ಆ ನಟಿಯನ್ನು ಮದುವೆಯಾಗಿ ನನ್ನ ಮಗನ ಬಾಳು ಹಾಳಾಯಿತು: ನಿರ್ಮಾಪಕನ ಅಳಲು

ಬಾಲಿವುಡ್ ನಲ್ಲಿ ನಡೆವಷ್ಟು ದಕ್ಷಿಣ ಭಾರತದ ಚಿತ್ರಮಂದಿರಗಳಲ್ಲಿ ಡೈವೋರ್ಸ್‌ಗಳು, ಮರು-ಮದುವೆಗಳು ನಡೆಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲೂ ಅದು ಹೆಚ್ಚುತ್ತಿದೆ.

Recommended Video

ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

ಕೆಲವು ನಟ-ನಟಿಯರು ಮದುವೆಯಾಗಿ ಕೆಲವೇ ವರ್ಷಕ್ಕೆ ಬೇರೆಯಾಗಿ ಮರುಮದುವೆ ಮಾಡಿಕೊಳ್ಳುತ್ತಿದ್ದಾರೆ. ತಮಗಿಂತ ಕಿರಿಯ ನಾಯಕಿಯರನ್ನು ಮದುವೆಯಾದ ಕೆಲ ಉದಾಹರಣೆಗಳು ದಕ್ಷಿಣದಲ್ಲಿಯೂ ಕಂಡು ಬರುತ್ತಿವೆ.

ವಿಚ್ಛೇಧನ, ಮರು-ಮದುವೆಯಲ್ಲಿ ತೊಡಗಿರುವ ಸೆಲೆಬ್ರಿಟಿಗಳಿಗೆ ಇದು ಸಾಮಾನ್ಯವೇನೋ ಅದರೆ ಅವರ ಪೋಷಕರಿಗೆ ಇದು ಬಹಳ ಪ್ರಮುಖ ಪ್ರಶ್ನೆ. ಇಂಥಹುದನ್ನು ಅವರು ಸಹಿಸಲಾರರು.

ದಕ್ಷಿಣದ ಖ್ಯಾತ ನಟಿ ಅಮಲಾ ಪೌಲ್ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು 2014 ರಲ್ಲಿ ಮದುವೆಯಾದರು. ನಂತರ ಇಬ್ಬರೂ ಸಹ 2016 ರಲ್ಲಿ ವಿಚ್ಛೇಧನಕ್ಕೆ ಅರ್ಜಿ ಹಾಕಿದರು, 2017 ರಲ್ಲಿ ವಿಚ್ಛೇಧನ ಅರ್ಜಿ ಒಪ್ಪಿಗೆ ಪಡೆಯಿತು.

ನಟಿಸಲು ಅವಕಾಶ ಕೊಡಲಿಲ್ಲವೆಂದು ವಿಚ್ಛೇಧನಕ್ಕೆ ಅರ್ಜಿ

ನಟಿಸಲು ಅವಕಾಶ ಕೊಡಲಿಲ್ಲವೆಂದು ವಿಚ್ಛೇಧನಕ್ಕೆ ಅರ್ಜಿ

ಅಮಲಾ ಪೌಲ್ ಗೆ ನಟಿಸಲು ಆಕೆಯ ಅತ್ತೆ-ಮಾವ ಅವಕಾಶ ಕೊಡಲಿಲ್ಲವೆಂದು ಅವರು ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದರು. ಅಮಲಾ ಪೌಲ್ ಅವರು ಅತ್ತೆ-ಮಾವನೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಈ ಬಗ್ಗೆ ಎ.ಎಲ್.ವಿಜಯ್ ತಂದೆ ಸ್ವತಃ ನಿರ್ಮಾಪಕರೂ ಆಗಿರುವ ಎ.ಎಲ್.ಅಜಗಪ್ಪನ್ ಮಾತನಾಡಿದ್ದಾರೆ.

''ಅಮಲಾ ಪೌನ್ ಅನ್ನು ಮದುವೆಯಾಗಿ ಮಗನ ಜೀವನ ಹಾಳಾಯ್ತು''

''ಅಮಲಾ ಪೌನ್ ಅನ್ನು ಮದುವೆಯಾಗಿ ಮಗನ ಜೀವನ ಹಾಳಾಯ್ತು''

ಅಮಲಾ ಪೌಲ್ ಅನ್ನು ಮದುವೆಯಾಗಿ ನನ್ನ ಮಗನ ಜೀವನ ಹಾಳಾಯಿತು. ಆಕೆ ನನ್ನ ಮಗನ ಜೀವನವನ್ನು ಹಾಳು ಮಾಡಿದಳು ಎಂದು ನೋವಿನಿಂದ ಹೇಳಿದ್ದಾರೆ. ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನಮ್ಮ ಬಳಿ ಹೇಳಿದ್ದ ಅಮಲಾ ನಂತರ ಮದುವೆಯಾದ ಕೂಡಲೇ ಪಸಂಗ-2 ಮತ್ತು ವಡಾಚೆನ್ನೈ ಸಿನಿಮಾ ಒಪ್ಪಿಕೊಂಡರು ಎಂದು ನಿರ್ಮಾಪಕ ಅಜಗಪ್ಪನ್ ಹೇಳಿದ್ದಾರೆ.

ದಿನವೂ ಇದೇ ಕಾರಣಕ್ಕೆ ಜಗಳವಾಗುತ್ತಿತ್ತು

ದಿನವೂ ಇದೇ ಕಾರಣಕ್ಕೆ ಜಗಳವಾಗುತ್ತಿತ್ತು

ವಿಜಯ್ ಗೂ ಅಮಲಾ ಪೌಲ್ ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ, ಅಮಲಾ ಪೌಲ್ ಪೋಷಕರು ಹೇಳಿದರೂ ಸಹ ಅವರ ಮಾತೂ ಆಕೆ ಕೇಳಲಿಲ್ಲ. ಇದೇ ವಿಷಯಕ್ಕೆ ದಿನವೂ ಜಗಳವಾಗುತ್ತಿತ್ತು, ಕೊನೆಗೆ ನನ್ನ ಮಗನ ಆರೋಗ್ಯ ಮತ್ತು ಭವಿಷ್ಯತ್ತಿನ ಬಗ್ಗೆ ಯೋಚಿಸಿ ವಿಚ್ಛೇಧನ ನಿರ್ಣಯಕ್ಕೆ ಬರಬೇಕಾಯಿತು ಎಂದು ಅಜಗಪ್ಪನ್ ಹೇಳಿದ್ದಾರೆ.

ಭವೀಂದರ್ ಅನ್ನು ಗುಟ್ಟಾಗಿ ಮದುವೆಯಾದ ಅಮಲಾ

ಭವೀಂದರ್ ಅನ್ನು ಗುಟ್ಟಾಗಿ ಮದುವೆಯಾದ ಅಮಲಾ

ವಿಜಯ್ ಜೊತೆಗೆ ವಿಚ್ಛೇಧನ ಪಡೆದ ಬಳಿಕ ಅಮಲಾ ಪೌಲ್ ಹಾಡುಗಾರ ಭವಿಂದರ್ ಸಿಂಗ್ ನನ್ನು ಗುಟ್ಟಾಗಿ ಮದುವೆಯಾಗಿದ್ದಾರೆ. ಇನ್ನು ನಿರ್ದೇಶಕ ವಿಜಯ್, ಪೋಷಕರ ಇಚ್ಛೆಯಂತೆ ಚೆನ್ನೈ ಮೂಲದ ವೈದ್ಯೆಯೊಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸಿದ್ದಾರೆ.

More from Filmibeat

English summary
Actress Amala Paul spoiled my son AL Vijay's life said his father and producer AL Azagappan. Amala Paul and AL Vijay married and took divorce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X