ಹೆಸರು ಬದಲಿಸಿ ಸೋಲು ಕಂಡಿದ್ದ 'ಹೆಬ್ಬುಲಿ' ನಟಿ: ಯಾವುದು ಆ ಹೆಸರು?
'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ ನಟಿ ಅಮಲಾ ಪೌಲ್ ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಫೇಮಸ್. ಮಲಯಾಳಂ ಭಾಷೆಯಲ್ಲಿ ಸಿನಿಮಾ ಜರ್ನಿ ಆರಂಭಿಸಿದರೂ ತಮಿಳಿನಲ್ಲಿ ಹೆಚ್ಚು ಸಕ್ಸಸ್ ಕಂಡರು. ಸಿನಿಮಾ ಪ್ರಪಂಚದಲ್ಲಿ ಏಳು-ಬೀಳು ಕಂಡಿರುವ ಅಮಲಾ ಪೌಲ್ ವೈಯಕ್ತಿಕ ಜೀವನದಲ್ಲೂ ಬಿದ್ದು ಎದ್ದಿದ್ದಾರೆ. ನಿರ್ದೇಶಕ ಎಎಲ್ ವಿಜಯ್ ಜೊತೆ ವಿವಾಹವಾಗಿ ನಂತರ ಡಿವೋರ್ಸ್ ಸಹ ಪಡೆದುಕೊಂಡಿದ್ದಾರೆ.
ಆದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಅಮಲಾ ಪೌಲ್ ಒಬ್ಬ ಸಕ್ಸಸ್‌ಫುಲ್ ನಟಿ. ಬಹುತೇಕರಿಗೆ ತಿಳಿಯದೇ ಇರುವ ಸಂಗತಿ ಏನಪ್ಪಾ ಅಂದ್ರೆ ಅಮಲಾ ಈ ಹಿಂದೆ ತನ್ನ ಹೆಸರು ಬದಲಿಸಿಕೊಂಡಿದ್ದರು. ನಿರ್ದೇಶಕರ ಸಲಹೆ ಮೆರೆಗೆ ಬೆಳ್ಳಿತೆರೆಯ ಹೆಸರು ಬದಲಿಸಿದರು. ಹೆಸರು ಬದಲಿಸಿಕೊಂಡ ಚೊಚ್ಚಲ ಚಿತ್ರವೇ ಸೋಲು ಕಂಡಿತು. ಹಾಗಾಗಿ, ಒಂದೇ ಚಿತ್ರಕ್ಕೆ ಮತ್ತೆ ಮೂಲ ಹೆಸರಿಗೆ ವಾಪಸ್ ಆದರು. ಮುಂದೆ ಓದಿ...

ಮೂಲ ಹೆಸರು ಅಮಲಾ
2009ರಲ್ಲಿ ಮಲಯಾಳಂ ಭಾಷೆಯ 'ನೀಲಾತಮರ' ಚಿತ್ರದ ಮೂಲಕ ಇಂಡಸ್ಟ್ರಿ ಪ್ರವೇಶಿಸಿದರು. 2010ರಲ್ಲಿ 'ವೀರಾಶೇಖರ್' ಚಿತ್ರದ ಮೂಲಕ ತಮಿಳಿಗೂ ಕಾಲಿಟ್ಟರು. ಈ ಎರಡು ಚಿತ್ರಗಳಲ್ಲಿ ತನ್ನ ಹೆಸರು ಅಮಲಾ ಎಂದೇ ಇತ್ತು. ಮೂರನೇ ಚಿತ್ರಕ್ಕೆ ನಿರ್ದೇಶಕರೊಬ್ಬರ ಸಲಹೆಯಂತೆ ತನ್ನ ಸ್ಕ್ರೀನ್ ಹೆಸರು ಬದಲಿಸಿಕೊಳ್ಳಲುವ ನಿರ್ಧರಿಸಿದರು.

ಅಮಲಾ ಬದಲು 'ಅನಕಾ'
ಮೂರನೇ ಸಿನಿಮಾ 'ಸಿಂಧು ಸಮವೇಲಿ'. ನಿರ್ದೇಶಕ ಸಮಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದಾಗಲೇ ಅಮಲಾ ಹೆಸರಿನಲ್ಲಿ ಓರ್ವ ನಟಿ ಖ್ಯಾತಿ ಗಳಿಸಿಕೊಂಡಿದ್ದರಿಂದ ಹೆಸರು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿ 'ಅಮಲಾ' ಬದಲು 'ಅನಕಾ' ಎಂದು ಮರುನಾಮಕರಣ ಮಾಡಿದರು.

ಸಿನಿಮಾ ಸೋಲು ಕಂಡಿತು
ನಿರ್ದೇಶಕರ ಅಭಿಲಾಷೆಯಂತೆ 'ಅನಕಾ' ಎಂದು ಚಿತ್ರದಲ್ಲೂ ಕ್ರೆಡಿಟ್ ಮಾಡಲಾಯಿತು. ದುರಾದೃಷ್ಟವಶಾತ್ ಈ ಸಿನಿಮಾ ಸೋಲು ಕಂಡಿತು. ಇದರಿಂದ ಬೇಸರಗೊಂಡ ನಟಿ 'ಅನಕಾ' ಎಂಬ ಹೆಸರು ಕೈಬಿಟ್ಟು ಮತ್ತೆ 'ಅಮಲಾ' ಎಂದೇ ಮುಂದುವರಿಸಿದರು.
Recommended Video

ನಾಲ್ಕು ಪ್ರಾಜೆಕ್ಟ್‌ನಲ್ಲಿ ನಟನೆ
ನಾಯಕ್, ತಲೈವಾ, ವಿಐಪಿ, ವಿಐಪಿ 2, ಇದ್ದರಮ್ಮಾಯಿಲೊತೋ ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ಅಮಲಾ ಪ್ರಸ್ತುತ ತಮಿಳಿನಲ್ಲಿ ಎರಡು ಹೊಸ ಪ್ರಾಜೆಕ್ಟ್ ಹಾಗೂ ಮಲಯಾಳಂ ಭಾಷೆಯಲ್ಲಿ ಎರಡು ಹೊಸ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











