ್ತೆ ನೆಗಿಟೀವ್ ಆಗಿಯೇ ಟ್ರೋಲ್ ಆಗ್ತಿದ್ದಾರೆ. ಅಷ್ಟಕ್ಕೂ, ಅಮಲಾ ಹೇಳಿದ್ದೇನು? ಮುಂದೆ ಓದಿ....

ಧನುಶ್ ಕಾರಣವಲ್ಲ
''ನನ್ನ ವಿಚ್ಛೇದನದ ಕುರಿತು ಅನವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ವಿಚ್ಛೇದನ ನೀಡಿದ್ದು ನನ್ನ ವೈಯುಕ್ತಿಕ ಕಾರಣಕ್ಕೆ. ನನ್ನ ಡಿವೋರ್ಸ್ ಗೆ ಬೇರೆ ಯಾರೂ ಕಾರಣ ಅಲ್ಲ. ಡಿವೋರ್ಸ್ ನಿರ್ಧಾರವನ್ನು ತೆಗೆದುಕೊಂಡಿದ್ದು ನಾನೇ. ಧನುಷ್ ನನ್ನ ವೆಲ್ ವಿಶರ್ ಅಷ್ಟೇ'' ಎಂದು ಆರೋಪಕ್ಕೆ ಸ್ಪಷ್ಟನೆ ನೀಡಿದ್ದರು.

ಅಮಲಾ ಹೇಳಿಕೆ ಮತ್ತೆ ಟ್ರೋಲ್
''ಧನುಶ್ ನನಗೆ ಒಳ್ಳೆಯ ಸ್ನೇಹಿತ. ಸ್ಟಾರ್ ಹೀರೋ ಆಗಿದ್ದರೂ ಎಲ್ಲರ ಜೊತೆಯಲ್ಲೂ ಸ್ನೇಹಪೂರ್ವಕವಾಗಿರುತ್ತಾರೆ. ಭವಿಷ್ಯದಲ್ಲಿ ನಮ್ಮಿಬ್ಬರ ಬಂಧ ಬಹಳ ದೂರ ಸಾಗಲಿದೆ'' ಎಂದು ಹೇಳಿದ್ದರು. ಅಮಲಾ ಈ ಮಾತು ಹೇಳಿದ್ದು ಸಿನಿಮಾ ವಿಚಾರಕ್ಕೆ ಆದರೆ, ಈ ಮಾತನ್ನು ತಪ್ಪಾಗಿ ಅರ್ಥೈಸಿ ಅಮಲಾ ವಿರುದ್ಧ ನೆಗಿಟೀವ್ ಪ್ರಚಾರ ಆಗ್ತಿದೆ.

ವಿಜಯ್ ತಂದೆ ಮಾಡಿದ್ದ ಆರೋಪ ಏನು?
'ವಿಜಯ್ ಜೊತೆ ಮದುವೆ ಆದ್ಮೇಲೆ ಚಿತ್ರರಂಗ ತೊರೆಯಲು ಅಮಲಾ ಪೌಲ್ ನಿರ್ಧರಿಸಿದ್ದರು. ಆದರೆ ಧನುಶ್ ತಮ್ಮದೇ ಬ್ಯಾನರ್ ಚಿತ್ರದಲ್ಲಿ ನಟಿಸುವಂತೆ ಅಮಲಾಗೆ ಬೇಡಿಕೆ ಇಟ್ಟರು. ಅಮಲಾ ಕೂಡ ಆ ಚಿತ್ರ ಒಪ್ಪಿಕೊಂಡರು. ಅಲ್ಲಿಂದಲೇ ಅಮಲಾ ಮತ್ತು ವಿಜಯ್ ಜೀವನದಲ್ಲಿ ಸಮಸ್ಯೆ ಶುರುವಾಯ್ತು' ಎಂದು ಎ ಎಲ್ ವಿಜಯ್ ತಂದೆ ಅಳಗಪ್ಪನ್ ಆರೋಪಿಸಿದ್ದರು.

ಅಮಲಾ ಪ್ರೀತಿಯಲ್ಲಿದ್ದಾರಾ?
ಡಿವೋರ್ಸ್ ಬಳಿಕ ಅಮಲಾ ಪೌಲ್ ಮಾಜಿ ಪತಿ ವಿಜಯ್ ಇನ್ನೊಂದು ಮದುವೆ ಆದರು. ಅಮಲಾ ಕೂಡ ಒಬ್ಬರನ್ನು ಪ್ರೀತಿಸುತ್ತಿದ್ದು, ಮದುವೆ ಬಗ್ಗೆ ಸದ್ಯಕ್ಕೆ ಯೋಚಿಸಲ್ಲ ಎನ್ನಲಾಗಿದೆ. 2019ರಲ್ಲಿ ತೆರೆಕಂಡಿದ್ದ 'ಅಡೈ' ಚಿತ್ರದಲ್ಲಿ ಕೊನೆಯದಾಗಿ ಅಮಲಾ ನಟಿಸಿದ್ದರು.


Click it and Unblock the Notifications











