For Quick Alerts
  ALLOW NOTIFICATIONS  
  For Daily Alerts

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಅವಕಾಶ ನಿರಾಕರಿಸಿದ್ದೇಕೆ ಅಮಲಾ ಪೌಲ್?

  |

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಕಾಲಿವುಡ್ ಸೂಪರ್‌ ಸ್ಟಾರ್‌ಗಳು ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಜನಿಕಾಂತ್, ಕಮಲ್ ಹಾಸನ್‌ರಂತಹ ದಿಗ್ಗಜರು ನಟಿಸೋಕೆ ಇಷ್ಟಪಟ್ಟಿದ್ದ ಸಿನಿಮಾ ಇದು. ಮಣಿರತ್ನಂ ನಿರ್ದೇಶನದ ಸಿನಿಮಾ ಅಂದಮೇಲೆ ನಟಿಸೋಕೆ ನಾಮುಂದು ತಾಮುಂದು ಎನ್ನುತ್ತಾರೆ. ಆದರೆ ನಟಿ ಅಮಲಾ ಪೌಲ್ ಇಂತಹದೊಂದು ಅದ್ಭುತ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣವನ್ನು ಈಗ ಬಿಚ್ಚಿಟ್ಟಿದ್ದಾರೆ.

  ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್‌ ಸೆಲ್ವನ್' ಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. 1000 ವರ್ಷಗಳ ಹಿಂದಿನ ಚೋಳ ರಾಜರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಷಾ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಭಾಗಗಳಾಗಿ ಮಣಿರತ್ನಂ ಈ ಐತಿಹಾಸಿಕ ದೃಶ್ಯಕಾವ್ಯವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

  'ಹೆಬ್ಬುಲಿ' ಸಿನಿಮಾ ನಟಿ ಅಮಲಾ ಪೌಲ್ 2ನೇ ಮದುವೆ ಗುಟ್ಟು ರಟ್ಟು?'ಹೆಬ್ಬುಲಿ' ಸಿನಿಮಾ ನಟಿ ಅಮಲಾ ಪೌಲ್ 2ನೇ ಮದುವೆ ಗುಟ್ಟು ರಟ್ಟು?

  'ಪೊನ್ನಿಯಿನ್‌ ಸೆಲ್ವನ್' ಚಿತ್ರದ ಪ್ರಮುಖ ಪಾತ್ರಕ್ಕೆ ಅಮಲಾ ಪೌಲ್‌ಗೆ ಬುಲಾವ್ ಹೋಗಿತ್ತು. ಆಡಿಷನ್‌ನಲ್ಲೂ ಭಾಗವಹಿಸಿ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಆಗ ಸಿನಿಮಾ ಶುರು ಆಗಿರಲಿಲ್ಲ. ಕಳೆದ ವರ್ಷ ಚಿತ್ರದಲ್ಲಿ ನಟಿಸಲು 'ಹೆಬ್ಬುಲಿ' ನಟಿಯನ್ನು ಮತ್ತೆ ಸಂಪರ್ಕಿಸಲಾಗಿತ್ತಂತೆ. ಆದರೆ ಆಕೆ ನಟಿಸೋಕೆ ಹಿಂದೇಟು ಹಾಕಿದ್ದಾರೆ.

  ಮಣಿ ಸರ್ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೆ

  ಮಣಿ ಸರ್ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೆ

  ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸೋ ಅವಕಾಶ ಮಿಸ್ ಮಾಡಿಕೊಂಡ ಬಗ್ಗೆ ಸಂದರ್ಶನವೊಂದರಲ್ಲಿ ಅಮಲಾ ಪೌಲ್ ಮಾತನಾಡಿದ್ದಾರೆ. "ಮಣಿರತ್ನಂ ಸರ್, 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕಾಗಿ ಆಡಿಷನ್ ಮಾಡಿದ್ದರು. ನಾನು ಕೂಡ ಅವರ ಜೊತೆ ಕೆಲಸ ಮಾಡಲು ಬಹಳ ಎಕ್ಸೈಟ್ ಆಗಿದ್ದೆ. ಆದರೆ ಆಗ ಅದು ಸಾಧ್ಯವಾಗಿರಲಿಲ್ಲ. ಎಂತಹ ಅವಕಾಶ ಕಳೆದುಕೊಂಡೆ ಎಂದು ಬಹಳ ಬೇಸರವಾಗಿತ್ತು". ಎಂದಿದ್ದಾರೆ.

  ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ಹೆಬ್ಬುಲಿ ನಟಿ ದೂರುಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ಹೆಬ್ಬುಲಿ ನಟಿ ದೂರು

  2ನೇ ಅವಕಾಶವನ್ನು ನಾನೇ ನಿರಾಕರಿಸಿದ್ದೆ

  2ನೇ ಅವಕಾಶವನ್ನು ನಾನೇ ನಿರಾಕರಿಸಿದ್ದೆ

  "2021ರಲ್ಲಿ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕಾಗಿ ನನಗೆ ಅವರು ಮತ್ತೆ ಕರೆ ಮಾಡಿದರು. ಆದರೆ ಆ ಸಂದರ್ಭದಲ್ಲಿ ನಾನು ಸಿನಿಮಾದಲ್ಲಿ ನಟಿಸುವ ಮನಸ್ಥಿತಿ ಹೊಂದಿರಲಿಲ್ಲ. ಈ ಬಗ್ಗೆ ವಿಷಾದ ಇದ್ಯಾ ಅಂತ ನನ್ನನ್ನು ಕೇಳಿದರೆ ಇಲ್ಲ ಎಂದು ಹೇಳುತ್ತೇನೆ. ಕೆಲವೊಂದು ವಿಷಯಗಳಲ್ಲಿ ಈ ರೀತಿ ಆಗುತ್ತದೆ. ಅದು ಆಗಬೇಕು ಎಂದು ಇದ್ದಾಗ ನಾವು ಏನು ಮಾಡಲು ಸಾಧ್ಯವಿಲ್ಲ. ನಾವು ಹೇಗೆ ಅದನ್ನು ನೋಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ" ಎಂದು ಅಮಲಾ ವಿವರಿಸಿದ್ದಾರೆ.

  ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಅಮಲಾ ದೂರು

  ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಅಮಲಾ ದೂರು

  ಇತ್ತೀಚೆಗೆ ನಟಿ ಅಮಲಾ ಪೌಲ್ ತನ್ನ ಮಾಜಿ ಬಾಯ್‌ ಫ್ರೆಂಡ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಟಿಯ ದೂರಿನ ಹಿನ್ನೆಲೆಯಲ್ಲಿ ಆಕೆಯ ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್‌ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ಬೇಲ್‌ಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. 2017ರಲ್ಲಿ ನನಗೂ ಅಮಲಾ ಪೌಲ್‌ಗೂ ವಿವಾಹವಾಗಿದೆ ಎಂದು ಅದಕ್ಕೆ ಸಾಕ್ಷಾಧಾರಗಳನ್ನು ನೀಡಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದರಿಂದ ಅಮಲಾ 2ನೇ ಮದುವೆ ಆಗಿರುವುದು ನಿಜಾನಾ ಎನ್ನುವ ಅನುಮಾನವೂ ಮೂಡಿದೆ.

  ಬಹುಕೋಟಿ ವೆಚ್ಚದ 'ಪೊನ್ನಿಯಿನ್‌ ಸೆಲ್ವನ್'

  ಬಹುಕೋಟಿ ವೆಚ್ಚದ 'ಪೊನ್ನಿಯಿನ್‌ ಸೆಲ್ವನ್'

  500 ಕೋಟಿ ಬಜೆಟ್‌ನಲ್ಲಿ 2 ಭಾಗಗಳಾಗಿ 'ಪೊನ್ನಿಯಿನ್‌ ಸೆಲ್ವನ್' ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸೆಪ್ಟೆಂಬರ್ 30ಕ್ಕೆ ಈ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಶುರುವಾಗಿದೆ. ಐಮ್ಯಾಕ್ಸ್ ವರ್ಷನ್‌ನಲ್ಲೂ ಚಿತ್ರ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದೆ. ರಾಜಮೌಳಿ 'ಬಾಹುಬಲಿ' ರೀತಿಯಲ್ಲಿ ಈ ಕಾಸ್ಟ್ಯೂಮ್ ಡ್ರಾಮಾ ಭಾರೀ ಕುತೂಹಲ ಮೂಡಿಸಿದೆ.

  English summary
  Amala Paul reveals the reason why She Rejected Mani Ratnam's Ponniyin Selvan. Amala said that she auditioned for the Ponniyin Selvan quite early but turned it down since she wasn't in the mental state of doing the project.
  Monday, September 12, 2022, 12:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X