For Quick Alerts
  ALLOW NOTIFICATIONS  
  For Daily Alerts

  ದೇಹದ ಬಗ್ಗೆ ತೀರ ಕೆಳಮಟ್ಟದ ಕಾಮೆಂಟ್ ಮಾಡಿದವರ ಗ್ರಹಚಾರ ಬಿಡಿಸಿದ 'ಹೆಬ್ಬುಲಿ' ನಟಿ

  |

  ನಟಿಮಣಿಯರು ಆಗಾಗ ಬಾಡಿ ಶೇಮಿಂಗ್‌ಗೆ ಗುರಿಯಾಗುತ್ತಿರುತ್ತಾರೆ. ಸ್ವಲ್ಪ ದಪ್ಪ ಆದರೂ, ತೆಳ್ಳಗೆ ಕಾಣಿಸಿದರೂ ಸಾಕು ನೆಟ್ಟಿಗರು ಹಿಗ್ಗಾಮುಗ್ಗಾ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಾರೆ. ಸಿನಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಫೋಟೋಶೂಟ್, ಪಾರ್ಟಿ, ಪ್ರವಾಸ ಹೀಗೆ ಅನೇಕ ರೀತಿಯ ಫೋಟೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಸಿನಿ ಮಂದಿ ಶೇರ್ ಮಾಡುವ ಫೋಟೋಗಳಿಗೆ ನೆಟ್ಟಿಗರು ತೀರ ಕೆಳಮಟ್ಟದ ಕಾಮೆಂಟ್ ಮಾಡುತ್ತಾರೆ. ಇದು ನಟಿಯರ ಕೋಪಕ್ಕೆ ಕಾರಣವಾಗುತ್ತದೆ.

  ಒಂದಿಷ್ಟು ಸಮಯ ಸೈಲೆಂಟ್ ಆಗಿದ್ದರೂ ಮಿತಿ ಮೀರಿದಾಗ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಸರಿಯಾದ ಉತ್ತರ ನೀಡುವ ಮೂಲಕ ಚಳಿ ಬಿಡಿಸುತ್ತಾರೆ. ಇದೀಗ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಕೂಡ ತನ್ನ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಚಳಿ ಬಿಡಿಸಿದ್ದಾರೆ.

  ಸದಾ ಗ್ಲಾಮ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ನಟಿ ಅಮಲಾ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಅಮಲಾ ಶೇರ್ ಮಾಡಿದ್ದ ವಿಡಿಯೋಗೆ ನೆಟ್ಟಿಗನೊಬ್ಬ ತೀರ ಕೆಳಮಟ್ಟದ ಕಾಮೆಂಟ್ ಮಾಡಿದ್ದಾನೆ. ಕಾಮೆಂಟ್ ನೋಡಿ ಸೈಲೆಂಟ್ ಆಗದ ಅಮಲಾ ಸರಿಯಾದ ಉತ್ತರ ನೀಡಿದ್ದಾರೆ.

  ಅಮಲಾ ಪೌಲ್ ಸಹೋದರ ಅಭಿಜಿತ್ ಅವರಿಗೆ ಮದುವೆ ಫಿಕ್ಸ್ ಆಗಿದೆ. ಮದುವೆಗೂ ಮೊದಲು ಅಭಿಜಿತ್​ ಬ್ಯಾಚುಲರ್ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೆ ಅಮಲಾ ಸರ್ ​ಪ್ರೈಸ್​ ಎಂಟ್ರಿ ಕೊಟ್ಟಿದ್ದರು. ತುಂಡುಡುಗೆ ತೊಟ್ಟು ಪಾರ್ಟಿಗೆ ಎಂಟ್ರಿ ಕೊಟ್ಟಿದ್ದ ಅಮಲಾ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಇಂಗ್ಲಿಷ್​ ಹಾಡಿಗೆ ಸ್ಟೆಪ್ ಹಾಕಿದ್ದರು. ಇದು ಸಂಪೂರ್ಣವಾಗಿ ಅವರು ಕುಟುಂಬದ ಜತೆ ಕಳೆದ ಸಮಯವಾಗಿತ್ತು. ಆದರೀಗ ಅಮಲಾ ಹಾಕಿದ್ದ ಬಟ್ಟೆ ನೆಟ್ಟಿಗರ ಕಣ್ಣನ್ನು ಕುಕ್ಕಿದೆ.

  ಅಮಲಾ ಶೇರ್ ಮಾಡಿದ್ದ ವಿಡಿಯೋಗೆ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, "ಖಾಸಗಿ ಅಂಗಾಗಗಳು ಹೇಗೆ ಕುಣಿಯುತ್ತಿವೆ ನೋಡಿ. ಅದನ್ನು ನೋಡಿದರೆ ಅವರು ಇಂದು ಏನು ಬಯಸುತ್ತಾರೆ ಎಂಬುದು ಗೊತ್ತಾಗುತ್ತಿದೆ" ಎಂದಿದ್ದಾನೆ. ಇದಕ್ಕೆ ಅಮಲಾ ವ್ಯಂಗ್ಯವಾಗಿ "ಹೇ ನಿನಗೆ ಗೊತ್ತಾಯಿತಲ್ಲ ಬೇಬಿ" ಎಂದು ಉತ್ತರಿಸಿದ್ದಾರೆ. ಇದಕ್ಕೆ ಮತ್ತೊಬ್ಬ ಕಾಮೆಂಟ್ ಮಾಡಿ, "ಲೆಜೆಂಡ್​ ಗಳಿಗೆ ಮಾತ್ರ ಅದು ಕಾಣುತ್ತದೆ" ಎಂದು ಖಾಸಗಿ ಅಂಗದ ಬಗ್ಗೆ ಪರೋಕ್ಷವಾಗಿ ಅವಮಾನಿಸಿದ್ದಾರೆ. ಇದಕ್ಕೆ ಅಮಲಾ ಖಡಕ್ ಉತ್ತರ ನೀಡಿದ್ದಾರೆ.

  Amala Paul shocking reply to dirty comments on her body

  ಅಮಲಾ ಕೊಟ್ಟಿರುವ ಪ್ರತಿಕ್ರಿಯೆ ಈಗ ವೈರಲ್ ಆಗಿದೆ. ಅಮಲಾ ಉತ್ತರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಪ್ರತಿಕ್ರಿಯೆ ಎನ್ನುತ್ತಿದ್ದಾರೆ. ಇನ್ನು ಅಮಲಾ ಪೌಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಅಮಲಾ, ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ಅಮಲಾ ನಟಿಸುವ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಅಮಲಾ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅಮಲಾ ನಟನೆಯ ವೆಬ್ ಸೀರಿಸ್ ಬಿಡುಗಡೆಯಾಗಿದೆ. ಕುಡಿ ಎಡಮೈತೆ ವೆಬ್ ಸಿರೀಸ್‌ನಲ್ಲಿ ಅಮಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ವೆಬ್ ಸೀರಿಸ್‌ಗೆ ಕನ್ನಡದ ಖ್ಯಾತ ನಿರ್ದೇಶಕ ಲೂಸಿಯ ಪವನ್ ಆಕ್ಷನ್ ಕಟ್ ಹೇಳಿದ್ದರು. ಇದೀಗ ಅಮಲಾ ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Amala Paul shocking reply to dirty comments on her body.
  Wednesday, September 22, 2021, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X