For Quick Alerts
  ALLOW NOTIFICATIONS  
  For Daily Alerts

  ಹೆಸರು ಬದಲಿಸಿ ಸೋಲು ಕಂಡಿದ್ದ 'ಹೆಬ್ಬುಲಿ' ನಟಿ: ಯಾವುದು ಆ ಹೆಸರು?

  |

  'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ ನಟಿ ಅಮಲಾ ಪೌಲ್ ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಫೇಮಸ್. ಮಲಯಾಳಂ ಭಾಷೆಯಲ್ಲಿ ಸಿನಿಮಾ ಜರ್ನಿ ಆರಂಭಿಸಿದರೂ ತಮಿಳಿನಲ್ಲಿ ಹೆಚ್ಚು ಸಕ್ಸಸ್ ಕಂಡರು. ಸಿನಿಮಾ ಪ್ರಪಂಚದಲ್ಲಿ ಏಳು-ಬೀಳು ಕಂಡಿರುವ ಅಮಲಾ ಪೌಲ್ ವೈಯಕ್ತಿಕ ಜೀವನದಲ್ಲೂ ಬಿದ್ದು ಎದ್ದಿದ್ದಾರೆ. ನಿರ್ದೇಶಕ ಎಎಲ್ ವಿಜಯ್ ಜೊತೆ ವಿವಾಹವಾಗಿ ನಂತರ ಡಿವೋರ್ಸ್ ಸಹ ಪಡೆದುಕೊಂಡಿದ್ದಾರೆ.

  ಆದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಅಮಲಾ ಪೌಲ್ ಒಬ್ಬ ಸಕ್ಸಸ್‌ಫುಲ್ ನಟಿ. ಬಹುತೇಕರಿಗೆ ತಿಳಿಯದೇ ಇರುವ ಸಂಗತಿ ಏನಪ್ಪಾ ಅಂದ್ರೆ ಅಮಲಾ ಈ ಹಿಂದೆ ತನ್ನ ಹೆಸರು ಬದಲಿಸಿಕೊಂಡಿದ್ದರು. ನಿರ್ದೇಶಕರ ಸಲಹೆ ಮೆರೆಗೆ ಬೆಳ್ಳಿತೆರೆಯ ಹೆಸರು ಬದಲಿಸಿದರು. ಹೆಸರು ಬದಲಿಸಿಕೊಂಡ ಚೊಚ್ಚಲ ಚಿತ್ರವೇ ಸೋಲು ಕಂಡಿತು. ಹಾಗಾಗಿ, ಒಂದೇ ಚಿತ್ರಕ್ಕೆ ಮತ್ತೆ ಮೂಲ ಹೆಸರಿಗೆ ವಾಪಸ್ ಆದರು. ಮುಂದೆ ಓದಿ...

  ಹಳೆ ಬಾಯ್‌ಫ್ರೆಂಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ಅಮಲಾ ಪೌಲ್ಹಳೆ ಬಾಯ್‌ಫ್ರೆಂಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ಅಮಲಾ ಪೌಲ್

  ಮೂಲ ಹೆಸರು ಅಮಲಾ

  ಮೂಲ ಹೆಸರು ಅಮಲಾ

  2009ರಲ್ಲಿ ಮಲಯಾಳಂ ಭಾಷೆಯ 'ನೀಲಾತಮರ' ಚಿತ್ರದ ಮೂಲಕ ಇಂಡಸ್ಟ್ರಿ ಪ್ರವೇಶಿಸಿದರು. 2010ರಲ್ಲಿ 'ವೀರಾಶೇಖರ್' ಚಿತ್ರದ ಮೂಲಕ ತಮಿಳಿಗೂ ಕಾಲಿಟ್ಟರು. ಈ ಎರಡು ಚಿತ್ರಗಳಲ್ಲಿ ತನ್ನ ಹೆಸರು ಅಮಲಾ ಎಂದೇ ಇತ್ತು. ಮೂರನೇ ಚಿತ್ರಕ್ಕೆ ನಿರ್ದೇಶಕರೊಬ್ಬರ ಸಲಹೆಯಂತೆ ತನ್ನ ಸ್ಕ್ರೀನ್ ಹೆಸರು ಬದಲಿಸಿಕೊಳ್ಳಲುವ ನಿರ್ಧರಿಸಿದರು.

  ಅಮಲಾ ಬದಲು 'ಅನಕಾ'

  ಅಮಲಾ ಬದಲು 'ಅನಕಾ'

  ಮೂರನೇ ಸಿನಿಮಾ 'ಸಿಂಧು ಸಮವೇಲಿ'. ನಿರ್ದೇಶಕ ಸಮಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದಾಗಲೇ ಅಮಲಾ ಹೆಸರಿನಲ್ಲಿ ಓರ್ವ ನಟಿ ಖ್ಯಾತಿ ಗಳಿಸಿಕೊಂಡಿದ್ದರಿಂದ ಹೆಸರು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿ 'ಅಮಲಾ' ಬದಲು 'ಅನಕಾ' ಎಂದು ಮರುನಾಮಕರಣ ಮಾಡಿದರು.

  ಅಮಲಾ ಪೌಲ್ ನಿಶ್ಚಿತಾರ್ಥ ವಿವಾದ: ನಟಿ ಪರ ಆದೇಶ ನೀಡಿದ ಮದ್ರಾಸ್ ಕೋರ್ಟ್ಅಮಲಾ ಪೌಲ್ ನಿಶ್ಚಿತಾರ್ಥ ವಿವಾದ: ನಟಿ ಪರ ಆದೇಶ ನೀಡಿದ ಮದ್ರಾಸ್ ಕೋರ್ಟ್

  ಸಿನಿಮಾ ಸೋಲು ಕಂಡಿತು

  ಸಿನಿಮಾ ಸೋಲು ಕಂಡಿತು

  ನಿರ್ದೇಶಕರ ಅಭಿಲಾಷೆಯಂತೆ 'ಅನಕಾ' ಎಂದು ಚಿತ್ರದಲ್ಲೂ ಕ್ರೆಡಿಟ್ ಮಾಡಲಾಯಿತು. ದುರಾದೃಷ್ಟವಶಾತ್ ಈ ಸಿನಿಮಾ ಸೋಲು ಕಂಡಿತು. ಇದರಿಂದ ಬೇಸರಗೊಂಡ ನಟಿ 'ಅನಕಾ' ಎಂಬ ಹೆಸರು ಕೈಬಿಟ್ಟು ಮತ್ತೆ 'ಅಮಲಾ' ಎಂದೇ ಮುಂದುವರಿಸಿದರು.

  Karnataka Unlock: Yediyurappa ಹೇಳಿಕೆ ಕೇಳಿ ನಿಟ್ಟುಸಿರು ಬಿಟ್ಟ ಚಿತ್ರರಂಗ | Filmibeat Kannada
  ನಾಲ್ಕು ಪ್ರಾಜೆಕ್ಟ್‌ನಲ್ಲಿ ನಟನೆ

  ನಾಲ್ಕು ಪ್ರಾಜೆಕ್ಟ್‌ನಲ್ಲಿ ನಟನೆ

  ನಾಯಕ್, ತಲೈವಾ, ವಿಐಪಿ, ವಿಐಪಿ 2, ಇದ್ದರಮ್ಮಾಯಿಲೊತೋ ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ಅಮಲಾ ಪ್ರಸ್ತುತ ತಮಿಳಿನಲ್ಲಿ ಎರಡು ಹೊಸ ಪ್ರಾಜೆಕ್ಟ್ ಹಾಗೂ ಮಲಯಾಳಂ ಭಾಷೆಯಲ್ಲಿ ಎರಡು ಹೊಸ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.

  English summary
  South actress Amala Paul changed their on screen Name after enter film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X